Media error: Format(s) not supported or source(s) not found
Download File: https://theruralmirror.com/wp-content/uploads/2024/08/456599289_525367019931459_5678852696876884866_n.mp4?_=1ನಿನ್ನೆಯಿಂದ ವಾಟ್ಸಾಪ್(Whats app) ಗುಂಪಿನಲ್ಲಿ ಉಡುಪಿಯಲ್ಲಿ(Udupi) ಬಾಳೆ ಕೊನೆ ದಿಂಡನ್ನ(Banana stem) ಹೆಚ್ಚಿ ಉಪ್ಪಿನಕಾಯಿ(Pickle) ಮಾಡುವ ಈ ವೀಡಿಯೋ ವೈರಲ್(Video Viral) ಆಗ್ತಿದೆ. ಏನೋ ಶಾಸ್ತ್ರಕ್ಕೆ ತಯಾರಿಸುತ್ತರಾದರೆ ಖಂಡಿತವಾಗಿಯೂ ತಯಾರಿಸಲಿ, ಪರವಾಗಿಲ್ಲ. ಅಲ್ಲಿ ಬಾಳೆಯ ಎಲ್ಲಾ ಭಾಗವನ್ನೂ ಬಳಸಿ ಖಾದ್ಯ(Food) ತಯಾರಿಸುವ ಶಾಸ್ತ್ರ ಸಂಪ್ರದಾಯ ಇರಬಹುದು. ಅವರು ಮಾಡಿಕೊಳ್ಳಲಿ ಬಿಡಿ.. ಬಂಧುಗಳೇ…
ದಯವಿಟ್ಟು ನೀವು ಪಟ್ಟಣದ(City) ಅಂಗಡಿಯಲ್ಲಿ ಹಣ್ಣಾದ ಬಾಳೆ ಕೊನೆ ತಂದು ಹಣ್ಣು ತೆಗದು ಬಾಳೆಗೊನೆ ದಿಂಡ್ ಹೆಚ್ಚಿ ಉಪ್ಪಿನಕಾಯಿ ಮಾಡೋ ಸಾಹಸ ಬೇಡ..
ನೀವು ಇತ್ತೀಚಿನ ವರ್ಷಗಳಲ್ಲಿ “ಅಂಗಡಿ ಬಾಳೆಗೊನೆಯ” ಬಾಳೆ ಹಣ್ಣಿನ ಸಿಹಿ ರುಚಿ ಗಮನಿಸಿದ್ದೀರ…? ದೊಡ್ಡ ದೊಡ್ಡ ಪಚ್ಚ ಬಾಳೆ ಹಣ್ಣು ಚಪ್ಪೆ ಚಪ್ಪೆ.. ಪುಟ್ಟ ಬಾಳೆ ಕರಬಾಳೆ ಹಣ್ಣು ಕೂಡ ಎಷ್ಟೇ ಮಾಗಿದರೂ ಚಪ್ಪೆ…!! ಏಕೆ ಬಾಳೆ ಹಣ್ಣು ರುಚಿ ಪರಿಮಳ ಇರೋಲ್ಲ…? ನಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ನಮ್ಮ ಸ್ವಂತ ತೋಟದಲ್ಲಿ “ಮಂಗನ ಕಾಟ ಪೂರ್ವ” (ಮಂ ಕಾ ಪೂ)ದಲ್ಲಿ ಸಾವಯವ ಮದ್ಯಮದಲ್ಲಿ ಬೆಳೆದು ಸ್ವಾಭಾವಿಕವಾಗಿ ಹಣ್ಣು ಮಾಡಿ ತಿಂದ ಬಾಳೆ ಹಣ್ಣಿನ ಸ್ವಾದ ರುಚಿ ಪರಿಮಳ ಈ ಅಂಗಡಿಯಲ್ಲಿ ನೇತಾಕಿದ ಬಾಳೆ ಹಣ್ಣಿನಲ್ಲಿ ಇರೋಲ್ಲ…!! ನೀವು ಜ್ಞಾಪಿಸಿ ಹೋಲಿಸಿ ಕೊಂಡು ನೋಡಿ.. ಏಕೆಂದರೆ ಬಹುತೇಕ ಬಾಳೆ ಬೆಳೆ ಕೃಷಿಕರು ಬಾಳೆ ಬೆಳೆಯನ್ನು ಸಾವಯವ ಮಾದರಿಯಲ್ಲಿ ಬೆಳೆಯೋಲ್ಲ ಮತ್ತು ಬಾಳೆ ಗೊನೆ ಮಂಡಿಯವರು ಬಾಳೆ ಕೊನೆಯನ್ನ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ.. ಈಗ ಬಾಳೆ ಕೊನೆಯ ಬಾಳೆ ಹಣ್ಣಿನ ಸಿಪ್ಪೆ ಮತ್ತು ಬಾಳೆ ಕೊನೆಯ ದಿಂಡು ಎಲ್ಲವೂ ವಿಷ ಪೂರಿತ…!!
ಒಬ್ಬ ದೊಡ್ಡ ಜ್ಯೋತಿಷ್ಯರ ಕಾರ್ಖಾನೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಕಾಯಿ ಬಾಳೆಗೊನೆಯನ್ನ ತಂದು ಅದನ್ನು ಇನ್ನೂರು ಲೀಟರ್ ನೀರನ ಡ್ರಂನಲ್ಲಿ ಅತ್ಯಂತ ಅಪಾಯಕಾರಿ ಕಳೆ ನಾಶಕ ರೌಂಡ್ ಅಪ್ ವಿಷವನ್ನು ಅದಕ್ಕೆ ಹಾಕಿ ಕದಡಿ ಅದರಲ್ಲಿ ಕಾಯಿ ಬಾಳೆ ಗೊನೆಯನ್ನ ನೆನಸಿ ಆ ಮೂಲಕ ಬಾಳೆಗೊನೆ ಹಣ್ಣು ಮಾಡಿ ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸಲಾ ಗಿತ್ತು. ಇದು ವಾಸ್ತವವಾಗಿ ನೆಡೆದ ಘಟನೆ. ಈ ವಿಚಾರ ತಿಳಿದ ನಂತರದಿಂದ ನಾನು ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣಾದು ಇದ್ದರೆ ಮಾತ್ರ ಹಣ್ಣು ತಿಂಥೇನೆ ಮತ್ತು ಸಿಪ್ಪೆ/ಹಣ್ಣನ್ನು ಜಾನುವಾರುಗಳಿಗೆ ಹಾಕುತ್ತೇವೆ.
ಬಂಧುಗಳೇ…,
ಬಾಳೆಗೊನೆ ಬೆಳೆಯಲಾಗದ ಆಸ್ತಿಕರು ಹಬ್ಬಕ್ಕಾಗಿ ಬಾಳೆ ಹಣ್ಣು ಬೇಕಂತಾದರೆ ನಿಮ್ಮ ನಂಬಿಕಸ್ಥ ಅಂಗಡಿಯಲ್ಲಿ ಬಾಳೆ ಹಣ್ಣು ತನ್ನಿ ಇಲ್ಲವಾದಲ್ಲಿ ಹಬ್ಬದ ಕೆಲವು ದಿನಗಳ ಮೊದಲು ಕಾಯಿ ಬಾಳೆಗೊನೆ ತಂದು ಮನೆಯಲ್ಲೇ ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣು ಮಾಡಿ ದೇವರಿಗೆ ಬಳಸಿ ನೀವೂ ತಿನ್ನಿ… ಹೀಗೆ ನಮಗೆ ಸಿಗುವ ಹಣ್ಣು ತರಕಾರಿಗಳ ಸಿಪ್ಪೆ ಯನ್ನು ಉಪ್ಪಿನಕಾಯಿ ಮಾಡುವುದೋ ಪಲ್ಯ ಮಾಡುವುದೋ ಮಾಡುವುದರ ಮೊದಲು ಈ ಕಲಿಯುಗ ಕಾಲದ ದುಷ್ ಪ್ರಯತ್ನಗಳಿರುತ್ತದೆ ಎಂಬುದನ್ನು ಜ್ಞಾಪಕ ದಲ್ಲಿಟ್ಟು ಕೊಳ್ಳಿ.. ಈ ವಿಷಮಯ ಜಗತ್ತಿನಲ್ಲಿ ಸಾವಯವ ಕೃಷಿಕರ ಕೃಷಿ ಉತ್ಪನ್ನ ಗಳನ್ನು ಬೆಲೆ ತುಸು ಹೆಚ್ಚಾದರೂ ಕೊಂಡು ಬಳಸಿ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಕೋರುತ್ತಿದ್ದೇನೆ.
ಉಪ್ಪಿನಕಾಯಿ ಮಾಡಲು ಎಂದಿನ ಮಾವಿನ ಕಾಯಿ, ಲಿಂಬೆಕಾಯಿ, ದುಡ್ಲೆ ಕಾಯಿ, ಕಂಚಿಕಾಯಿಯಂತಹ ಹುಳಿ ಕಾಯಿಗಳನ್ನ ಬಳಸಿ.. ಈ ಹಲಸಿನ ಹಣ್ಣು , ಕಿತ್ತಳೆ ಹಣ್ಣು , ಟೊಮ್ಯಾಟೊ, ಬೆಂಡೆ ಕಾಯಿ, ತೊಂಡೆ ಕಾಯಿಯಂತಹ ಹಣ್ಣು ತರಕಾರಿಯನ್ನ ಉಪ್ಪಿನಕಾಯಿ ತಯಾರಿಸಲು ಬಳಸ ಬೇಡಿ.. ಇಂತಹ ಒತ್ತಾಯದ ಪ್ರಯತ್ನಗಳನ್ನು ಇನ್ನಷ್ಟು ಕೃತಕ ರಾಸಾಯನಿಕ ಹಾಕಿಯೇ ಮಾಡಬೇಕಾಗುತ್ತದೆ.. ಇಂತಹ ಹೊಸ ರುಚಿ ಪ್ರಯತ್ನವನ್ನ ನಾವುಗಳು ದೂರದಿಂದ ನೋಡಿ ಸುಮ್ಮನಿರುವುದು ನಮ್ಮ ಆರೋಗ್ಯ ಮತ್ತು ಜಿಹ್ವೆಗೆ ಒಳ್ಳೆಯದು ಅಂತನ್ನಿಸುತ್ತದೆ. ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಬೇಡ ಎಂದು ನನ್ನ ಸಲಹೆ.