ನಡೆಯಿರಿ ನಿಮ್ಮ ಆರೋಗ್ಯಕ್ಕಾಗಿ…. | ಸಾಧ್ಯವಾದಷ್ಟು ಹೆಚ್ಚು ನಡೆಯಿರಿ… ಕ್ರಿಯಾಶೀಲರಾಗಿರಿ… ಆರೋಗ್ಯದಿಂದಿರಿ… |

October 20, 2023
11:54 PM

ಪೂರ್ವಜರು ಮಣ್ಣಿನ ರಸ್ತೆಗಳಲ್ಲಿ ಮತ್ತು ಹೊಲ ಗದ್ದೆಗಳ ಬದುವುಗಳಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದರು(walking) ಮತ್ತು ಅವರು ಯಾವಾಗಲೂ ತುಂಬಾ ಸಕ್ರಿಯರಾಗಿರುತ್ತಿದ್ದರು.

Advertisement

ಆದರೆ ಈಗ ಪರಿಸ್ಥಿತಿ ಪೂರ್ಣ ಭಿನ್ನ – ಸ್ಟೈಲ್(style), ಫ್ಯಾಶನ್(fashion) ಹೆಸರಿನಲ್ಲಿ ಮನೆಯಲ್ಲೂ ಸಹ ಚಪ್ಪಲಿ(chappal) ಧರಿಸಿ ಓಡಾಡುತ್ತಿದ್ದಾರೆ. ಬೆಳಗ್ಗೆ ಹಾಸಿಗೆಯಿಂದ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಕಾಲಿಗೆ ಚಪ್ಪಲಿ ಇರಬೇಕು. ಇದರಿಂದ ಪಾದಗಳು ಸುಂದರವಾಗಿರುತ್ತವೆ ಎಂದು ಭಾವಿಸುತ್ತಾರೆ, ಆದರೆ ಅದು ಆರೋಗ್ಯದ(health) ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಮರೆಯುತ್ತಾರೆ. ಆರೋಗ್ಯಕ್ಕಿಂತ ಸೌಂದರ್ಯವೆ ಮುಖ್ಯವಲ್ಲವೇ!

ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳು:

  •  ದೇಹದ ಭಂಗಿ ಸರಿಯಾಗಿರುತ್ತದೆ
  • ತಾಳ್ಮೆ ಹೆಚ್ಚುತ್ತದೆ,
  • ಕೆಳ ಹೊಟ್ಟೆಯ ಮೇಲೆ ಒತ್ತಡದಿಂದ ಜೀರ್ಣಕ್ರಿಯೆಯು ಕ್ರಮಬದ್ಧವಾಗಿರುತ್ತದೆ
  • ಬರಿಗಾಲಲ್ಲಿ ನಡೆಯುವುದರಿಂದ ಸಣ್ಣ ಪುಟ್ಟ ಹರಳಿನಂತ ಕಲ್ಲುಗಳು ಪಾದಗಳನ್ನು ಒತ್ತಿಕೊಳ್ಳುವದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ
  • ಬಿಪಿ ನಿಯಂತ್ರಣದಲ್ಲಿರುತ್ತದೆ
  • ಮಾನವ ಪಾದಗಳಲ್ಲಿ  ನರ ತುದಿಗಳಿವೆ, ಪಾದರಕ್ಷೆಗಳ ದೀರ್ಘಾವಧಿಯ ಬಳಕೆಯು ಸೂಕ್ಷ್ಮ ನರಗಳನ್ನು ಹಾನಿಗೊಳಿಸುತ್ತದೆ. ಬರಿಗಾಲಿನಲ್ಲಿ ನಡೆಯುವುದರಿಂದ ಈ ನರಗಳು ಕೂಡ ಕ್ರಿಯಾಶೀಲವಾಗುತ್ತವೆ.
ವಯಸ್ಸಿಗೆ ಅನುಗುಣವಾಗಿ ಎಷ್ಟು ನಡೆಯಬೇಕು?
40 ವರ್ಷಕ್ಕಿಂತ ಕೆಳಗಿನವರು ಪ್ರತಿದಿನ ಕನಿಷ್ಠ 3.75 ಕಿ.ಮೀ ನಡೆಯಬೇಕು.
45 ರಿಂದ 50 ವರ್ಷ ವಯಸ್ಸಿನವರು ಪ್ರತಿದಿನ ಕನಿಷ್ಠ 3.5 ಕಿ.ಮೀ ನಡೆಯಬೇಕು.
50 ರಿಂದ 55 ವರ್ಷ ವಯಸ್ಸಿನ ಜನರು ಪ್ರತಿದಿನ ಕನಿಷ್ಠ 3.1 ಕಿ.ಮೀ ನಡೆಯಬೇಕು.
55 ರಿಂದ 60 ವರ್ಷ ವಯಸ್ಸಿನವರು ಪ್ರತಿದಿನ ಕನಿಷ್ಠ 3 ಕಿ.ಮೀ ನಡೆಯಬೇಕು.
60 ವರ್ಷ ಮೇಲ್ಪಟ್ಟವರು ಪ್ರತಿದಿನ ಕನಿಷ್ಠ 2.5 ಕಿ.ಮೀ ನಡೆಯಬೇಕು.
ಒಂದು ಸಮೀಕ್ಷೆಯ ಪ್ರಕಾರ ಪ್ರತಿ ವಾರ ಕನಿಷ್ಠ 2 ಗಂಟೆಗಳ ಕಾಲ ನಡೆಯುವವರು ಇತರರಿಗಿಂತ ಶೇ.40ರಷ್ಟು ಆರೋಗ್ಯವಂತರು ಎಂದು ದೃಢಪಟ್ಟಿದೆ.

ಸಾಧ್ಯವಾದಷ್ಟು ಹೆಚ್ಚು ನಡೆಯಿರಿ,,,,ಕ್ರಿಯಾಶೀಲರಾಗಿರಿ,,,,,,ಆರೋಗ್ಯದಿಂದಿರಿ,,,,,

ಬರಹ :
ನಟರಾಜ
(ವಾಟ್ಸ್ ಅಪ್ ಮೂಲಕ)

Ancestors used to walk barefoot on dirt roads and farm fields and were always very active. But now the situation is completely different - in the name of style and fashion, they wear slippers even at home. From getting out of bed in the morning to going to bed at night, the feet should have slippers. This makes the feet look beautiful, but forgets the fact that it has a bad effect on health. Isn't beauty more important than health!
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group