ಕರ್ನಾಟಕದಲ್ಲಿ ನಂದಿನಿ ಉಳಿಸಿ ಅಭಿಯಾನ ಜೋರಾಗುತ್ತಿದೆ. ಇದರ ಮಧ್ಯೆ ಅಮುಲ್ ಆನ್‍ಲೈನ್‍ನಲ್ಲಿ ವಿಸ್ತರಣೆಗೊಳ್ಳುತ್ತಿದೆ. ಅತ್ತ ಕೆಎಂಎಫ್ – ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ಜಟಾಪಟಿ ಜೋರಾಗುತ್ತಿದೆ.
ಬೆಂಗಳೂರಲ್ಲಿ ಅಮುಲ್ ವಿರುದ್ಧ ಧಿಕ್ಕಾರದ ಕೂಗು ಮೊಳಗಿದೆ. ಅಮುಲ್ ಉತ್ಪನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು. ಅಮುಲ್ ಚೀಸ್, ಅಮುಲ್ ಬೆಣ್ಣೆ, ತುಪ್ಪ ಹೀಗೆ ಅಮುಲ್ ಪ್ರಾಡಕ್ಟ್ ಗಳನ್ನು ನೆಲಕ್ಕೆಸೆದು ಆಕ್ರೋಶ ಹೊರಹಾಕಿದ್ರು. ಅಮುಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಮುಲ್ ಉತ್ಪನ್ನ ಆನ್‍ಲೈನ್ ಮಾರಾಟ ಖಂಡಿಸಿದೆ. ಶೀಘ್ರದಲ್ಲಿಯೇ ಅಮುಲ್ ಫ್ಯಾಕ್ಟರಿ, ಅಮುಲ್ ಹಾಲಿನ ಮಾರಾಟ ಘಟಕಕ್ಕೆ ದಾಳಿ ಮಾಡೋದಾಗಿ ಕನ್ನಡ ಪರ ಸಂಘಟನೆ ಎಚ್ಚರಿಕೆ ನೀಡಿದೆ.
ನಂದಿನಿ ಯನ್ನು ಮುಚ್ಚುವ ಹುನ್ನಾರ.. ರಾಜಕೀಯ ಷಡ್ಯಂತ್ರ ಅಂತಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಕೊನೆಗೆ ಅಮುಲ್ ಹೆಸರು ಬೋರ್ಡ್ ಇರುವ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ಪ್ರತಿಭಟನೆಕಾರರನ್ನು ವಶಕ್ಕೆ ಪಡೆದುಕೊಂಡ್ರು.
ಹೆಚ್‍ಡಿಕೆ ವ್ಯಂಗ್ಯ: ಬಿಜೆಪಿ ಅವರಿಗೆ ಅಮುಲ್ ಪರಿಣಾಮದ ಮಾಹಿತಿ ಇಲ್ಲ. ಬಿಜೆಪಿ ಅವರ ಕಣ್ಣಿಗೆ ಮೋದಿ ಬಿಟ್ಟರೆ ಏನೂ ಕಾಣಲ್ಲ ಅಂತ ಹೆಚ್‍ಡಿಕೆ ಟೀಕಿಸಿದ್ದಾರೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೆ ಇದ್ರೆ ನಂದಿನಿ ಮುಳುಗಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ನಂಬರ್ 1 ಆಗಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಂದಿನಿ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಅಮುಲ್ ಕಿಡಿ ಜ್ವಾಲೆಯಾಗಿ ಹಬ್ಬಿದೆ. ಕನ್ನಡಿಗರ ಆಕ್ರೋಶ ಸ್ಫೋಟಗೊಂಡಿದೆ. ನಂದಿನಿ ಉಳಿಸಿ ಅಮುಲ್ ತೊಲಗಿಸಿ ಕ್ಯಾಂಪೇನ್ ಜೋರಾಗಿ ಸದ್ದು ಮಾಡುತ್ತ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…