ತಿಂಗಳುಗಳ ಪ್ರವಾಹ, ಭೂಕುಸಿತ, ಸಿಡಿಲು ಗುಡುಗು, ವ್ಯಾಪಕ ಹಾನಿಯ ಬಳಿಕ ಇದೀಗ ನೈರುತ್ಯ ಮುಂಗಾರು ಮಾರುತ ದೇಶದ ರಾಜಸ್ಥಾನ ಭಾಗದಿಂದ ನಿಧಾನವಾಗಿ,ನಿನ್ನೆ ಹಿಂದೆ ಸರಿಯಲು ಆರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಮುಂದಿನ ವಾರದ ವೇಳೆಗೆ ದೇಶದ ಇನ್ನಷ್ಟು ಭಾಗದಿಂದ ಹಿಂದೆ ಸರಿಯುವ ಸಾಧ್ಯತೆ ಇದ್ದು, ಈ ಬಾರಿ ವಾಡಿಕೆಗಿಂತ 10 ರಿಂದ 15 ದಿನ ತಡವಾಗಿ ಮುಂಗಾರು ಮಾರುತ ಹಿಂದೆ ಸರಿಯುವಿಕೆ ಪ್ರಕ್ರಿಯೆ ಆರಂಭವಾಗಿದೆ. ಜೂನ್ 1 ರಂದು ಭಾರತಕ್ಕೆ ಕಾಲಿಟ್ಟ ನೈರುತ್ಯ ಮುಂಗಾರು ಜೂನ್ ತಿಂಗಳ ಅಂತ್ಯಕ್ಕೆ ಹೆಚ್ಚು ಕಡಿಮೆ ಪೂರ್ತಿ ದೇಶವನ್ನು ವ್ಯಾಪಿಸಿತ್ತು. IMD ಪ್ರಕಾರ ದೇಶದ ಅನೇಕ ಕಡೆ ಸರಾಸರಿಗಿಂತ ಅಧಿಕ ಮಳೆಯಾಗಿದೆ.
ಉದಾಹರಣೆಗೆ ದೇಶದ ಬಹುದೊಡ್ಡ ನಗರವಾದ ಮುಂಬೈನಲ್ಲಿ ಆಗಸ್ಟ್ ನಲ್ಲಿ 482, ಸೆಪ್ಟೆಂಬರ್ ತಿಂಗಳಲ್ಲಿ 301 ಮಿ.ಮೀ.ನಷ್ಟು ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಹಿಂದಿನೆಲ್ಲ ದಾಖಲೆಗಳನ್ನು ಅಳಿಸಿ,ಆಗಸ್ಟ್ ನಲ್ಲಿ 1199, ಸೆಪ್ಟೆಂಬರ್ ನಲ್ಲಿ ಈ ವರೆಗೆ 376 ಮಿ.ಮೀ.ನಷ್ಟು ಮಳೆ ದಾಖಲಾಗಿದ್ದು,ಅನೇಕ ಬಾರಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel