ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತವು ಭೀಕರ ಪರಿಸ್ಥಿತಿಯನ್ನು ತೆರೆದಿರಿಸಿದೆ. ಈ ಘಟನೆಗೆ ಕಾರಣವೇನು ? ಎಂಬುದರ ಬಗ್ಗೆ ಅಧ್ಯಯನ , ಚರ್ಚೆ ನಡೆಯುತ್ತಿದೆ. ಮೇಲ್ನೋಟದ ಮಾಹಿತಿಯ ಪ್ರಕಾರ 48 ಗಂಟೆಯಲ್ಲಿ ಮುಂಡಕ್ಕೈ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿತ್ತು. ಕೇವಲ 48 ಗಂಟೆಯಲ್ಲಿ 572 ಮಿಮೀ ಮಳೆಯಾಗಿತ್ತು. ಇಂತಹ ಧಾರಾಕಾರ ಮಳೆಯ ಮುನ್ಸೂಚನೆಯ ನಿರ್ಲಕ್ಷ್ಯವೂ ದುರಂತಕ್ಕೆ ಕಾರಣವಾಯಿತೇ..? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಒಮ್ಮೆಲೇ ಕುಸಿತ ಸಂಭವಿಸಿಲ್ಲ, ಎರಡು ಬಾರಿ ಭೂಕುಸಿತ ಸಂಭವಿಸಿದೆ. ಧಾರಾಕಾರ ಮಳೆಯ ನಡುವೆ ಈ ಸದ್ದು ಅಷ್ಟಾಗಿ ತಿಳಿಯಲೂ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಎಲ್ಲಾ ಭೂಕುಸಿತದ ಪ್ರದೇಶಗಳಲ್ಲಿ 24 ಗಂಟೆಯಲ್ಲಿ ಅಂದರೆ ಸೋಮವಾರ ಬೆಳಿಗ್ಗೆ 200 ಮಿಮೀಗಿಂತಲೂ ಅಧಿಕ ಮಳೆಯಾಗಿತ್ತು. ಒಟ್ಟು 48 ಗಂಟೆಯಲ್ಲಿ ಧಾರಾಕಾರ ಮಳೆಯಾಗಿತ್ತು, ಸೋಮವಾರ ತಡರಾತ್ರಿ ಕುಸಿತವಾಗಿದೆ. ಸುಮಾರು 4 ಕಿಮೀ ದೂರವರೆಗೂ ಪ್ರವಾಹ ಸೃಷ್ಟಿಯಾಗಿ, ನದಿಯೇ ಸೃಷ್ಟಿಯಾಗಿದೆ.
ಜುಲೈ 29 ರಂದು ಸುಮಾರು ಮಧ್ಯಾಹ್ನದ ವೇಳೆ ಭಾರೀ ಮಳೆಯಾಗುತ್ತಿರುವ ವೇಳೆ ಮುಂಡೆಕ್ಕೈ ಪ್ರದೇಶದಲ್ಲಿ ಆರೆಂಜ್ ಎಲರ್ಟ್ ಘೋಷಣೆ ಮಾಡಲಾಗಿತ್ತು. ಆದರೆ ಈ ಎಲರ್ಟ್ ಅಷ್ಟೊಂದು ಗಂಭೀರವಾಗಿ ಆಡಳಿತವೂ ತೆಗೆದುಕೊಳ್ಳಲಿಲ್ಲ, ಧಾರಾಕಾರ ಮಳೆಯಾಗುತ್ತಲೇ ತಡರಾತ್ರಿ ದುರಂತ ನಡೆದಿದೆ.ಮಾಹಿತಿಯ ಪ್ರಕಾರ, ಪುತ್ತುಮಲ, ಮುಂಡಕ್ಕೈ ಪ್ರದೇಶದಲ್ಲಿ 48 ಗಂಟೆಯಲ್ಲಿ 572 ಮಿಮೀ ಮಳೆ ದಾಖಲಾಗಿತ್ತು. ಆದರೆ ಗ್ರಾಮೀಣ ಭಾಗದಲ್ಲಿ ಕೂಡಾ ಸರಿಯಾದ ಮಳೆಮಾಪಕಗಳ ಅಗತ್ಯ ಹಾಗೂ ಮಳೆ ದಾಖಲೆಗಳ ಅಗತ್ಯತೆಯು ಇಂತಹ ಸಂದರ್ಭದಲ್ಲಿಅಂದರೆ ಭಾರೀ ಮಳೆಯ ಸಂದರ್ಭ ಅಗತ್ಯ ಇದೆ. ಕೇರಳದ ಬಹುತೇಕ ಕಡೆ ಅಥವಾ ಮಲೆನಾಡು, ಗುಡ್ಡ ಪ್ರದೇಶದ ತಪ್ಪಲು ಭಾಗದಲ್ಲಿ ಮಳೆ ಮಾಪಕಗಳ ಅಗತ್ಯ ಇದೆ.
ಕೇರಳದ ವಯನಾಡಿನಲ್ಲಿ ಜು.29 ರಂದು ನೀಡಲಾದ ಆರೆಂಜ್ ಎಲರ್ಟ್ ಹಾಗೂ 200 ಮಿಮೀ ಮಳೆಯ ಸಾಧ್ಯತೆಯ ಬಗ್ಗೆ ಇಲಾಖೆ ಹೇಳಿದ್ದರೂ ಗಮನಕ್ಕೆ ಬರಲಿಲ್ಲ. ಹೆಚ್ಚಾಗಿ ಒಂದು ಪ್ರದೇಶದಲ್ಲಿ 24 ಗಂಟೆಗಳಲ್ಲಿ 200 ಮಿಮೀ ವರೆಗೆ ಮಳೆಯಾಗುವ ಸಾಧ್ಯತೆ ಇದ್ದರೆ ಎಚ್ಚರಿಕೆ ನೀಡಲಾಗುತ್ತದೆ. ಇಲ್ಲೂ ಎಚ್ಚರಿಕೆ ನೀಡಿದ್ದರೂ ನಿರೀಕ್ಷೆಗೂ ಮೀರಿ ಮಳೆಯಾಗಿದೆ, ಆದರೆ ಮಳೆ ಅಳತೆ ಸಾಧ್ಯವಾಗಿಲ್ಲ, ಗುಡ್ಡವೇ ಜಾರಿ ಕೆಳಗೆ ಬಂದಿದೆ.ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರದ ಉಷ್ಣತೆಯಿಂದ ಉಂಟಾದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದೆ.
ಹೆಚ್ಚಾಗಿ ಗುಡ್ಡದ ತಪ್ಪಲು ಪ್ರದೇಶಗಳಲ್ಲಿ ಎಚ್ಚರಿಕೆಗಳು ಅಗತ್ಯ ಇದೆ. ವಯನಾಡಿನ ಮುಂಡಕ್ಕೈ ಪ್ರದೇಶವು ಕೂಡಾ ಮನುಷ್ಯರ ವಾಸಕ್ಕೆ ಯೋಗ್ಯವಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಪ್ರದೇಶದಲ್ಲಿ 200 ಮಿಮೀಗಿಂತ ಅಧಿಕ ಮಳೆಯಾದರೆ ಅಪಾಯಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪರಿಸರ ತಜ್ಞರು ಹೇಳಿದ್ದರು. ಈ ಬಾರಿಯೂ ಭಾರೀ ಮಳೆಯ ಕಾರಣದಿಂದ ಮೇಲ್ಪಾಡಿಯ ಮುಂಡಕ್ಕೈ ಪ್ರದೇಶದಲ್ಲಿನ ಕುಸಿತಕ್ಕೆ ಕೆಲವು ಗಂಟೆಗಳ ಮೊದಲು ಕಲ್ಪೆಟ್ಟಾದಲ್ಲಿನ ಹ್ಯೂಮ್ ಸೆಂಟರ್ ಫಾರ್ ಇಕಾಲಜಿ ಮತ್ತು ವೈಲ್ಡ್‌ಲೈಫ್ ಬಯಾಲಜಿ ಪ್ರದೇಶಕ್ಕೆ ಭೂಕುಸಿತದ ಎಚ್ಚರಿಕೆಯನ್ನು ನೀಡಲಾಗಿತ್ತು. ಏಕೆಂದರೆ ಮಳೆ ದಾಖಲು ವ್ಯವಸ್ಥೆ ಇಲ್ಲಿತ್ತು. ವಯನಾಡ್‌ನಾದ್ಯಂತ ಮಳೆಮಾಪಕಗಳ ಅಗತ್ಯತೆ ಹಾಗೂ ಪ್ರತಿದಿನ ಸಂಗ್ರಹಿಸುವ ಮಳೆಯ ಮಾಹಿತಿಯ ವಿಶ್ಲೇಷಣೆಯನ್ನು ಆಧರಿಸಿ ಎಚ್ಚರಿಕೆ ನೀಡಬೇಕೆಂದು ಈ ಹಿಂದೆ ಆಡಳಿತಕ್ಕೆ ತಿಳಿಸಲಾಗಿತ್ತು. ಹ್ಯೂಮ್ ಸೆಂಟರ್, ಪರಿಸರಶಾಸ್ತ್ರಜ್ಞರು, ಪರಿಸರವಾದಿಗಳು ಮತ್ತು ಹವಾಮಾನ ತಜ್ಞರು ಕೆಲವು ಕಡೆಗಳ ಮಳೆ ಮಾಹಿತಿ, ಮಳೆ ಡಾಟಾ ಸಂಗ್ರಹಿಸಿ ಎಚ್ಚರಿಕೆ ನೀಡುತ್ತಿದ್ದರು. ಆದರೆ ಮುಂಡಕ್ಕೈ ಪ್ರದೇಶದಲ್ಲಿ ಬಿದ್ದಿರುವ ಮಳೆ ಮಾಹಿತಿ ತಜ್ಞರಿಗೆ ಲಭ್ಯವಾಗಿರಲಿಲ್ಲ.
ಈಗ ಮಳೆ ದಾಖಲೆಗಳನ್ನು ಗಮನಿಸಿದರೆ ಪುತ್ತುಮಲದಲ್ಲಿನ ಮಳೆ ಮಾಪಕದ ಪ್ರಕಾರ 48 ಗಂಟೆಗಳಲ್ಲಿ 572 ಮಿಮೀ ಮಳೆಯಾಗಿತ್ತು. ಈ ಮಳೆಯು 2019 ರ ಸಮಯದಲ್ಲಿ ಪುತ್ತುಮಲ ಪ್ರದೇಶದಲ್ಲಿ ಭೂಕುಸಿತ ಉಂಟಾದಾಗ ಸುರಿದ ಮಳೆಗಿಂತಲೂ ಅಧಿಕವಾಗಿತ್ತು.
ಕೇರಳದಲ್ಲಿ ಸಾಧಾರಣವಾಗಿ 200 ಮಿಮೀಗಿಂತ ಅಧಿಕ ಮಳೆಯಾದಾಗ ಕೆಲವು ಪ್ರದೇಶಗಳಲ್ಲಿ ಕುಸಿತ ಆರಂಭವಾಗುತ್ತದೆ. ಇದಕ್ಕೆ ಹಲವು ಕಾರಣಗಳನ್ನು ತಜ್ಞರು ನೀಡುತ್ತಾರೆ.ಕೇರಳದ ಬಹುಪಾಲು ಗುಡ್ಡ ಪ್ರದೇಶವು 20 ಡಿಗ್ರಿಗಿಂತ ಹೆಚ್ಚಿನ ಇಳಿಜಾರು ಇದೆ, ಹೀಗಾಗಿ 200 ಮಿಮೀಗಿಂತ ಹೆಚ್ಚಿನ ಮಳೆಯಾದಾಗ ಕುಸಿತಕ್ಕೆ ಕಾರಣವಾಗುತ್ತದೆ.
2021 ರಲ್ಲಿ ಸ್ಪ್ರಿಂಗರ್ ಪ್ರಕಟಿಸಿದ ಅಧ್ಯಯನವು ಕೇರಳದ ಎಲ್ಲಾ ಭೂಕುಸಿತದ ಕೇಂದ್ರಗಳು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿವೆ. ಅದರಲ್ಲೂ ಇಡುಕ್ಕಿ, ಕೊಟ್ಟಾಯಂ, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ, ಒಂದು ಕಾಲದಲ್ಲಿ ದಟ್ಟವಾದ ಅರಣ್ಯವನ್ನು ಹೊಂದಿದ್ದ ಕೇರಳದ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಈಗ ರಬ್ಬರ್ ಕಾಡುಗಳು ಇವೆ. ಇದು ಮಣ್ಣನ್ನು ಹಿಡಿದಿಡುವುದಿಲ್ಲ. ಹೀಗಾಗಿ 200 ಮಿಮೀಗಿಂತ ಅಧಿಕ ಮಳೆಯಾದಾಗ ಮಣ್ಣು ಸಡಿಲವಾಗುತ್ತದೆ.
ಕೇರಳದಲ್ಲಿ ಇದುವರೆಗೆ ಹಲವು ಕಡೆ ಭೂಕುಸಿತ ಸಂಭವಿಸಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅನೇಕ ಭೂಕುಸಿತ ನಡೆದಿದೆ. ಭೂ ವಿಜ್ಞಾನ ಸಚಿವಾಲಯವು 2022 ರಲ್ಲಿ ಲೋಕಸಭೆಗೆ ಮಾಹಿತಿ ನೀಡಿದಂತೆ, ಏಳು ವರ್ಷಗಳಲ್ಲಿ ಕೇರಳದಲ್ಲಿ ಅತಿ ಹೆಚ್ಚು ಭೂಕುಸಿತವಾಗಿದೆ. ದೇಶದಲ್ಲಿಯೇ ಅತೀ ಹೆಚ್ಚು ಭೂಕುಸಿತ ಸಂಭವಿಸಿದೆ ಇಲ್ಲಿ. 2015-2022 ರವೆರೆಗೆ 3782 ಭೂಕುಸಿತಗಳು ದೇಶದಲ್ಲಿ ಸಂಭವಿಸಿದೆ, ಅದರಲ್ಲಿ 2000ಕ್ಕೂ ಅಧಿಕ ಕುಸಿತಗಳು ಕೇರಳದಲ್ಲಿ ನಡೆದಿದೆ. ಈಗ ಭೀಕರ ಕುಸಿತಕ್ಕೆ ಕೇರಳ ಸಾಕ್ಷಿಯಾಯಿತು.
A landslide in the village of Mundakkai in Kerala’s Wayanad district has brought to light a critical situation. The cause of this incident is currently under study and discussion. According to observational data, there was heavy rainfall in the Mundakkai area over a span of 48 hours, with 572 mm of rain recorded during this time. It is being debated whether the failure to heed forecasts of such intense rainfall also contributed to the disaster.
The Mundakkai region of Wayanad has not been immune to landslides, having experienced two occurrences. Despite locals stating that the sound of landslides is barely noticeable amidst heavy rain, all affected areas received over 200 mm of rain within a 24-hour period on Monday morning. A total of 48 hours of continuous torrential rain fell by late Monday night, leading to flooding that extended up to approximately 4 km along the river.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…