ಜಲಸಂರಕ್ಷಣೆಗೆ ಒಂದು ಮಾದರಿ | ಎರಡು ಗಂಟೆ ಕೆಲಸದಲ್ಲಿ ಪುಟಾಣಿ ಕಟ್ಟ | ಬಾವಿ ನೀರು ಏರಿಕೆ |

Advertisement

ಬೇಸಗೆ ಆರಂಭವಾಯಿತು. ಕೆರೆ, ಬಾವಿಯಲ್ಲಿ  ನೀರಿನ ಮಟ್ಟ ಕಡಿಮೆಯಾಗುವ ಹೊತ್ತು ಆರಂಭವಾಯಿತು. ಈಗ ಜಲಸಂರಕ್ಷಣೆಯ ಪಾಠಗಳು ಅಗತ್ಯವಾಗಿದೆ. ಇದಕ್ಕೆ ಮಾದರಿಯಾಗಿ ಇಲ್ಲೊಂದು ಪುಟ್ಟ ಕಟ್ಟ ರಚನೆ ಮಾಡಿ ಓಡುವ ನೀರನ್ನು ನಿಲ್ಲುವಂತೆ ಮಾಡಿ ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಮಾದರಿಯೊಂದು ಇದೆ.

Advertisement

ಸುಳ್ಯ ತಾಲೂಕಿನ ಅಮರಮುಡ್ನೂರು  ಗ್ರಾಮದ ಕಟ್ಟದಮಜಲಿನ ಶಿವರಾಮ ಪೈಲೂರು ಅವರ  ಮನೆಯ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತದೆ. ಬಾವಿಯ  ತಳ ಭಾಗ 30 ಅಡಿ ದೂರದಲ್ಲಿ ಹರಿಯುವ ಸಣ್ಣ ತೋಡಿನ ಮಟ್ಟಕ್ಕೆ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ತೋಡಿನ ಹರಿವಿಗೆ ತಡೆಯೊಡ್ಡುವ ಯೋಚನೆ ಮಾಡಿದರು. ಆ ಕಟ್ಟದಲ್ಲಿ ನೀರು ಏರುವಂತೆ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ಒಂದಷ್ಟು ನೀರು ರಿಸರ್ವ್‌ ಆಗಿ ಉಳಿಯಿತು. ನೀರು ಬತ್ತು ಅವಧಿ ಮುಂದಕ್ಕೆ ಹೋಯಿತು.

Advertisement
Advertisement

Advertisement

ಈ ಪುಟ್ಟ ಕಟ್ಟ ರಚನೆಗೆ ಸರಳ ವಿಧಾನ. ಮೂವರು ಕೃಷಿ ಸಹಾಯಕರೊಂದಿಗೆ ಎರಡು ಗಂಟೆ ಕೆಲಸ. ಸುಮಾರು 20 ಗೊಬ್ಬರದ ಚೀಲಗಳಿಗೆ ತೋಡಿನ ಮಣ್ಣುಮಿಶ್ರಿತ ಮರಳು ತುಂಬಿ ಪೇರಿಸಿದ್ದರು. ಎದುರಿಗೆ ತುಂಡು ಕಲ್ಲುಗಳನ್ನು ಇಟ್ಟು ಮಣ್ಣು ತುಂಬಿ ಭದ್ರಪಡಿಸಿ , ಇನ್ನೊಂದು ಬದಿಗೆ ಹಳೆಯ ತೆಂಗಿನ ಮರದ ಬೊಡ್ಡೆಗಳನ್ನು ಜೋಡಿಸಿ ಪುಟಾಣಿ ಕಟ್ಟ ರೂಪುಗೊಂಡಿತು. ಈ ಕಟ್ಟದ ಮುನ್ನ, ಇನ್ನೊಂದು ಸಣ್ಣ ತಡೆ. ಅಲ್ಲಿಗೂ ತೆಂಗಿನ ಬೊಡ್ಡೆಗಳೇ ಆಧಾರ. ಈ ಪ್ರಯೋಗ ಬಾವಿಯಲ್ಲಿ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಬಹುದೆಂಬ ಆಶಾಭಾವ. ಪಕ್ಕದಲ್ಲಿರುವ ತೋಟಕ್ಕೂ ಪ್ರಯೋಜನ ಆದೀತು ಎಂದು ಹೇಳುತ್ತಾರೆ ಶಿವರಾಂ ಪೈಲೂರು.

Advertisement

ಈ ಮಾದರಿಗೆ ಪ್ರೇರಣೆಯಾದ್ದು ಸದಾ ನೀರೆಚ್ಚರ ಮೂಡಿಸುವುದರ ಜತೆಗೆ ಪ್ರೇರಣೆ ನೀಡುತ್ತಿರುವ ನೀರ ನೆಮ್ಮದಿಯತ್ತ ಪಡ್ರೆ ಎನ್ನುವ  ವಾಟ್ಸಪ್ ಗುಂಪು ಎಂದು ಹೇಳಲು ಮರೆಯುವುದಿಲ್ಲ ಶಿವರಾಮ ಪೈಲೂರು ಅವರು. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲಿ ಪುಟಾಣಿ ಕಟ್ಟಗಳ ರಚನೆ ಮಾಡುವ ಮೂಲಕ ಜಲಸಂರಕ್ಷಣೆ, ಹರಿಯುವ ನೀರಿನ ಬಳಕೆ,  ಒರತೆ, ಕೊಳವೆಬಾವಿ ನೀರನ್ನು ರಿಸರ್ವ್‌ ಆಗಿಡುವ ಪ್ರಯತ್ನ ಮಾಡಬಹುದು.

Advertisement
Advertisement

 

 

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಜಲಸಂರಕ್ಷಣೆಗೆ ಒಂದು ಮಾದರಿ | ಎರಡು ಗಂಟೆ ಕೆಲಸದಲ್ಲಿ ಪುಟಾಣಿ ಕಟ್ಟ | ಬಾವಿ ನೀರು ಏರಿಕೆ |"

Leave a comment

Your email address will not be published.


*