ಸಕಾಲಕ್ಕೆ ಮಳೆ ಬಂದ್ರೆನೇ ಬೆಳೆ. ಸರಿಯಾದ ಪ್ರಮಾಣದಲ್ಲಿ ದೇಶದಲ್ಲಿ ಮಳೆ ಬಾರದೆ ಹೋದರೆ ರೈತ ಹಾಗೂ ರೈತನನ್ನು ನಂಬಿದ ಜನಕ್ಕೂ ತೊಂದರೆಯೇ. ಈ ಬಾರಿ ಮುಂಗಾರು ಅಷ್ಟಾಗಿ ಕರುಣೆ ತೋರಲಿಲ್ಲ. ಉತ್ತರ ಭಾರತದಲ್ಲಿ ಪ್ರವಾಹ ಬಂದು ಕೊಚ್ಚಿಕೊಂಡು ಹೋದರೂ, ದೇಶಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಭಾರಿ ಕಡಿಮೆಯಾಗಿದೆ.
ದೇಶವ್ಯಾಪಿ ಮುಂಗಾರು#Monsoon ಕುಂಠಿತವಾಗಿದ್ದು, ಕರ್ನಾಟಕ#Karnataka ಸೇರಿದಂತೆ 17 ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ#Rain ಕೊರತೆ ಉಂಟಾಗಿದೆ. ಈ ಬಾರಿ ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ 45% ರಷ್ಟು ಮುಂಗಾರಿನ ಕೊರತೆಯಾಗಿದೆ. ವಾಯುವ್ಯ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮುಂಗಾರು ಕೈಕೊಟ್ಟಿದೆ. ಆದರೆ ವಾಯುವ್ಯದಲ್ಲಿ ವಾಡಿಕೆಗಿಂತ 42% ರಷ್ಟು ಅಧಿಕ ಮಳೆಯಾಗಿದೆ.
ಮಧ್ಯ ಭಾರತದಲ್ಲಿ 6%, ದಕ್ಷಿಣ ಭಾರತದಲ್ಲಿ 45%, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ 18% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಯಂತೆ 161 ಮಿ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 88 ಮಿ.ಮಿ ಮಳೆಯಷ್ಟೇ ದಾಖಲಾಗಿದೆ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಈ ಬಾರಿ 70% ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಅಭಾವ:
ಜೂನ್ 1 ರಿಂದ 29 ರವರೆಗೆ ವಾಡಿಕೆಗಿಂತ 57% ರಷ್ಟು ಕಡಿಮೆ ಮಳೆಯಾಗಿದೆ. ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಶಿವಮೊಗ್ಗ, ಹಾಸನ, ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರದಲ್ಲಿ 20% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 22%, ಉತ್ತರ ಕರ್ನಾಟಕದಲ್ಲಿ 21%, ಮಲೆನಾಡಲ್ಲಿ 64%, ಕರಾವಳಿಯಲ್ಲಿ 19% ರಷ್ಟು ಕಡಿಮೆ ಮಳೆಯಾಗಿದೆ.
ಕನಿಷ್ಠ ಆಮದು ದರಕ್ಕಿಂತ ಕಡಿಮೆ ಬೆಲೆಯಲ್ಲಿ ಅಡಿಕೆ ಆಮದು ಮಾಡಿದರೆ ಸರಕುಗಳನ್ನು ಸಂಪೂರ್ಣ…
ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…
ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…
ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…
ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…
19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…