‘ಪರಿಸರ-2025’ ರಾಷ್ಟ್ರೀಯ ಸಮ್ಮೇಳನ | ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗಿನ ಬಗ್ಗೆ ಯೋಚಿಸುವ ಅಗತ್ಯವಿದೆ

March 30, 2025
9:26 PM
ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ  ಬಗ್ಗೆ ಚಿಂತಿಸುವ ಪೋಷಕರು ಅವರು ಭವಿಷ್ಯದಲ್ಲಿ ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗು ಕೇಳಲು ಅವಕಾಶ ದೊರೆಯುವುದೆ ಎನ್ನುವುದರ ಕುರಿತು ಯೋಚಿಸುವ ಅಗತ್ಯವಿದೆ.

ಅಭಿವೃದ್ಧಿಯ ಭಾರತೀಯ ಪರಂಪರೆಯ ಆಧಾರವೆಂದರೆ ಶೋಷಣೆಯಲ್ಲ, ಬದಲಾಗಿ ಪೋಷಣೆ, ಸಂರಕ್ಷಣೆ ಎಂದು ಹೇಳಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ  ಬಗ್ಗೆ ಚಿಂತಿಸುವ ಪೋಷಕರು ಅವರು ಭವಿಷ್ಯದಲ್ಲಿ ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗು ಕೇಳಲು ಅವಕಾಶ ದೊರೆಯುವುದೆ ಎನ್ನುವುದರ ಕುರಿತು ಯೋಚಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.……..ಮುಂದೆ ಓದಿ…..

Advertisement

ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ –NGT ಆಯೋಜಿಸಿರುವ ‘ರಾಷ್ಟ್ರೀಯ ಪರಿಸರ ಸಮ್ಮೇಳನ – 2025’ ಕುರಿತ  ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ. ಶುದ್ಧ ಪರಿಸರ, ಆಧುನಿಕ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು ಅವಕಾಶ ಮತ್ತು ಸವಾಲು ಆಗಿದೆ. ಪರಿಸರ ನಿರ್ವಹಣೆ, ಪರಿಸರ ವ್ಯವಸ್ಥೆ ಸಂಬಂಧಿಸಿದ ಸಂಸ್ಥೆಗಳು ಮತ್ತು ನಾಗರಿಕರು ಪರಿಸರ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ನಿರಂತರವಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಸುಂದರವಾದ ಪ್ರಕೃತಿ, ಕಾಡಿನ ಸೌಂದರ್ಯದ ಅನುಭವ ಹೊಂದಲು ಇರುವ ಸವಾಲುಗಳ ಬಗ್ಗೆ ಗಹನವಾದ ಚರ್ಚೆ ನಡೆಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಆರೋಗ್ಯಯುತ ಜೀವನಕ್ಕಾಗಿ ಸ್ವಚ್ಛ ಪರಿಸರ, ಆಧುನಿಕತೆಯ ವಿಕಾಸದ ಸಮನ್ವಯತೆ ಪ್ರಮುಖವಾಗಿದೆ. ವಾಯುಮಾಲಿನ್ಯದಿಂದ ಜೀವಿತಾವಧಿ ಕಡಿಮೆಯಾಗಲಿದೆ ಎಂದು ಅನೇಕ ಅಧ್ಯಯನಗಳು ತಿಳಿಸಿದ್ದು, ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ. ವಿಶ್ವ ಪರಿಸರ ದಿನ, ವಿಶ್ವ ಗುಬ್ಬಚ್ಚಿ ದಿನ, ಅಂತರಾಷ್ಟ್ರೀಯ ಅರಣ್ಯ ದಿನ, ವಿಶ್ವ ವಾಯು ದಿನಗಳ ಆಚರಣೆ ಪರಿಸರ ಸಂರಕ್ಷಣೆಯ ಮಹತ್ವದ ಅರಿವನ್ನು ಮೂಡಿಸುತ್ತವೆ ಎಂದು ದ್ರೌಪದಿ ಮುರ್ಮು ಹೇಳಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್  ಮಾತನಾಡಿ, ಸರ್ವೇ ಜನ ಸುಖಿನೋಭವಂತು ಎಂಬ ಶ್ಲೋಕ ಕೇವಲ ಮಾನವಸಂಕುಲದ ಸುರಕ್ಷತೆಯಷ್ಟೇ ಅಲ್ಲ, ಪರಿಸರದಲ್ಲಿರವ ಸಕಲ ಜೀವರಾಶಿ, ನದಿ, ಪರ್ವತ, ಅರಣ್ಯ ಸಂಪಲನ್ಮೂಲದ ರಕ್ಷಣೆಯೂ ಸೇರಿದೆ. ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group