“ಅಡಿಕೆ ಹಾನಿಕಾರಕ” ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯಬಹುದು…!

January 2, 2026
11:06 AM

ಅಂದೊಮ್ಮೆ ಕೆಂಪಡಿಕೆ ಕ್ವಿಂಟಾಲ್ ಗೆ ತೊಂಬತ್ತು ಸಾವಿರದ ಗಡಿ ತಲುಪಿ ಇನ್ನೇನು “ಲಕ್ಷ” ಮುಟ್ಟಿತು ಎನ್ನುವಾಗ ಅಡಿಕೆ ದಲ್ಲಾಳಿಗಳು ಶ್ರೀಲಂಕಾ ಸಿಪ್ಪೆಗೋಟು (ನಲವತ್ತು ಕೆಜಿ ಬ್ಯಾಗ್ – ಇದರಲ್ಲಿ ಶ್ರೀಲಂಕಾ ಅಡಿಕೆ ಎಂದು ನಮೂದಾಗಿರುತ್ತಿತ್ತು) ಅಡಿಕೆ ಭಾರತಕ್ಕೆ ತಂದು ಇಲ್ಲಿ ಸುಲಿಸಿ ಅದಕ್ಕೆ ಸಿಮೆಂಟ್ ಕಾವಿ ಹಾಕಿ ಕಾಂಕ್ರೀಟ್ ಮಿಕ್ಸರ್ ನಲ್ಲಿ ತಿರುಗಿಸಿ ಕೆಂಪು ಮಾಡಿ ಅದನ್ನು ಒಂದೋ ಎರಡೋ ಬಿಸಿಲು ಒಣಗಿಸಿ ಅದನ್ನು ಗುಟ್ಕಾ ತಯಾರಿಕ ಅಡಿಕೆ ಖರೀದಿದಾರ ರಿಗೆ ಮಾರಾಟ ಮಾಡಲಾಯಿತು.

Advertisement
Advertisement

ಈ ನಂತರದಲ್ಲೇ ಏಮ್ಸ್ ತಜ್ಞ ವೈದ್ಯರ ತಂಡ ಬಾಯಿ ಕ್ಯಾನ್ಸರ್ ನ ಮೂಲದ ಜಾಡು ಹಿಡಿದು ಹೊರಟಾಗ ಮೊಟ್ಟಮೊದಲ ಬಾರಿಗೆ ಗುಟ್ಕಾದ ಮೂಲಾಧಾರದ ಕಚ್ಚಾವಸ್ತು “ಅಡಿಕೆ” ಬುಡಕ್ಕೆ ಬಂತು. ಬಹುಶಃ ಆಗಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಟೀಮ್ ಈ ಬಗ್ಗೆ ಬೆನ್ನು ಬಿದ್ದಿತ್ತು. ಸಿಮೆಂಟ್ ಕಾವಿ ಬಣ್ಣವನ್ನು ಅಡಿಕೆ ಗೆ ಹಾಕಿದರೆ ಕ್ಯಾನ್ಸರ್ ಕಾರಕವಲ್ಲದೇ ಅಮೃತದಾಯಿನಿ ಆಗಲು ಸಾಧ್ಯವೇ‌…?

ಅಡಿಕೆ ಹಾನಿಕಾರಕ, ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಿಚಾರವನ್ನು ಅಡಿಕೆಯ ಪ್ರಮುಖ ಖರೀದಿದಾರರೇ ಪ್ರತಿ ವರ್ಷವೂ ಅಡಿಕೆ ಸುಗ್ಗಿಯ ಸಂಧರ್ಭದಲ್ಲಿ ಹರಿಯ ಬಿಟ್ಟು ಅಡಿಕೆ ಗೆ ಬೆಲೆ ಕುಸಿಯುವಂತೆ ಮಾಡುತ್ತಿದೆ. ಎಲ್ಲಾ ಅಡಿಕೆಯೂ ಕ್ಯಾನ್ಸರ್ ಕಾರಕವೇ..?.  ಆಜೀವ ಪರ್ಯಂತ ಎಲೆ ಅಡಿಕೆ ಜಗಿದು ನೂರು ವರ್ಷಗಳ ಕಾಲ ಅತ್ಯಂತ ಆರೋಗ್ಯವಾಗಿ ಬಾಳಿ ಬದುಕಿದ್ದಾರೆ. ಒಂದಡಿಕೆಯೂ ತಿನ್ನದ ಸಿಗರೇಟು , ಹೊಗೆಸೊಪ್ಪು ಯಾವುದೂ ಮುಟ್ಟದ ಅನೇಕರಿಗೆ ಬಾಯಿ ಕ್ಯಾನ್ಸರ್ ಬಂದಿಲ್ಲವೇ…?

ಅಡಿಕೆ ಬಗ್ಗೆ ಸಂಶೋಧನೆ ಮಾಡುವಾಗ ಮಲೆನಾಡು ಮತ್ತು ಕರಾವಳಿಯ ಸಾಂಪ್ರದಾಯಿಕ ಸಂಸ್ಕರಣೆಯ ಅಡಿಕೆಯನ್ನು ಪ್ರತ್ಯೇಕಿಸಿ ಅಧ್ಯಯನ ಮಾಡಿ ನೋಡಬೇಕು.  ಇವತ್ತು ಮನುಷ್ಯ ತಿನ್ನುವ ಎಲ್ಲಾ ಆಹಾರ ವಸ್ತುಗಳಲ್ಲೂ ಕ್ಯಾನ್ಸರ್ ಕಾರಕ ಅಂಶಗಳು ಖಂಡಿತವಾಗಿಯೂ ಕಾಣಸಿಗುತ್ತದೆ.
ಈ ಬಗ್ಗೆ ಸಂಶೋಧನೆ ಮಾಡಿದಲ್ಲಿ ಬಹುಶಃ ಮನುಷ್ಯನಿಗೆ ತಿನ್ನಲು ಯಾವುದೇ ಆಹಾರೋತ್ಪನ್ನ ಲಭ್ಯವಾಗುವುದು ಅನುಮಾನ.

ಅಡಿಕೆ ಬಗ್ಗೆ ಸಿಪಿಸಿಆರ್ ಐ ಮತ್ತು ಕೆಲವು ತಜ್ಞ ಆಸಕ್ತ ಅಡಿಕೆ ಬೆಳೆಗಾರರ ಅಧ್ಯಯನ ಮತ್ತು ಅಪಾರ ಜ್ಞಾನ ನೋಡಿದಾಗ ಒಬ್ಬ ಸಾಮಾನ್ಯ ಅಡಿಕೆ ಬೆಳೆಗಾರನಾಗಿ ಈ ಅಧ್ಯಯನಕಾರರ ಬಗ್ಗೆ ಅತ್ಯಂತ ಹೆಮ್ಮೆಯಾಗುತ್ತದೆ. ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಅಡಿಕೆ ಬೆಳೆಯೇ ಈ ಹಳದಿಎಲೆ ರೋಗ ಮತ್ತು ಎಲೆಚುಕ್ಕಿ ಶಿಲೀಂಧ್ರ ಬಾಧೆಯ ಕಾರಣಕ್ಕೆ “ಅಡಕತ್ತರಿಯಲ್ಲಿ” ಇದೆ. ಬಹುಶಃ ಈ ವರ್ಷದ ಮಳೆಗಾಲವೇ ಇನ್ನೊಂದೆರೆಡು ವರ್ಷಗಳ ಕಾಲ ಮುಂದುವರಿದಿಲ್ಲ ಮಲೆನಾಡು ಕರಾವಳಿ ಅಡಿಕೆ ಬೆಳೆ ಸಂಪೂರ್ಣ ನಾಶವಾಗಬಹುದು. ಹಾಗಾಗದಿರಲಿ ಎಂದು ಬಯಸೋಣ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಆದರೆ, ಅಡಿಕೆ ಉತ್ಪತ್ತಿ ನೂರು ಭಾಗ ಎಂದರೆ ತೊಂಬತ್ತು ಭಾಗ ಉತ್ಪತ್ತಿ ಇವತ್ತು ಬಯಲು ಸೀಮೆಯ ಪ್ರದೇಶದ ಜಿಲ್ಲೆಯಲ್ಲಿದೆ. ಅಡಿಕೆ ಹಾನಿಕಾರಕ , ಅಡಿಕೆ ಕ್ಯಾನ್ಸರ್ ಕಾರಕ ಅಡಿಕೆ ಬೆಳೆ ಬ್ಯಾನ್ ಮಾಡಬೇಕು ಎಂದಾದಲ್ಲಿ ನಾವು ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರಿಗಿಂತ ದೊಡ್ಡ ಕಷ್ಟಕ್ಕೆ ಬೀಳುವುದು ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆವ ಬಯಲು ಸೀಮೆಯ ಅಡಿಕೆ ಬೆಳೆಗಾರರು.

ಬಹುಶಃ ಆ ಭಾಗದಲ್ಲಿ ಅಡಿಕೆ ಭವಿಷ್ಯದ ಬಗ್ಗೆ ಒಂದೇ ಒಂದು ಚಿಕ್ಕ ಮಟ್ಟದ ಚಿಂತನ ಮಂಥನವೂ ನೆಡೆದ ಮಾಹಿತಿ ಇಲ್ಲ…!. ನಮ್ಮ ತೋಟಗಾರಿಕಾ ಸಚಿವರಿಗೆ ವರ್ಷವೊಂದಕ್ಕೇ ಸುಮಾರು ಎರಡೂವರೆ ಸಾವಿರ ಕ್ವಿಂಟಾಲ್ ಅಡಿಕೆ ಆಗುತ್ತದೆ ಎಂಬ ಮಾಹಿತಿ ಇದೆ. ದಾವಣಗೆರೆ ಚಿತ್ರದುರ್ಗ ಭಾಗದ ರಾಜಕಾರಣಿಗಳು , ಉದ್ಯಮಿಗಳ ಬಳಿ ನೂರಾರು ಎಕರೆ ಅಡಿಕೆ ತೋಟಗಳಿವೆ. ಎಲೆಚುಕ್ಕಿ ಹಳದಿಎಲೆ ಅಡಿಕೆ ಕೊಳೆ ರೋಗವಿಲ್ಲದ ನೆಮ್ಮದಿಯ ಸಮೃದ್ಧ ಬೆಳೆ ಅಡಿಕೆ.. !. ಇಲ್ಲಿ ನಾವು ಮಲೆನಾಡು – ಕರಾವಳಿಯ ಅಡಿಕೆ ಬೆಳೆಗಾರರು ನಮ್ಮ ಬೆಳೆಯನ್ನು ಎಲೆಚುಕ್ಕಿ, ಹಳದಿಎಲೆ ,ಅಡಿಕೆ ಕೊಳೆ ರೋಗ , ಕಾಡು ಪ್ರಾಣಿಗಳ ಹಾವಳಿ ಎಲ್ಲದರ ನಡುವೆ ಅಡಿಕೆ ಕ್ಯಾನ್ಸರ್ ಕಾರಕ ಸಮಸ್ಯೆಗೂ ತಲೆಬಿಸಿ ಮಾಡಿಕೊಳ್ಳಬೇಕಿದೆ….!

ಒಬ್ಬೊಬ್ಬ ನಟರೂ ನೂರು ಕೋಟಿ ಕ್ಲಬ್ ಸಿನಿಮಾ ನಟರು. ನಾಲ್ಕಾರು ಸೂಪರ್ ಸ್ಟಾರ್ ಹಿಂದಿ ಚಿತ್ರ ನಟರನ್ನು ಗುಟ್ಕಾ ಜಾಹೀರಾತಿನಲ್ಲಿ ಬಳಸಿ ಕೊಂಡು ಇವರಿಗೆ ನೂರಾರು ಕೋಟಿ ಜಾಹೀರಾತು ನಟನೆಗೆ ನೀಡುವ ಗುಟ್ಕಾ ದೊರೆಗಳಿಗೆ ಅಡಿಕೆಯೇ ಪ್ರಮುಖ ಕಚ್ಚಾ ವಸ್ತು…?  ಒಂದೊಮ್ಮೆ ಅಡಿಕೆ ನಿಷೇಧವಾದರೆ ಇವರು ಗುಟ್ಕಾ  ಏನು ಹಾಕಿ ತಯಾರಿಸಿ ಮಾರಾಟ ಮಾಡ್ತಾರೆ.  ಇವತ್ತು ಗುಟ್ಕಾ ಸಹಸ್ರಾರು ಕೋಟಿ ಉದ್ಯಮ…!. ಅಡಿಕೆ ಕ್ಯಾನ್ಸರ್ ಕಾರಕ ವಿಚಾರದಲ್ಲಿ “ಗುಟ್ಕಾ” ದೊರೆಗಳೇಕೆ ಮೌನವಾಗಿದ್ದಾರೆ…?.

ಮಲೆನಾಡು ಕರಾವಳಿಯ ಸದ್ಯದ ಭೌಗೋಳಿಕ ಸಾಮಾಜಿಕ ಪರಿಸ್ಥಿತಿ ಯಲ್ಲಿ ಭವಿಷ್ಯದಲ್ಲಿ ಬಹಳಷ್ಟು ಕೃಷಿಕರು ಅಡಿಕೆ ಬೆಳೆ ಬೆಳೆಯಲಾರದಂತಾಗುತ್ತಾರೆ ಎನಿಸುತ್ತಿದೆ.‌ ಆದರೂ, ನಾವು ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಅತ್ಯಂತ ಭಾವನಾತ್ಮಕವಾಗಿ ಪೂಜನೀಯ ದೃಷ್ಟಿಯಿಂದ ಅಡಿಕೆಯನ್ನು ಶಾಪ ಮುಕ್ತ ಆರೋಪ ಮುಕ್ತವಾಗಿಸಲು ಶತ ಪ್ರಯತ್ನ ಮಾಡ್ತಿದ್ದೇವೆ….!.

ಅಡಿಕೆಯ ಖರೀದಿದಾರರು, ಅಡಿಕೆ ಮೌಲ್ಯವರ್ಧಕರು, ಬಯಲು ಸೀಮೆಯ ಸಾಂಪ್ರದಾಯಿಕೇತರ ಅಡಿಕೆ ಬೆಳೆಗಾರರು ಅಡಿಕೆ ಹಾನಿಕಾರಕ ಎಂಬ ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯ ಬಹುದು. ಅಡಿಕೆ ಉಳಿಯಲಿ… ಅಡಿಕೆ ಬೆಳೆಗಾರರು ಉಳಿದು ಬಾಳಲಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

In the course of researching arecanut, it is essential to examine the processed arecanut from Malenadu and the coastal region as distinct entities. Additionally, it is important to note that carcinogenic elements are present in various food items consumed by humans. A thorough investigation into this matter is warranted. Arecanut has a long history of use, which suggests it is unlikely to be a carcinogen.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror