ಸಾಗರ ತಾಲೂಕಿನ ನೀಚಡಿಯಲ್ಲೊಂದು ವಿಶಿಷ್ಟ “ಕೆರೆ ಹಬ್ಬ”

March 24, 2025
7:25 AM
ಊರಲ್ಲಿ ಮಂದರ್ತಿ ಮೇಳದ ಹರಕೆಯಾಟ ಇದೆ ಬನ್ನಿ ಅಂತಲೋ , ಸತ್ಯನಾರಾಯಣ ಪೂಜೆ ಇದೆ ಅಂತಲೋ ಕರೆ ಮಾಡಿ‌ ಅಂತಹ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿ ಸತ್ಕರಿಸುವರ ನಡುವೆ ಊರ ಜನರ ಜೀವನಾಧಾರ ದ ಕೃಷಿಗೆ ನೀರಿನಾಸರೆ ನೀಡುವ ಕರೆಗೊಂದು ಹಬ್ಬ ಮಾಡುವ "ನಿಸರ್ಗದ ಪೂಜೆ " ಯ ಕಾರ್ಯಕ್ರಮ ಮಾಡುವುದು ಅತ್ಯಂತ ವಿಶೇಷ.

ನೀಚಡಿಯ ಅರವತ್ತು ಎಕರೆ ಅಡಿಕೆ ತೋಟದ ಕೋಗಿನ ತಲೆಯ ಮೇಲೆ ಒಂದು ನಾಲ್ಕೈದು ಎಕರೆ ವಿಸ್ತೀರ್ಣದ ಕೆರೆ ಒಂದು ಕಳೆದ ಹತ್ತು ವರ್ಷಗಳ ಹಿಂದೆ ಹೂಳು ತುಂಬಿತ್ತು. ನೀಚಡಿಯ ಈ ಅರವತ್ತು ಎಕರೆ ಜಮೀನಿನ ಒಡೆಯರ ಅಡಿಕೆ ತೋಟ ಏಪ್ರಿಲ್ ಮೇ ತಿಂಗಳಲ್ಲಿ ಒಣಗತೊಡಗಿತ್ತು. ಇದಾಗೋದಲ್ಲ ಎಂದು ಈ ಅಡಿಕೆ ತೋಟದ ಕೋಗಿನವರೆಲ್ಲಾ ಒಂದಾಗಿ ಈ ಶುಷ್ಕತೆಗೆ ಕಾರಣ ನಮ್ಮೂರ ಕೆರೆ ಒಣಗಿದ್ದು ಎಂಬುದನ್ನು ಕಂಡುಕೊಂಡು ಕೆರೆ ಹೂಳೆತ್ತುವ ತೀರ್ಮಾನಕ್ಕೆ ಬಂದರು.………ಮುಂದೆ ಓದಿ……..

ಆ ಕಾಲದಲ್ಲಿ ಸರ್ಕಾರ ಸಂಘ ಸಂಸ್ಥೆಗಳು ಕರ್ನಾಟಕ ಬ್ಯಾಂಕ್ ಎಲ್ಲಾ ಸೇರಿ ಇಪ್ಪತ್ತು ಲಕ್ಷ ದೇಣಿಗೆ ನೀಡಿದರೂ ಸಾಕಾಗದೇ ಮತ್ತೆ ಊರು ಮನೆ ಕೆರೆ ಪಾತ್ರದ ಅಡಿಕೆ ತೋಟದವರೆಲ್ಲ ಇನ್ನೂ ಇಪ್ಪತ್ಮೂರು ಲಕ್ಷ ಬಂಡವಾಳ ಹೂಡಿ ಕೆರೆ ಯನ್ನು ಸಜೀವ ಗೊಳಿಸಿ ಸಂಪೂರ್ಣಗೊಳಿಸಿದರು.  ಕಳೆದ ಎಂಟು ವರ್ಷಗಳಿಂದ ವರ್ಷಕ್ಕೊಮ್ಮೆ ಈ ತಿಂಗಳಲ್ಲಿ ನೀಚಡಿ ಗ್ರಾಮಸ್ಥರು ” ಕೆರೆ ಹಬ್ಬ ” ಮಾಡ್ತಾರೆ.  ಆ ದಿವಸದ ಟಾರ್ಗೆಟ್ ನಲ್ಲಿ ಕರೆಯ ಅಂಚನ್ನು ಒಪ್ಪ ಓರಣ ಮಾಡಿ ಊರವರು ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಸಂಭ್ರಮಿಸುತ್ತಾರೆ. ಶ್ರೀನಾಥ್ ಸರ್ ನನ್ನ ನಮ್ಮೂರ ಕರೆ ಹಬ್ಬ ಕ್ಕೆ ಬನ್ನಿ ಎಂದು ಕರೆದಾಗ ನನಗೆ “ಕರೆ ಹಬ್ಬ ” ಹೇಗೆ ಮಾಡ್ತಾರೆ… ಎಂಬ ಕುತೂಹಲ ಮತ್ತು  ಶ್ರೀನಾಥ್ ರ ಮೇಲಿನ ಅಭಿಮಾನಕ್ಕೆ ಹೋಗಿ ನೋಡಿದಾಗ ಒಂದು ಅಭೂತಪೂರ್ವ ಅನುಭವ ನನ್ನದಾಯಿತು.

ಊರಲ್ಲಿ ಮಂದರ್ತಿ ಮೇಳದ ಹರಕೆಯಾಟ ಇದೆ ಬನ್ನಿ ಅಂತಲೋ , ಸತ್ಯನಾರಾಯಣ ಪೂಜೆ ಇದೆ ಅಂತಲೋ ಕರೆ ಮಾಡಿ‌ ಅಂತಹ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿ ಸತ್ಕರಿಸುವರ ನಡುವೆ ಊರ ಜನರ ಜೀವನಾಧಾರ ದ ಕೃಷಿಗೆ ನೀರಿನಾಸರೆ ನೀಡುವ ಕರೆಗೊಂದು ಹಬ್ಬ ಮಾಡುವ “ನಿಸರ್ಗದ ಪೂಜೆ ” ಯ ಕಾರ್ಯಕ್ರಮ ಮಾಡುವುದು ಅತ್ಯಂತ ವಿಶೇಷ. ಇಡೀ ಕಾರ್ಯಕ್ರಮ ದಲ್ಲಿ ಊರವರೆಲ್ಲರ ಪ್ರೀತಿಯ ಆತಿಥ್ಯ , ಊರವರೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದ ರೀತಿ ಅತ್ಯಮೋಘ.

ನಾವು ಕೆರೆ ಹಬ್ಬ ಕ್ಕೆ ಕಾಲಿಡುತ್ತಿದ್ದಂತೆ  ಶೃತಿ ಶ್ರೀನಾಥ್ ರವರ ಸಿರಿಕಂಠ ದಲ್ಲಿ “ಕೋಟಿ ಕೋಟಿ ಮಹಾನಮನ ಮಹಾ ಗಣಪತಿ ” ಎಂಬ ಸುಶ್ರಾವ್ಯ ಗಾಯನ ನಮ್ಮ ಎದುರುಗೊಂಡಿತ್ತು.. ನೀಚಡಿಯವರ ಅದ್ಭುತವಾದ ಆತಿಥ್ಯ ಯಥೇಚ್ಛವಾಗಿ ಕುಡಿಯಬಹುದಾಗಿದ್ದ ಕಬ್ಬಿನ ಹಾಲು … ಮೆಣಸಿನಕಾಯಿ ಬೋಂಡ … ಎಲ್ಲಾ ಸೂಪರ್.  ನನ್ನಂಥ ಕಿರು ಬರಹಗಾರನನ್ನ ವೇದಿಕೆಗೆ ಕರಿಸಿ ಪರಿಚೆಯಿಸಿದ್ದಕ್ಕೆ ನಾನು ಶ್ರೀನಾಥ್ ಸರ್ ಗೆ ಆಭಾರಿ. ನನ್ನ ಬಂಧುವಾದ  ಪ್ರಕಾಶ್ ಶಾಸ್ತ್ರಿಗಳಿಗೂ , ಆಲೆಮನೆಯ ಆಯೋಜಕರಾದ ಎನ್ ಟಿ ಮಹಾಬಲೇಶ್ವರ ಅವರು ಮತ್ತು ನೀಚಡಿ ಟ್ರಸ್ಟ್ ಸೇರಿದಂತೆ ನೀಚಡಿಯ ಸಮಸ್ತ ಸಂಘ ಸಂಸ್ಥೆಗಳಿಗೆ ಈ ಕೆರೆ ಗೊಂದು ಹಬ್ಬವನ್ನು ಏರ್ಪಡಿಸಿ ಊರು ಪರ ಊರವರನ್ನೂ ಕರೆದು ಸಂಭ್ರಮಿಸಿ ಆತಿಥ್ಯ ಮಾಡಿದ್ದಕ್ಕಾಗಿ ಅನಂತಾನಂತ ಕೃತಜ್ಞತೆಗಳು.

ನೀಚಡಿ ಊರಿನವರ ಈ ನಿಸರ್ಗ ಪ್ರೀತಿಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನಾವು ನಮಗೆ ನೀರು ಆಸರೆ ಉತ್ತಮ ವಾತಾವರಣವನ್ನು ನೀಡುವ ಈ ಕರೆ , ಕಾಡು , ಮಳೆ , ಗಾಳಿಯನ್ನು ಪ್ರೀತಿಸುವ , ಪೂಜಿಸುವ ಕಾಯಕ ಮಾಡಿ ದ್ದಿದ್ದರೆ ಈ ಪರಿ ಅನಾವೃಷ್ಟಿ ಯನ್ನು ಅನುಭವಿಸುವ ದುಸ್ಥಿತಿಗೆ ಬರುತ್ತಿರಲಿಲ್ಲ.
ಇವತ್ತು ನೀಚಡಿಯ ಈ ಕರೆ ಕೋಗಿನ ಅಡಿಕೆ ತೋಟದವರು ಈ ಕರೆ ಉಳಿಸಿದ ಕಾರಣಕ್ಕೆ ತೋಟ ಇಂತಹ ಬಿರು ಬೇಸಿಗೆಯಲ್ಲೂ “ಹದವಾಗಿ ” ಸಮೃದ್ಧ ವಾಗಿದೆ ಎಂದು ಖುಷಿಯಿಂದ ಹೇಳಿ ಕೊಳ್ಳುತ್ತಾರೆ.

Advertisement

ನಮ್ಮ ಎಲ್ಲಾ ಊರಿನಲ್ಲಿ ಕರೆಗಳಿವೆ. ಬಹುತೇಕ ಕೆರೆಗಳು ಬೇಸಿಗೆಯಲ್ಲಿ ಆಟದ ಮೈದಾನವಿದ್ದಂತೆ. ಕರೆಯ ನೀರಿನಿಂದ ವರ್ಷ ಪೂರ್ಣ ಸಿಹಿ ನೀರು ನೀಡುತ್ತಿದ್ದ ಬಾವಿಗಳು ಬತ್ತಿ ಹೋಗಿದೆ. ನಮ್ಮ ಎಲ್ಲಾ ಊರಿನಲ್ಲೂ ಊರವರು ವಂತಿಗೆ ಎತ್ತಿ ದೇವಸ್ಥಾನ ನಿರ್ಮಾಣ ಮಾಡ್ತಾರೆ. ಮಾಡಬಾರದು ಅಂತಲ್ಲ ಆದರೆ ಊರವರು ಒಟ್ಟಾಗಿ ಹಣ ಹಾಕಿ ಇಂತಹ ಕೆರೆ , ಕಾಡು ಅಭಿವೃದ್ಧಿ ಮಾಡಿದರೆ ಆ ಊರಿನ ನೆಲ ಜಲ ವಾಯು ಸಮೃದ್ಧ. ನೀಚಡಿಯ ಕರೆ ಸಂಸ್ಕರಣೆ , ಈ ಅಗ್ಗಾರು ಬೇಸಿಗೆಯಲ್ಲೂ ತುಂಬಿದ ಕರೆ ‌. ನೀಚಡಿ ಯ ಬಂಧುಗಳ ಆತ್ಮ ವಿಶ್ವಾಸ ದ ಖುಷಿ.  ಕಾರ್ಯಕ್ರಮ ಮಾಡುವ ಸಡಗರ , ಕರೆ ಯ ಹಬ್ಬಕ್ಕೆ ಸೇರಿದ ಜನರ ಖುಷಿ ಎಲ್ಲವೂ ವಿಭಿನ್ನ ಚಿನ್ನ. ನೀಚಡಿ ಬಂಧುಗಳ ಈ ಕರೆ ಸಂಸ್ಕರಣೆ ಮತ್ತು ಕೆರೆ ಹಬ್ಬ ನಾಡಿನ ಇನ್ನಷ್ಟು ಊರಿನವರಿ ಸತ್ ಪ್ರೇರಣೆ ಯಾಗಲಿ.
ಕಾರ್ಯಕ್ರಮ ನೆಡೆಯುತ್ತಲೇ ಇತ್ತು.  ನೀಚಡಿಯ ಕರೆ ಅಂಗಳದಲ್ಲಿ ಜನ ಸೇರಿ ಸಂಭ್ರಮಿಸುತ್ತಲೇ ಇತ್ತು… ನೀಚಡಿ ಯ ಕೆರೆ ತಣ್ಣಗೆ ತನ್ನ ಹಬ್ಬವನ್ನು ಮನ ತುಂಬಿ ಸಿ ಕೊಂಡಂತಿತ್ತು.

ಕಾರ್ಯಕ್ರಮದ ನಂತರ ನೀಚಡಿ ಬಂಧುಗಳು ಕೆರೆ ಅಂಚಿನ ಎಲ್ಲ ತ್ಯಾಜ್ಯ ಗಳನ್ನು ತೆಗೆದು ಸ್ವಚ್ಛ ಗೊಳಿಸಿಯೇ ತಡ ರಾತ್ರಿ ಮನೆಗೆ ಮರಳುತ್ತಾರಂತೆ…!!
ಒಂದು ಊರು ಅದೆಷ್ಟೆಲ್ಲಾ ಸಕಾರಾತ್ಮಕ ಗುಣಗಳಿಂದ ಕೂಡಿದೆ ಎಂದೆನ್ನಿಸಿತು.  ಮ

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror