ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಕಾರ್ಯಾಗಾರ

September 29, 2020
2:51 PM
ವಿವೇಕಾನಂದ ವಿದ್ಯಾವರ್ಧಕ ಸಂಘದ  ವತಿಯಿಂದ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರುತ್ತಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2020” ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾ ಭಾರತಿ ಸಹಯೋಗದೊಂದಿಗೆ  ವಿವೇಕಾನಂದ ಪದವಿ ಕಾಲೇಜಿನ ಸುವರ್ಣಮಹೋತ್ಸವ ಸಭಾಂಗಣದಲ್ಲಿ ನಡೆಯಿತು.

Advertisement
Advertisement
Advertisement

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ “ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ನೀತಿ ಇದಾಗಿದ್ದು, ಮಗುವಿನಲ್ಲಿ ಗುಣಾತ್ಮಕತೆ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತದೆ ಎಂದರು.

Advertisement
‘ಯಾಕೆ’ ಎನ್ನುವ ಪ್ರಶ್ನಾರ್ಥಕ ಮನೋಭಾವಕ್ಕಿಂತಲೂ ‘ಹೇಗೆ ಅಲೋಚಿಸಬೇಕು’ ಎಂಬ ಕ್ರೀಯಾತ್ಮಕ ಚಿಂತನೆಯನ್ನು ಬಾಲ್ಯದಿಂದಲೇ ಬೆಳೆಸಲಾಗುತ್ತದೆ. ಮಗುವಿನ ಕಲಿಕೆ ಕೇವಲ ಉದ್ಯೋಗ ಮತ್ತು ಹಣ ಸಂಪಾದನೆಗೆ ಸೀಮಿತವಾಗಿರದೆ, ಕೌಶಲ್ಯವನ್ನು ಒಡಮೂಡಿಸುವ ಕಾರ್ಯವನ್ನು ಯೋಜನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಹೊಂದಿದೆ. ಭಾರತೀಯರಾದ ನಾವೆಲ್ಲ ಹೆಮ್ಮ ಮತ್ತು ಗರ್ವದಿಂದ ಈ ನೀತಿಯನ್ನು ಸ್ವೀಕರಿಸಿ ಒಂದಾಗಿ ಕಾರ್ಯನಿರ್ವಹಿಸೋಣ ಎಂದು ಡಾ. ಪಿ. ಎಸ್. ಯಡಪಡಿತ್ತಾಯ ಹೇಳಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ  ಅರುಣ್ ಶಹಾಪುರ “ಮಗುವಿಗೆ ಮಾತೃ ಭಾಷೆ, ಆಡು ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವುದು ಹೊಸ ಶಿಕ್ಷಣ ನೀತಿಯ ಆಶವಾಗಿದೆ, ಶಿಕ್ಷಣ ವ್ಯವಸ್ಥೆಗೆ ಭ್ರಷ್ಟಚಾರ ಇತ್ಯಾದಿಗಳಿಂದ ಮುಕ್ತಿ ನೀಡಿ, ಅಲ್ಲಿ ಶೈಕ್ಷಣಿಕ ವಿಷಯಗಳ ಬಲವರ್ಧನೆಗೆ ಬೇಕಾದ ವಾತಾವರಣವನ್ನು ಈ ನೀತಿಯ ಮೂಲಕ ಸೃಷ್ಟಿಲಾಗುತ್ತಿದೆ. 1ನೇ ಹಂತ ಪೂರ್ವ ಪ್ರಾಥಮಿಕದ ಮೂರು ವರ್ಷಗಳು, ಒಂದನೆ ತರಗತಿ & ಎರಡನೆ ತರಗತಿ, 2ನೇ ಹಂತ ಮೂರರಿಂದ ಐದನೆ ತರಗತಿ, 3ನೇ ಹಂತ ಆರರಿಂದ ಎಂಟನೆ ತರಗತಿ, 4ನೇ ಹಂತ ಎಂಟರಿಂದ ಹನ್ನೆರಡನೆ ತರಗತಿ, ಹೀಗೆ 5+3+3+4 ಹಂತಗಳಲ್ಲಿ ಮೂರನೆ ವಯಸ್ಸಿನಿಂದ 18ನೆ ವಯಸ್ಸಿನವರೆಗಿನ ಕಡ್ಡಾಯ ಶಿಕ್ಷಣವಿರುತ್ತದೆ. ಆರನೆ ತರಗತಿಯಿಂದ ವಿದ್ಯಾರ್ಥಿ ಪಠ್ಯದ ಜೊತೆಗೆ ತನಗಿಷ್ಟವಾದ ಒಂದು ಸ್ಥಾನೀಯ ಕೌಶಲ್ಯ ಅಧ್ಯಯನ ಮಾಡಬಹುದಾಗಿದೆ. ಬದಲಾದ ಸಂದರ್ಭದಲ್ಲಿ ಶಿಕ್ಷಕರಿಗೆ ಬೇಕಾದ ತರಬೇತಿ ನೀಡಲು ಸರಿಯಾದ ಯೋಜನೆಯನ್ನು ನೀತಿಯಲ್ಲಿ ಹೇಳಲಾಗಿದೆ. ಶಾಲೆಗಳು ತಮ್ಮ ಗುಣಾತ್ಮಕತೆ ಹೆಚ್ಚಿಸಿಕೊಳ್ಳುವ ಉದ್ಧೇಶದಿಂದ ‘ಶಾಲಾ ಸಂಕುಲಗಳ’ ರಚನೆ ಸೇರಿದಂತೆ ಅನೇಕ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಮತ್ತು ಬೆಳವಣಿಗೆಗೆ ಶಿಕ್ಷಕರು ತೆರೆದುಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಸರಿಯಾದ ತಯಾರಿ ಮಾಡಿಕೊಳ್ಳಬೇಕು” ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ, ಮಣಿಪಾಲ ತಾಂತ್ರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕರುಣಾಕರ್ ಈಗಿರುವ ದೇಶದ ಉನ್ನತ ಶಿಕ್ಷಣದ ಸ್ಥಿತಿಯನ್ನು ಸಭೆಯ ಮುಂದಿಟ್ಟರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ “ಮಾತೃಭಾಷಾ ಶಿಕ್ಷಣವೂ ಮಗುವಿನ ಭಾವನೆಯನ್ನು ಅರಳಿಸುತ್ತದೆ, ನಮಗೆ ಅಮೇರಿಕಾ, ಜಪಾನ್, ರಷ್ಯಾಗಳನ್ನು ನಾವು ಉದಾಹರಿಸಬೇಕಿಲ್ಲ. ನಮ್ಮ ದೇಶದ ಜ್ಞಾನ ಮತ್ತು ಮಹತ್ತರ ಸಾಧನೆಗಳು ಜಾಗೃತವಾದರೆ ನಾವು ವೃಭವವನ್ನು ಕಾಣುತ್ತೇವೆ. ಆ ಹಿನ್ನಲೆಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ – 2020’ ಮಹತ್ತರ ಕೊಡುಗೆ ನೀಡುವಂತಾಗಲಿ” ಎಂದರು.

ಮುಖ್ಯ ಅತಿಥಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ  ಹರ್ಷ ನಾರಾಯಣ, ವಿದ್ಯಾಭಾರತಿಯ ರಾಜ್ಯ ಕಾರ್ಯದರ್ಶಿ ವಸಂತ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ  ಕೃಷ್ಣ ಭಟ್ ಸ್ವಾಗತಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗ ಪ್ರಮುಖ್  ಕೇಶವ ಬಂಗೇರಾ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror