ಬೀದಿ ನಾಯಿ ದಾಳಿಗೆ ಬಲಿಯಾದ ಉದ್ಯಮಿ | ಸಾವು ಹೇಗೆ ಬೇಕಾದರೂ ಬಂದೀತು….! |

October 23, 2023
6:42 PM
ವಾಘ್ ಬಕ್ರಿ ಟೀ ಗ್ರೂಪ್‌ನ ನಿರ್ದೇಶಕ  ಪರಾಗ್ ದೇಸಾಯಿ ಅವರು ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟವರು.

ಬಹುದೊಡ್ಡ ಉದ್ಯಮಿಯೊಬ್ಬರು ಅಹಮದಾಬಾದ್‌ನಲ್ಲಿ ಬೀದಿ ನಾಯಿ ದಾಳಿಗೆ ಬಲಿಯಾಗಬಹುದೇ…? ಮನೆಯ ಹೊರಗೆ-ಒಳಗೆ ಸೆಕ್ಯುರಿಟಿ, ಅಲ್ಲಲ್ಲಿ ಜನ, ಸಾವಿರಾರು ಕೋಟಿ ರೂಪಾಯಿ ವಹಿವಾಟು..! ಇಷ್ಟೆಲ್ಲಾ ಇದ್ದರೂ ಬೀದಿ ನಾಯಿಯ ದಾಳಿಗೆ ಬಲಿ…!. ಹೌದು, ಸಾವು ಹೇಗೆ ಬೇಕಾದರೂ ಬಂದೀತು ಎನ್ನುವುದಕ್ಕೆ ಈ ಘಟನೆಯನ್ನು ಓದಿ…

Advertisement
Advertisement

ವಾಘ್ ಬಕ್ರಿ ಟೀ ಗ್ರೂಪ್‌ನ ನಿರ್ದೇಶಕ  ಪರಾಗ್ ದೇಸಾಯಿ ಅವರು ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟವರು. ಅಕ್ಟೋಬರ್ 15 ರಂದು ಬೆಳಗ್ಗೆ ಅವರ ಮನೆಯ ಹೊರಗೆ ವಾಕಿಂಗ್‌ ನಡೆಸುವ ವೇಳೆ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ಬಿದ್ದು ತಲೆಗೆ ಗಾಯವಾಗಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನುಅವರ ನಿವಾಸದ ಹೊರಗಿನ ಭದ್ರತಾ ಸಿಬ್ಬಂದಿ ಗಮನಿಸಿ ತಕ್ಷಣವೇ  ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ  ಅವರನ್ನು ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝೈಡಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ವೇಳೆ ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಭಾನುವಾರ ಮೃತಪಟ್ಟಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.

Advertisement

ಪರಾಗ್ ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವದೊಂದಿಗೆ, ಗ್ರೂಪ್‌ನ ಅಂತರರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದರು.

ಬಹುದೊಡ್ಡ ಉದ್ಯಮ : ಈ ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ಚಹಾ ಸಮೂಹದ ನಾಲ್ಕನೇ ತಲೆಮಾರಿನ ವಾಣಿಜ್ಯೋದ್ಯಮಿ ಪರಾಗ್ ದೇಸಾಯಿ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದರು. ಅವರು ಕಂಪನಿಯ ಉತ್ಪನ್ನಗಳ ಮಾರಾಟ  ಮಾರುಕಟ್ಟೆ ಮತ್ತು ರಫ್ತು ವಿಭಾಗಗಳನ್ನು ಮುನ್ನಡೆಸಿದರು.  ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನಿಂದ ಅವರ ಸಾಧನೆಗಾಗಿ  ಗೌರವಿಸಲಾಗಿತ್ತು. ಭಾರತದ ವಾಣಿಜ್ಯೋದ್ಯಮ ವಲಯದಲ್ಲಿ ಗಟ್ಟಿ ಧ್ವನಿಯಾಗಿ ಪರಾಗ್‌ ಬೆಳೆದಿದ್ದರು.

Advertisement

ನಾರಂದಾಸ್ ದೇಸಾಯಿ 1892 ರಲ್ಲಿ ವಾಘ್ ಬಕ್ರಿಯನ್ನು ಸ್ಥಾಪಿಸಿದ್ದರು. ಪ್ರಸ್ತುತ, ಇದು 50 ಮಿಲಿಯನ್ ಕಿಲೋಗಳಿಗಿಂತ ಹೆಚ್ಚು ಚಹಾವನ್ನು ವಿತರಿಸುತ್ತದೆ ಮತ್ತು ವಾರ್ಷಿಕ ಆದಾಯ 2,000 ಕೋಟಿ ರೂ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಛತ್ತೀಸ್‌ಗಢ, ಪಶ್ಚಿಮ ಉತ್ತರ ಪ್ರದೇಶ, ಗೋವಾ, ಪಂಜಾಬ್, ಚಂಡೀಗಢ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ  ಕಂಪನಿಯ ಉತ್ಪನ್ನ ಲಭ್ಯವಿದೆ. ಇತ್ತೀಚೆಗೆ ಬಿಹಾರ, ಜಾರ್ಖಂಡ್ ಮತ್ತು ಒಡಿಶಾಕ್ಕೂ ವಿಸ್ತರಿಸಿದೆ.

ನಾಯಿಗಳ ಕಾಟ ನಗರದಲ್ಲಿ ಹೇಗಿದೆ…? :  ಅಹಮದಾಬಾದ್‌ನಲ್ಲಿ ಪ್ರತಿ ಗಂಟೆಗೆ ಸರಾಸರಿ ಆರು ನಾಯಿ ಕಚ್ಚುವ ಪ್ರಕರಣ ದಾಖಲಾಗುತ್ತದೆ. ಕಳೆದ ತಿಂಗಳು ಅಸೆಂಬ್ಲಿಯಲ್ಲಿ ಮಂಡಿಸಲಾದ 2020 ರಿಂದ 2023 ರವರೆಗಿನ ಮೂರು ಆರ್ಥಿಕ ವರ್ಷಗಳ ಅಂಕಿಅಂಶಗಳನ್ನು ಉಲ್ಲೇಖಿಸಿ ಟೈಮ್ಸ್ ನೌ ವರದಿ ಮಾಡಿದೆ. ಅಹಮದಾಬಾದ್‌ ನಗರದಲ್ಲಿ ವರದಿಯಾದ ಕಡಿತಗಳ ಸಂಖ್ಯೆಯು 2020–21ರಲ್ಲಿ 46,436 , 2021–22ರಲ್ಲಿ 50,397 ಹಾಗೂ 2022–23ರಲ್ಲಿ 60,330 ಪ್ರಕರಣಗಳು ದಾಖಲಾಗಿದೆ.ಇಡೀ ರಾಜ್ಯದ ಅಂಕಿಅಂಶಗಳ ಪ್ರಕಾರ, ಒಟ್ಟು 12.55 ಲಕ್ಷ ನಾಯಿ ಕಡಿತ ಪ್ರಕರಣ ನಡೆದಿದೆ. ಗುಜರಾತ್‌ನಲ್ಲಿ, 2020 ಮತ್ತು 2023 ರ ನಡುವೆ ನಾಯಿ ದಾಳಿ ಎಂಟು ಸಾವುಗಳಿಗೆ ಕಾರಣವಾಗಿವೆ. ಇದೀಗ ದೊಡ್ಡ ಉದ್ಯಮಿಯೊಬ್ಬರೂ ನಾಯಿ ದಾಳಿಗೆ ಬಲಿಯಾಗಿದ್ದಾರೆ.

Advertisement

Parag Desai, the executive director of the Wagh Bakri Group, passed away on Sunday at a private hospital in Ahmedabad. He fell on the road after being pursued by stray dogs, which caused a brain haemorrhage.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28.09.2024 | ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಸಾಧ್ಯತೆ
September 28, 2024
12:16 PM
by: ಸಾಯಿಶೇಖರ್ ಕರಿಕಳ
ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಾಮೀಣ ಭಾಗಕ್ಕೆ ಹೆಮ್ಮೆಯ ಗರಿ |
September 27, 2024
9:56 PM
by: ದ ರೂರಲ್ ಮಿರರ್.ಕಾಂ
ಇಂಗುಗುಂಡಿ ನಿರ್ಮಿಸಿದ ಮಹಿಳಾ ತಂಡ | 6 ಮಂದಿ ಮಹಿಳೆಯರಿಂದ 236 ಕ್ಕೂ ಹೆಚ್ಚು ಇಂಗುಗುಂಡಿ |
September 27, 2024
8:24 PM
by: ದ ರೂರಲ್ ಮಿರರ್.ಕಾಂ
ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ
September 27, 2024
7:24 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror