ಕಳೆದ 15 ದಿನಗಳಿಂದ ಮುಂಗಾರು ಪೂರ್ವ ಮಳೆ(Pre Mansoon rain) ಕರಾವಳಿ ಜಿಲ್ಲೆಗಳಿಗೆ(Coastal area) ಹಾಗೂ ಮಲೆನಾಡು ಭಾಗ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಚೆನ್ನಾಗಿ ಸುರಿದಿದೆ. ಜನ ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಕಳೆದ ಎರಡು ದಿನಗಳಿಂದ ವರುಣ ಕ್ಷೀಣಿಸುತ್ತಿದ್ದಾನೆ. ಹೀಗಾಗಿ ಮತ್ತೆ ತಾಪಮಾನ(Temperature) ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(IMD) ತಿಳಿಸಿದೆ.
ವಿಶೇಷವಾಗಿ ಬೆಂಗಳೂರಿನಲ್ಲಿ ತಾಪಮಾನದ ಪ್ರಮಾಣವು ಹೆಚ್ಚಳವಾಗುವ ಸಾಧ್ಯತೆ ಇದೆ. ಜೊತೆಗೆ ಕರಾವಳಿ ಭಾಗದಲ್ಲೂ ಉಷ್ಣಾಂಶ ಅಧಿಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರೆಮೆಲ್ ಚಂಡಮಾರುತ ರಾಜ್ಯಕ್ಕೆ ಹೆಚ್ಚಿನ ಪರಿಣಾಮ ಬೀರದು. ಹೀಗಾಗಿ ಮಳೆ ಕ್ಷೀಣಿಸಲಿದೆ. ಆದರೆ, ಮೇ 30ರ ನಂತರ ವಾರಾಂತ್ಯದಲ್ಲಿ ಮಳೆ ಸುರಿಯಲಿದೆ. ಅದಾಗ್ಯೂ, ಮುಂಬರುವ ವಾರದಲ್ಲಿ ಗರಿಷ್ಠ ತಾಪಮಾನವು 33 ರಿಂದ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ ನಾಲ್ಕು ದಿನಗಳವರೆಗೆ ಕೇರಳ ಕರಾವಳಿಯಲ್ಲಿ ಮಾನ್ಸೂನ್ ವ್ಯವಸ್ಥೆಗಳಿಲ್ಲದ ಪರಿಣಾಮವಾಗಿ ತಾಪಮಾನದ ಏರಿಳಿತ ಮತ್ತು ಲಘುವಾದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದರೆ, ನೈರುತ್ಯ ಮುಂಗಾರು ಜೂನ್ 5 ರೊಳಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಪೂರ್ವ ಮುಂಗಾರು ಭರ್ಜರಿಯಾಗಿ ಸುರಿದಿದ್ದು ರಾಜ್ಯದ ಜನರು ನಿಟ್ಟುಸಿರು ಬಿಡುವಂತಾಗಿದೆ.
- ಅಂತರ್ಜಾಲ ಮಾಹಿತಿ
ದುರ್ಬಲಗೊಂಡ ಮುಂಗಾರು ಪೂರ್ವ ಮಳೆ | ಮಳೆ ಕಡಿಮೆಯಾಗುತ್ತಲೇ ಮತ್ತೆ ಏರಿಕೆಯಾಗುತ್ತಿರುವ ತಾಪಮಾನ https://t.co/Y0FGbWWz0k
— theruralmirror (@ruralmirror) May 28, 2024