ಕೊಳವೆಬಾವಿಯಿಂದ ಜಲಧಾರೆ | ಎಡಮಂಗಲದಲ್ಲಿ ಕೃಷಿಕನಿಗೆ ಒಲಿದ ಜಲದೇವತೆ |

April 5, 2021
7:27 PM

ಅನೇಕ ಸಮಯಗಳಿಂದ ಕೃಷಿಗೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕನಿಗೆ ಜಲ ದೇವತೆ ಒಲಿದಿದ್ದಾಳೆ. ಕೃಷಿಕನ ಸಮಸ್ಯೆ ನೀಗಿಸಿ ಸಮೃದ್ಧ ಜಲರಾಶಿಯನ್ನೇ ಒದಗಿಸಿದ ಅಪರೂಪದ ಘಟನೆ ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದಲ್ಲಿ  ನಡೆದಿದೆ. ಇದೀಗ ಎಲ್ಲೆಡೆಯೂ ಈ ಬಗ್ಗೆ ಅಚ್ಚರಿ ಹಾಗೂ ಸಂತಸದ ವಾತಾವರಣ ಕಂಡುಬಂದಿದೆ.

ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದ ಅಂಜಿನಡ್ಕದ ಕೃಷಿಕ ಅಶೋಕ್‌ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಳವೆಬಾವಿ ತೆಗೆಸಲಾಗಿತ್ತು. 264 ಅಡಿ ಕೊರೆದಾಗ ಯಥೇಚ್ಚ ನೀರು ಲಭ್ಯವಾಗಿದೆ. ಇದೀಗ ಕೊಳವೆಬಾವಿಯಿಂದ ನೀರು ಧಾರೆಯಾಗಿ ಬರುತ್ತಿದೆ. ಎಪ್ರಿಲ್‌ ವೇಳೆಗೆ ಹರಿದು ಬಂದ ನೀರಿಗೆ ಕೃಷಿಕ ಅಶೋಕ್‌ ಸಂತಸ ಪಟ್ಟರೆ ಕೃಷಿಕ ವಲಯವು ಅಶೋಕ್‌ ಅವರ ಸಂತಸದಲ್ಲಿ ಭಾಗಿಯಾಗಿದೆ. ಕೃಷಿಕನಿಗೆ ಲಭ್ಯವಾದ ನೀರಿನಿಂದ ಸಮೃದ್ಧ ಕೃಷಿಯಾಗಲಿ ಎಂದು ಹಾರೈಸಿದ್ದಾರೆ.

 

ಅಶೋಕ್‌ ಅವರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿಗೆ ನೀರಿನ ಸಮಸ್ಯೆ ಇತ್ತು. ಸುತ್ತಲೂ ಗುಡ್ಡ ಪ್ರದೇಶವಾಗಿದ್ದರೂ ನೀರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕೊಳವೆಬಾವಿ ತೆಗೆಸಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು
April 2, 2026
1:52 PM
by: ಸಾಯಿಶೇಖರ್ ಕರಿಕಳ
ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror