ಸಾಧನೆಯ “ವೃಷ್ಠಿ” | ಕಾರ್ಗಿಲ್‌ ವಿಜಯ ದಿನದ ಗೌರವ | ಭಾರತೀಯ ಸೇನೆಯಿಂದ ನಡೆದ ಮಹಿಳಾ ಬೈಕ್‌ ರ್‍ಯಾಲಿಯಲ್ಲಿ ಕನ್ನಡತಿ | ನಾರಿಶಕ್ತಿಯಲ್ಲಿ ಸುಳ್ಯದ ವೃಷ್ಠಿ ಮಲ್ಕಜೆ |

July 26, 2024
12:06 AM
ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್ ಬೈಕ್ ರ್‍ಯಾಲಿಯಲ್ಲಿ ಸುಳ್ಯದ ವೃಷ್ಠಿ ಮಲ್ಕಜೆ ಭಾಗವಹಿಸಿದ್ದರು.

ಕಾರ್ಗಿಲ್‌ ವಿಜಯ ದಿವಸದ ಪ್ರಯುಕ್ತ ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್ ರ್‍ಯಾಲಿ ಈಚೆಗೆ ಆಯೋಜನೆಗೊಂಡಿತ್ತು. ಈ ಬೈಕ್ ರ್‍ಯಾಲಿಯಲ್ಲಿ ಸುಳ್ಯದ ಗುತ್ತಿಗಾರು ಗ್ರಾಮದ ಮಲ್ಕಜೆಯ ವೃಷ್ಠಿ ಅವರು ಭಾಗವಹಿಸಿದ್ದರು. ಸುಮಾರು 2000 ಕಿಮೀ ದೂರದ ಬೈಕ್‌ ಪ್ರಯಾಣ, ವಿಶ್ವದ ಅತೀ ಎತ್ತರದ ಮೋಟರೇಬಲ್‌ ಪ್ರದೇಶಕ್ಕೆ ತೆರಳಿದ್ದಾರೆ. ಕನ್ನಡ ನಾಡಿದ ಏಕೈಕ ಯುವತಿ ಈ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.………ಮುಂದೆ ಓದಿ……..

Advertisement

ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್ ಬೈಕ್ ರ್‍ಯಾಲಿ ಆಯೋಜಿಸಿತ್ತು. 2000  ಕಿ.ಮೀ. ದೂರ ಅತ್ಯಂತ ಕಡಿದಾಡ ಹಾಗೂ ಪ್ರಯಾಸದಾಯಕ ರಸ್ತೆಗಳಲ್ಲಿ ಈ ರ್‍ಯಾಲಿಯಲ್ಲಿ  ಆಯೋಜನೆಯಾಗಿತ್ತು. ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನವಾದ ಕಾರ್ಗಿಲ್‌ ವಿಜಯದ ದಿನಕ್ಕೆ 25 ವರ್ಷಗಳು ಸಂದಿವೆ. ಈ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆಯು  ಟಿವಿಎಸ್ ಮೋಟಾರ್ ಕಂಪೆನಿ ಜೊತೆಗೂಡಿ ನಾರಿ ಶಕ್ತಿ ಕಾರ್ಯಕ್ರಮದಡಿ 25 ಮಹಿಳಾ ಬೈಕರ್‌ಗಳ ವಿಶಿಷ್ಠ ರ್‍ಯಾಲಿ ಆಯೋಜಿಸಿತ್ತು.

ಬೈಕ್ ರ್‍ಯಾಲಿ

ಕರ್ನಾಟಕದಿಂದ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದರು. ಈ ಪೈಕಿ ಏಕೈಕ ಕನ್ನಡತಿ ಭಾಗವಹಿಸಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮಲ್ಕಜೆಯ ವೃಷ್ಠಿ. ಅವರು  ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಹಾಗೂ ಉಷಾ ಮಲ್ಕಜೆ ದಂಪತಿಯ ಪುತ್ರಿ.  ರ್‍ಯಾಲಿಯಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಅವರ ಸೇನಾ ಕುಟುಂಬದ ಮಹಿಳೆಯರು ಭಾಗವಹಿಸಿದ್ದು, ಸೇನಾ ಕುಟುಂಬದ ಹೊರತಾಗಿ ಭಾಗವಹಿಸಿದವರಲ್ಲಿ ವೃಷ್ಠಿ ಒಬ್ಬರಾಗಿದ್ದಾರೆ.

ವೃಷ್ಟಿ ಮಲ್ಕಜೆ

ಜು.4 ರಂದು ಹಿಮಾಚಲ ಪ್ರದೇಶದ ಲೇಹ್‌ನಿಂದ ಆರಂಭಗೊಂಡ ರ್‍ಯಾಲಿ ಲಡಾಕ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್ ಹುತಾತ್ಮರ ಸ್ಮಾರಕಕ್ಕೆ ತಲುಪಿತು. ಅತ್ಯಂತ ಕಡಿದಾಡ ರಸ್ತೆ, ದುರ್ಗಮ ಹಾದಿಯಲ್ಲಿ ನಡೆದ ಬೈಕ್ ಸವಾರಿಯಲ್ಲಿ ವೃಷ್ಠಿಯವರೂ ಪಾಲ್ಗೊಳ್ಳುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ. ಪ್ರಪಂಚದ ಅತ್ಯಂತ ಎತ್ತರದ ಬೈಕ್ ಪಾಸಿಂಗ್ ಪ್ರದೇಶಗಳಾದ ಕರದುಂಗ್‌ ಲಾ ಮತ್ತು ಓಮ್ಲಿಂಗ್ ಲಾನಂತಹ ಆಮ್ಲಜನಕದ ಕೊರತೆ ಇರುವ ರಸ್ತೆಯಲ್ಲೂ ಬೈಕ್‌ ನಲ್ಲಿ ಸಂಚರಿಸಲಾಗಿತ್ತು. ಡಾಮರು ಇಲ್ಲದ ರಸ್ತೆ, ಹೊಳೆ, ನದಿ ದಾಟಿ ಮುಂದೆ ಸಾಗಬೇಕಾಗಿತ್ತು. ಇದೆಲ್ಲಾ ಸವಾಲುಗಳನ್ನು ದಾಟಿ ವೃಷ್ಟಿ ಸಾಗಿದ್ದಾರೆ.

ದುರ್ಗಮ ರಸ್ತೆಯಲ್ಲಿ ಭಾರತೀಯ ಸೇನೆಯ ನೆರವಿನೊಂದಿಗೆ ಬೈಕ್ ರ್‍ಯಾಲಿ

ಎಸ್‌ಎಸ್‌ಎಲ್‌ಸಿವರೆಗೆ ಗ್ರಾಮೀಣ ಭಾಗದಲ್ಲಿಯೇ ಓದಿರುವ ವೃಷ್ಟಿ ನಂತರ ಪಿಯುಸಿ ಹಾಗೂ ನಂತರದ ಓದನ್ನು ನಗರ ಪ್ರದೇಶದಲ್ಲಿ ಮುಗಿಸಿ ಬೆಂಗಳೂರಿನ ಇ.ವೈ. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಟಿವಿಎಸ್ ರೇಸಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡಿದ್ದ ವೃಷ್ಠಿ ಅಲ್ಲಿಂದ ಈ ಅಪರೂಪದ ಅವಕಾಶ ಪಡೆದಿದ್ದರು.

ತನ್ನ ಬಾಲ್ಯದಿಂದಲೇ ವಾಹನ ಓಡಿಸಲು ವಿಶೇಷ ಆಸಕ್ತಿ ವಹಿಸಿದ್ದರು. ಬೈಕ್‌, ಕಾರು ಓಡಿಸುತ್ತಿದ್ದರು. ಬೆಂಗಳೂರಿನಲ್ಲಿ ಓದು ಆರಂಭಿಸುವ ವೇಳೆಗೆ ಬೈಕ್‌ ಓಡಿಸಲು ಆರಂಭಿಸಿದರು. ಬಳಿಕ ವಿವಿಧ ಬೈಕ್‌ ರೇಸ್‌ಗೂ ತೆರಳಿದ್ದರು. ಚೆನ್ನೈ ಸೇರಿದಂತೆ ಕೆಲವು ಕಡೆಗೆ ಬೈಕ್‌ ರೇಸಿಗಾಗಿ ತೆರಳಿದ್ದರು.ಟಿವಿಎಸ್‌ ಸಹಕಾರ ನೀಡಿತ್ತು.

ಇದೀಗ ಅತ್ಯಂತ ಅಪರೂಪದ ಅವಕಾಶವೊಂದರಲ್ಲಿ ಭಾಗವಹಿಸುವ ಮೂಲಕ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ ವೃಷ್ಠಿ.  ಪ್ರಪಂಚದ ಅತ್ಯಂತ ಎತ್ತರದ ಬೈಕ್ ಪಾಸಿಂಗ್ ಪ್ರದೇಶಗಳಾದ ಕರದುಂಗ್‌ ಲಾ ಮತ್ತು ಓಮ್ಲಿಂಗ್ ಲಾನಂತಹ ಆಮ್ಲಜನಕದ ಕೊರತೆ ಇರುವ ರಸ್ತೆಯಲ್ಲಿ ಓಡಿಸುವ ವಿಶೇಷ ಅನುಭವಗಳನ್ನು ಹಂಚಿಕೊಳ್ಳುವ ವೃಷ್ಠಿ, ಎತ್ತರಕ್ಕೆ ಹೋದಂತೆಯೇ ಆಮ್ಲಜನಕದ ಕೊರತೆ ನಮಗೆ ತಿಳಿಯುತ್ತದೆ, ವಾಹನ ಕೂಡಾ ನಿಧಾನವಾಗುತ್ತದೆ, ಅಲ್ಲಿ ಗಾಳಿ ಸರಿಯಾಗಿ ಸಿಗದೇ ಬೈಕ್‌ ಕೂಡಾ ವೇಗ ಕಡಿಮೆಯಾಗುತ್ತದೆ ಎನ್ನುತ್ತಾರೆ.

ನಮ್ಮ ಸೈನಿಕರು ದೇಶ ಕಾಯುವ ಸ್ಥಿತಿ ನಿಜಕ್ಕೂ ಗೌರವಪೂರ್ಣ. ಚಳಿಯ ನಡುವೆ ಎಲ್ಲಾ ಸಂಕಷ್ಟಗಳನ್ನು ಸಹಿಸಿಕೊಂಡು ದೇಶ ಕಾಯುತ್ತಾರೆ. ದೇಶದ ಗಡಿಯವರೆಗೂ ಸೈನಿಕರ ಜೊತೆ ತೆರಳಲು ಅವಕಾಶವಾಯ್ತು. ಇದೊಂದು ಅಪೂರ್ವ ಅವಕಾಶ ಎನ್ನುತ್ತಾರೆ ವೃಷ್ಟಿ.

ಗ್ರಾಮೀಣ ಭಾಗದ ಯುವತಿಯರಿಗೆ, ಮಹಿಳೆಯರಿಗೆ ಕೂಡಾ ಬೈಕ್‌, ಕಾರು ಸಹಿತ ವಾಹನ ಓಡಿಸಲು ಯಾವ ಹಿಂಜರಿಕೆಯೂ ಬೇಡ ಎನ್ನುವ ವೃಷ್ಠಿ, ಯಾರಿಗಾದರೂ ಯುವತಿಯರಿಗೆ ಬೈಕ್‌ ರೇಸಿಂಗ್‌ಗಳಲ್ಲಿ ಆಸಕ್ತಿ ಇದ್ದರೆ ನೆರವು ಮಾಡುವುದಾಗಿ ಹೇಳುತ್ತಾರೆ.

ಕಾರ್ಗಿಲ್ ವಿಜಯ್ ದಿವಸ್‌ನ ರಜತ್ ಜಯಂತಿ ಮಹೋತ್ಸವವನ್ನು ಆಚರಿಸುವ ಎಲ್ಲಾ ಬೈಕ್‌ ರ್‍ಯಾಲಿಯ 25 ಸವಾರರನ್ನು ಒಳಗೊಂಡ ಆಲ್ ವುಮೆನ್ ಬೈಕ್ ರ‍್ಯಾಲಿಗೆ ಲಡಾಖ್‌ನ ಗೌರವಾನ್ವಿತ  ಬಿ ಡಿ ಮಿಶ್ರಾ ಅವರು ಚಾಲನೆ ನೀಡಿದ್ದರು.‌ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ಸಂಕಲ್ಪವನ್ನು ಸ್ಮರಿಸಲು ಭಾರತೀಯ ಸೇನೆಯು ಯೋಜಿಸಿರುವ ಅನೇಕ ಕಾರ‍್ಯಕ್ರಮಗಳ ಭಾಗವಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಲೇಹ್‌ನಲ್ಲಿರುವ ಹಾಲ್ ಆಫ್ ಫೇಮ್‌ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್, ಅಗ್ನಿಶಾಮಕ ಮತ್ತು ಉಪಸ್ಥಿತಿಯಲ್ಲಿ ಸಮಾರಂಭ ನಡೆದಿತ್ತು.

ರ್‍ಯಾಲಿಯಲ್ಲಿ ಭಾರತದ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಮತ್ತು ಸಶಸ್ತ್ರ ಪಡೆಗಳ ಸೇವೆ ಸಲ್ಲಿಸುತ್ತಿರುವ ಮಹಿಳೆಯರು, ಸೇನೆಯಲ್ಲಿರುವವ ಪತ್ನಿ ಮತ್ತು ಟಿವಿಎಸ್ ಅಪಾಚೆ ಮತ್ತು ಟಿವಿಎಸ್ ರೋನಿನ್ ಮೋಟಾರ್‌ಸೈಕಲ್ ಚಾಲನೆ ಮಾಡುವ  ನಾಗರಿಕ ಉತ್ಸಾಹಿಗಳನ್ನು ಒಳಗೊಂಡಿತ್ತು.

12 ದಿನಗಳ ಅವಧಿಯಲ್ಲಿ ರ‍್ಯಾಲಿಯಲ್ಲಿ ಲಡಾಖ್‌ನ ಪೂರ್ತಿ 2000 ಕಿಮೀಗಳಷ್ಟು ದೂರ ಕ್ರಮಿಸಿದೆ. ರ‍್ಯಾಲಿಯಲ್ಲಿ ಸವಾರರು ಸಶಸ್ತ್ರ ಪಡೆಗಳ ತ್ಯಾಗವನ್ನು ಸ್ಮರಿಸಲು ಮತ್ತು ಲಡಾಖ್‌ನ ಯುಟಿಯಲ್ಲಿರುವ ಎಲ್ಲಾ ಯುದ್ಧ ಸ್ಮಾರಕಗಳಲ್ಲಿ ಗೌರವ ಸಲ್ಲಿಸಲು ಅವಕಾಶವನ್ನು ನೀಡಿತ್ತು. ಲಡಾಖ್‌ನಲ್ಲಿ ನಿರಾಶ್ರಿತ ಭೂಪ್ರದೇಶದಲ್ಲಿ ಸಾಗುವ , ರ‍್ಯಾಲಿಯು ಕಾರ್ಗಿಲಗ ಯುದ್ಧ ಸ್ಮಾರಕದಲ್ಲಿ ಮುಕ್ತಾಯಗೊಳ್ಳುವ ಮೊದಲು ವಿಶ್ವದ ಎರಡು ಅತಿ ಎತ್ತರದ ಮೋಟಾರು ಓಡಿಸಬಹುದಾದ ಕರದುಂಗ್‌ ಲಾ ಮತ್ತು ಉಮ್ಲಿಂಗ್ ಲಾ ಪಾಸ್‌ಗಳನ್ನು ದಾಟಿದೆ. ಈ ರ‍್ಯಾಲಿಯು ಯುವಜನರನ್ನು, ಅದರಲ್ಲೂ ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರನ್ನು,  ಸಂವಾದಗಳ ಮೂಲಕ ಪ್ರೇರೇಪಿಸಲು ಪ್ರಯತ್ನಿದೆ. ಇದರ ಜೊತೆಗೆ ನಾಗರಿಕ ಉದ್ಯಮ ಮತ್ತು ಭಾರತೀಯ ಸೇನೆಯ ನಡುವಿನ ಸಮನ್ವಯ, ಸಮನ್ವಯ ಮತ್ತು ಸಹಯೋಗವನ್ನು ಕೂಡಾ ಒತ್ತಿ ಹೇಳಿದೆ. ಕಳೆದ ವರ್ಷವೂ ಈ ರ್‍ಯಾಲಿ ನಡೆಸಲಾಗಿತ್ತು.

ಬೈಕ್ ರ್‍ಯಾಲಿಯ ನಾರಿ ಶಕ್ತಿ

Vrishti Malkaje from Sullia participated in the Indian Army 25 Women All Women Bike Rally on Kargil Victory Day. The event was organized in partnership with TVS. The bike rally successfully traversed the world’s highest mountain passes, such as Karadung La and Omling La, despite the challenging conditions of oxygen-deficient roads.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ
ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |
April 25, 2025
7:27 AM
by: ದ ರೂರಲ್ ಮಿರರ್.ಕಾಂ
ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |
April 24, 2025
9:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group