ಬಿಸಿಲ ಬೇಗೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಈ ಬಾರಿ ಸಂಕಷ್ಟ ರಾಜಧಾನಿ ಬೆಂಗಳೂರಿಗೆ. ಕುಡಿಯುವ ನೀರಿಗೆ ಸಂಕಷ್ಟವಾಗುತ್ತಿದೆ. ಈ ಬಾರಿ ಬೆಂಗಳೂರಿನಲ್ಲಿ ಜಲಮಂಡಳಿಗೆ ಸಂಕಷ್ಟವೇ ಸಂಕಷ್ಟ.ಈಗ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ನಗರದ ಒಂದೂವರೆ ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗೆ ಶತ ಪ್ರಯತ್ನ ನಡೆಸುತ್ತಿದೆ.
ನೀರಿಗಾಗಿ ರಾಜ್ಯದಲ್ಲಿ ಹಾಹಾಕಾರ ಶುರುವಾಗಿದೆ. ಬಹುತೇಕ ಎಲ್ಲಾ ಕಡೆಯೂ ನೀರಿನ ಸಮಸ್ಯೆ. ಅಂತರ್ಜಲ ಮಟ್ಟ ಕುಸಿತವಾಗಿದೆ.ಕೃಷಿಗೆ ನೀರಿನ ಸಮಸ್ಯೆ ಎಂದರು ಕೃಷಿಕರು ಹೇಳಿದರೆ, ಹಲವು ಕಡೆ ಕುಡಿಯುವ ನೀರಿಗೇ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲೂ ಯಥೇಚ್ಛವಾಗಿದ್ದ ನೀರು ಈಗ ಕಡಿಮೆಯಾಗತೊಡಗಿದೆ. ನಗರದ ಸಮಸ್ಯೆ ಕಠಿಣವಾಗಿದೆ. ನೀರಿಲ್ಲದೆ ದಿನ ಕಳೆಯುವುದೂ ಕಷ್ಟವೇ ಆಗಿದೆ. ಈಗೀಗ ಖರ್ಚುಗಳು ಹೆಚ್ಚಾಗುತ್ತಿದೆ. ನೀರಿನ ವೆಚ್ಚವೇ ನಗರದ ಆಡಳಿತಗಳಿಗೆ ಹೊರೆಯಾಗುತ್ತಿದೆ. ಬೆಂಗಳೂರು ಈಗ ಅದೇ ಸಮಸ್ಯೆ ಅನುಭವಿಸುತ್ತಿದೆ.
ಬೆಂಗಳೂರಿನ ಜಲಮಂಡಳಿಯು 10 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕಗಳನ್ನು ಹೊಂದಿದೆ. ಗ್ರಾಹಕರಿಂದ ಬಿಲ್ ರೂಪದಲ್ಲಿ ಸುಮಾರು 131 ಕೋಟಿ ರೂಪಾಯಿ ಪ್ರತಿ ತಿಂಗಳು ಸಂಗ್ರಹ ಮಾಡಲಾಗುತ್ತಿದೆ. ಈ ಪೈಕಿ 68 ಕೋಟಿ ರೂಪಾಯಿ ವಿದ್ಯುತ್ ಬಿಲ್‍ಗೆ ಪಾವತಿಯಾದರೆ 40 ಕೋಟಿಯಷ್ಟು ಮೊತ್ತ ಅಧಿಕಾರಿ ಸಿಬ್ಬಂದಿ ವೇತನಕ್ಕೆ ವ್ಯಯವಾಗುತ್ತಿದೆ. 10 ಕೋಟಿ ರೂಪಾಯಿ ಸಾಲ ಮರುಪಾವತಿಗಾಗಿ ಪ್ರತಿ ತಿಂಗಳು ಮೀಸಲಿಡಲಾಗಿದೆ. 15 ಕೋಟಿ ರೂಪಾಯಿ ಎಸ್ ಟಿಪಿಗಳ ನಿರ್ವಹಣೆಗೆ, 2 ಕೋಟಿ ರೂಪಾಯಿ ಆಡಳಿತ ವೆಚ್ಚ2.5 ಕೋಟಿ ರೂಪಾಯಿ ಅನ್ನು ನೀರಿನ ಸಂಸ್ಕರಣಾ ಘಟಕದ ನಿರ್ವಹಣೆಗೆ ಖರ್ಚು.ಇತರೆ ನಿರ್ವಹಣಾ ವೆಚ್ಚಕ್ಕೆ 7.5 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.ಹೀಗಾಗಿ ಈಗ ಆದಾಯಕ್ಕಿಂತ ಸುಮಾರು 15 ಕೋಟಿ ರೂಪಾಯಿ ಪ್ರತಿ ತಿಂಗಳು ವೆಚ್ಚ ಹೆಚ್ಚಾಗಿದೆ.
ನೀರು ಅತ್ಯಮೂಲ್ಯ ವಸ್ತುವಾಗಿದೆ. ಬಳಕೆಯಲ್ಲಿ ಮಿತಿ ಇರಲಿ, ಎಲ್ಲರಿಗೂ ನೀರು ಸಿಗುವಂತಾಗಲಿ. ಇದಕ್ಕಾಗಿ ಜಲಸಂರಕ್ಷಣೆಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಜನರೇ ಮಾಡಬೇಕಾದ ಅನಿವಾರ್ಯತೆ ಇದೆ. ಈ ಕೆಲಸ ಕೃಷಿಕರಿಂದ, ನಗರವಾಸಿಗಳಿಂದ ನಡೆಯಲಿದೆ.
Source : ಅಂತರ್ಜಾಲ