ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅಂಗಳದಲ್ಲಿ ಗುರುವಾರ ಬೆಳಿಗ್ಗೆ ನೂರಾರು ಮಂದಿ ಉದ್ಯಮಿಗಳು 5 ಕಿ.ಮೀ ನಡಿಗೆಯ ‘ವಾಕಥಾನ್’ನಲ್ಲಿ ಪಾಲ್ಗೊಂಡರು.ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿ ನಡೆಯುತ್ತಿರುವ ‘ಬಿಗ್ ಟೆಕ್ ಷೋ’ನ ಭಾಗವಾಗಿ ಬೆಳಿಗ್ಗೆ ಆಯೋಜಿಸಿದ್ದ ‘ವಾಕಥಾನ್’ಗೆ ಐ.ಟಿ ಬಿ.ಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.
ನಡಿಗೆಗೂ ಮುನ್ನ ಆವರಣದಲ್ಲಿ ಯೋಗಾಭ್ಯಾಸ, ವ್ಯಾಯಾಮ ಮಾಡಿದ ಉದ್ಯಮಿಗಳು ನಂತರ ದೊಡ್ಡ ಗಡಿಯಾರ, ಗಾಂಧಿ ವೃತ್ತ, ಚಿಕ್ಕ ಗಡಿಯಾರ ವೃತ್ತ, ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಅರಮನೆ ವರಾಹ ದ್ವಾರದವರೆಗೆ ಸಾಗಿದರು.
ಬ್ರಿಟಿಷ್ ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಮೈಸೂರು ಕ್ಲಸ್ಟರ್ ಐ.ಟಿ ಬಿ.ಟಿ ಇಲಾಖೆಯ ಇ.ವಿ.ರಮಣ ರೆಡ್ಡಿ, ನಿರ್ದೇಶಕರಾದ ಮೀನಾ ನಾಗರಾಜ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಾ.ಅಜಯ್ ಗರ್ಗ್ ಇದ್ದರು.