ಪೂರ್ವಜರು ಮಣ್ಣಿನ ರಸ್ತೆಗಳಲ್ಲಿ ಮತ್ತು ಹೊಲ ಗದ್ದೆಗಳ ಬದುವುಗಳಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದರು(walking) ಮತ್ತು ಅವರು ಯಾವಾಗಲೂ ತುಂಬಾ ಸಕ್ರಿಯರಾಗಿರುತ್ತಿದ್ದರು.
ಆದರೆ ಈಗ ಪರಿಸ್ಥಿತಿ ಪೂರ್ಣ ಭಿನ್ನ – ಸ್ಟೈಲ್(style), ಫ್ಯಾಶನ್(fashion) ಹೆಸರಿನಲ್ಲಿ ಮನೆಯಲ್ಲೂ ಸಹ ಚಪ್ಪಲಿ(chappal) ಧರಿಸಿ ಓಡಾಡುತ್ತಿದ್ದಾರೆ. ಬೆಳಗ್ಗೆ ಹಾಸಿಗೆಯಿಂದ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಕಾಲಿಗೆ ಚಪ್ಪಲಿ ಇರಬೇಕು. ಇದರಿಂದ ಪಾದಗಳು ಸುಂದರವಾಗಿರುತ್ತವೆ ಎಂದು ಭಾವಿಸುತ್ತಾರೆ, ಆದರೆ ಅದು ಆರೋಗ್ಯದ(health) ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಮರೆಯುತ್ತಾರೆ. ಆರೋಗ್ಯಕ್ಕಿಂತ ಸೌಂದರ್ಯವೆ ಮುಖ್ಯವಲ್ಲವೇ!
ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳು:
ವಯಸ್ಸಿಗೆ ಅನುಗುಣವಾಗಿ ಎಷ್ಟು ನಡೆಯಬೇಕು? 40 ವರ್ಷಕ್ಕಿಂತ ಕೆಳಗಿನವರು ಪ್ರತಿದಿನ ಕನಿಷ್ಠ 3.75 ಕಿ.ಮೀ ನಡೆಯಬೇಕು. 45 ರಿಂದ 50 ವರ್ಷ ವಯಸ್ಸಿನವರು ಪ್ರತಿದಿನ ಕನಿಷ್ಠ 3.5 ಕಿ.ಮೀ ನಡೆಯಬೇಕು. 50 ರಿಂದ 55 ವರ್ಷ ವಯಸ್ಸಿನ ಜನರು ಪ್ರತಿದಿನ ಕನಿಷ್ಠ 3.1 ಕಿ.ಮೀ ನಡೆಯಬೇಕು. 55 ರಿಂದ 60 ವರ್ಷ ವಯಸ್ಸಿನವರು ಪ್ರತಿದಿನ ಕನಿಷ್ಠ 3 ಕಿ.ಮೀ ನಡೆಯಬೇಕು. 60 ವರ್ಷ ಮೇಲ್ಪಟ್ಟವರು ಪ್ರತಿದಿನ ಕನಿಷ್ಠ 2.5 ಕಿ.ಮೀ ನಡೆಯಬೇಕು. ಒಂದು ಸಮೀಕ್ಷೆಯ ಪ್ರಕಾರ ಪ್ರತಿ ವಾರ ಕನಿಷ್ಠ 2 ಗಂಟೆಗಳ ಕಾಲ ನಡೆಯುವವರು ಇತರರಿಗಿಂತ ಶೇ.40ರಷ್ಟು ಆರೋಗ್ಯವಂತರು ಎಂದು ದೃಢಪಟ್ಟಿದೆ.
ಸಾಧ್ಯವಾದಷ್ಟು ಹೆಚ್ಚು ನಡೆಯಿರಿ,,,,ಕ್ರಿಯಾಶೀಲರಾಗಿರಿ,,,,,,ಆರೋಗ್ಯದಿಂದಿರಿ,,,,,
Ancestors used to walk barefoot on dirt roads and farm fields and were always very active. But now the situation is completely different - in the name of style and fashion, they wear slippers even at home. From getting out of bed in the morning to going to bed at night, the feet should have slippers. This makes the feet look beautiful, but forgets the fact that it has a bad effect on health. Isn't beauty more important than health!
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…