ಅನೇಕ ಸಮಯಗಳಿಂದ ಕೃಷಿಗೆ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಕೃಷಿಕನಿಗೆ ಜಲ ದೇವತೆ ಒಲಿದಿದ್ದಾಳೆ. ಕೃಷಿಕನ ಸಮಸ್ಯೆ ನೀಗಿಸಿ ಸಮೃದ್ಧ ಜಲರಾಶಿಯನ್ನೇ ಒದಗಿಸಿದ ಅಪರೂಪದ ಘಟನೆ ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದಲ್ಲಿ ನಡೆದಿದೆ. ಇದೀಗ ಎಲ್ಲೆಡೆಯೂ ಈ ಬಗ್ಗೆ ಅಚ್ಚರಿ ಹಾಗೂ ಸಂತಸದ ವಾತಾವರಣ ಕಂಡುಬಂದಿದೆ.
ಕಡಬ ತಾಲೂಕಿನ ಎಡಮಂಗಲ ಬಳಿಯ ಹೇಮಳದ ಅಂಜಿನಡ್ಕದ ಕೃಷಿಕ ಅಶೋಕ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಳವೆಬಾವಿ ತೆಗೆಸಲಾಗಿತ್ತು. 264 ಅಡಿ ಕೊರೆದಾಗ ಯಥೇಚ್ಚ ನೀರು ಲಭ್ಯವಾಗಿದೆ. ಇದೀಗ ಕೊಳವೆಬಾವಿಯಿಂದ ನೀರು ಧಾರೆಯಾಗಿ ಬರುತ್ತಿದೆ. ಎಪ್ರಿಲ್ ವೇಳೆಗೆ ಹರಿದು ಬಂದ ನೀರಿಗೆ ಕೃಷಿಕ ಅಶೋಕ್ ಸಂತಸ ಪಟ್ಟರೆ ಕೃಷಿಕ ವಲಯವು ಅಶೋಕ್ ಅವರ ಸಂತಸದಲ್ಲಿ ಭಾಗಿಯಾಗಿದೆ. ಕೃಷಿಕನಿಗೆ ಲಭ್ಯವಾದ ನೀರಿನಿಂದ ಸಮೃದ್ಧ ಕೃಷಿಯಾಗಲಿ ಎಂದು ಹಾರೈಸಿದ್ದಾರೆ.
ಅಶೋಕ್ ಅವರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿಗೆ ನೀರಿನ ಸಮಸ್ಯೆ ಇತ್ತು. ಸುತ್ತಲೂ ಗುಡ್ಡ ಪ್ರದೇಶವಾಗಿದ್ದರೂ ನೀರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕೊಳವೆಬಾವಿ ತೆಗೆಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…