ಬರಿದಾಗುತ್ತಿದೆ ನೀರು….! | ಹಲವು ಕಡೆ ನೀರಿಗೆ ತತ್ವಾರ | ಬರಿದಾದ ಸುಳ್ಯದ ಪಯಸ್ವಿನಿ ಒಡಲು | ಕೃಷಿಗೆ ನೀರಿಲ್ಲ…! |

April 23, 2023
10:45 AM

ಬೇಸಗೆಯ ಕಾವು ಹೆಚ್ಚಾಗುತ್ತಿದೆ. ಮಳೆ ಸನಿಹಕ್ಕೆ ಬಂದರೂ ದೂರವಾಗುತ್ತಿದೆ. ಕ್ಷಣ ಕ್ಷಣಕ್ಕೂ ಹವಾಮಾನ ಬದಲಾಗುತ್ತಿದೆ ಎಂದು ಹವಾಮಾನ ಅಧ್ಯಯನಕಾರರು ಹೇಳುತ್ತಾರೆ. ಈ ನಡುವೆಯೇ ನೀರು ಬರಿದಾಗುತ್ತಿದೆ. ತೋಟಕ್ಕೆ ಬಿಡಿ, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಕಡೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸಾಗಾಟವಾಗುತ್ತಿದೆ. ತೋಟಕ್ಕೆ ನೀರಿಲ್ಲದೆ ಕೃಷಿ ಒಣಗಲು ಆರಂಭವಾಗಿದೆ. ಸುಳ್ಯದ ಪಯಸ್ವಿನಿ ನದಿಯ ನೀರು ಬರಿದಾಗಿದೆ, ಕೃಷಿ ಪಂಪ್‌ ಚಾಲೂ ಮಾಡದಂತೆ ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಿಪರೀತ ಬಿಸಿಲಿನ ವಾತಾವರಣ ಕಂಡುಬಂದಿದೆ.ಪ್ರತಿದಿನವೂ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಅಧಿಕವಾಗಿದೆ. ಯಾವತ್ತೂ ಈ ಉಷ್ಣತೆ ತಲಪಿದಾಗ ಪ್ರತೀ ವರ್ಷ ಮಳೆಯಾಗುತ್ತಿತ್ತು. ಸುಳ್ಯ ಹಾಗೂ ಮಲೆನಾಡು ತಪ್ಪಲು ಭಾಗಗಳಲ್ಲಿ  ಈ ಹೊತ್ತಿಗೆ ಕನಿಷ್ಟ ನಾಲ್ಕು-ಐದು ಮಳೆ ಆಗುತ್ತಿತ್ತು. ಈ ಬಾರಿ ಮಳೆಯಾಗದೆ ಹೊಳೆ, ಕೆರೆಗಳು ಮಾತ್ರವಲ್ಲ ಕೊಳವೆಬಾವಿಗಳು ಬತ್ತುತ್ತಿವೆ. ಅಂತರ್ಜಲ ಮಟ್ಟ ತಗ್ಗಿದೆ. ಇದೀಗ ಕುಡಿಯುವ ನೀರಿಗೂ ಹಲವು ಕಡೆ ತತ್ತ್ವಾರ ಆರಂಭವಾಗಿದೆ.ಇದೀಗ ಸುಳ್ಯದಲ್ಲಿ ಪಯಸ್ವಿನಿ ನದಿ ಬತ್ತಲು ಆರಂಭವಾಗಿದೆ. ಇದೀಗ ನಗರವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ . ಸುಳ್ಯ ನಗರಕ್ಕೆ ಕುಡಿಯವ ನೀರಿನ ಅಭಾವ ಕಾಡದಂತೆ ಸುಳ್ಯ ಕಲ್ಲು ಮುಟ್ಲು ಪಂಪ್ ಹೌಸ್ ನಿಂದ ಮೇಲೆ ನದಿ ಅಕ್ಕ ಪಕ್ಕದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ನಿಲುಗಡೆಗೆ ಸೂಚನೆ ನೀಡಲಾಗಿದೆ.

ಇತ್ತ ಕಡೆ ಕೃಷಿ ಭೂಮುಗಳೂ ಒಣಗಲು ಆರಂಭವಾಗಿದೆ. ನೀರಿಲ್ಲದೆ 15 ದಿನಗಳಾದ ತೋಟಗಳು ಒಣಗಲು ಆರಂಭವಾಗಿದೆ. ಅಡಿಕೆ ಬೆಳೆಗಾರರು ನಳ್ಳಿ ಬೀಳುವುದನ್ನು ನೋಡಬೇಕಾದ ಸ್ಥಿತಿ ಬಂದಿದೆ. ಕೆಲವು ಕಡೆ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದೆ. ಎರಡು ಗಂಟೆ ಕೂಡಾ ತೋಟಕ್ಕೆ ನೀರುಣಿಸಲು ಸಂಕಷ್ಟಪಡುತ್ತಿದ್ದಾರೆ.ಕೊಳವೆಬಾವಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕಾರಣ ಗುಡ್ಡ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲವಾದರೆ, ಕೆಲವು ಕಡೆ ಪಂಪ್‌ ಮತ್ತಷ್ಟು ಕೆಳಭಾಗಕ್ಕೆ ಇಳಿಕೆ ಮಾಡಲಾಗಿದೆ. ಈಗ  ಮಳೆ ಯಾವಾಗ ಆದೀತು ಎಂದು ನೋಡುತ್ತಿದ್ದಾರೆ. ಈ ಬಾರಿ ನೀರಿಲ್ಲದೆ ತೋಟವೂ ಒಣಗುತ್ತಿದೆ, ಕುಡಿಯಲೂ ನೀರಿಲ್ಲದೆ ಹಾಹಾಕಾರ ಪಡಬೇಕಾದ ಸ್ಥಿತಿ ಬಾರದಿದ್ದರೆ ಸಾಕು ಎಂಬ ಆತಂಕ ಎದುರಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು
July 28, 2026
12:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ
July 28, 2026
12:32 PM
by: ಸಾಯಿಶೇಖರ್ ಕರಿಕಳ
ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ
July 28, 2026
7:45 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ
July 27, 2026
11:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror