ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉಂಟಾದ “ಗುಲಾಬ್” ಚಂಡಮಾರುತ ಇದೀಗ ಭೂಮಿಗೆ ಅಪ್ಪಳಿಸುತ್ತಿದೆ. ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಭಾರೀ ಗಾಳಿ-ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾದ ಗಂಜಮ್ ಜಿಲ್ಲೆಯಿಂದ 16,000 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಸದ್ಯ ಚಂಡಮಾರುತವು ಆಂಧ್ರಪ್ರದೇಶದ ಶ್ರೀಲಕುಲಂ , ಕಳಿಂಗಪಟ್ಟಣದಲ್ಲಿ ಭಾರೀ ಮಳೆಯಾಗಿದ್ದು, ಭಾರೀ ಗಾಳಿ ಬೀಸಿದೆ. ಇತ್ತೀಚೆಗಿನ ಅಂದಾಜು ಪ್ರಕಾರ ಚಂಡಮಾರುತವು ಕರಾವಳಿ ಪ್ರದೇಶಗಳನ್ನು ತಲುಪಿದೆ. ಹೀಗಾಗಿ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಪಕ್ಕದ ದಕ್ಷಿಣ ಕರಾವಳಿಯ ಒಡಿಶಾದಲ್ಲಿ ಚಂಡಮಾರುತದ ವೇಗದ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯ ಕಳಿಂಗಪಟ್ಟಣ ಮತ್ತು ಗೋಪಾಲಪುರ ನಡುವೆ ಮುಂದೆ ಹಾದುಹೋಗುವ ಸಾಧ್ಯತೆಯಿದೆ, ಕಳಿಂಗಪಟ್ಟಣದ ಉತ್ತರಕ್ಕೆ ಸುಮಾರು 25 ಕಿಮೀ ದೂರದಲ್ಲಿ ಚಂಡಮಾರುತವು 75-85 ಕಿಮೀ ವೇಗದಲ್ಲಿ ಮುಂದಿನ 3 ಗಂಟೆಗಳಲ್ಲಿ ಚಲಿಸಲಿದೆ.
#CycloneGulab impact started at #Gopalpur, #Odisha #Video captured from DWR, Gopalpur building. pic.twitter.com/u2fNAnOz5y
— Meteorological Centre, Bhubaneswar (@mcbbsr) September 26, 2021
Advertisement
ಪ್ರಸ್ತುತ ಒಡಿಶಾದಲ್ಲಿ ಒಟ್ಟು 13 ರಾಷ್ಟ್ರೀಯ ವಿಪತ್ತು ನಿಗ್ರಹ ದಳವನ್ನು (ಎನ್‌ಡಿಆರ್‌ಎಫ್) ಹಾಗೂ ಆಂಧ್ರಪ್ರದೇಶದಲ್ಲಿ ಒಟ್ಟು ಐದು ಎನ್‌ಡಿಆರ್‌ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ,” ಎಂದು ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕರು ಸತ್ಯ ನಾರಾಯಣ್ ಪ್ರಧಾನ್ ತಿಳಿಸಿದ್ದಾರೆ. ಗುಲಾಬ್ ಚಂಡಮಾರುತಕ್ಕೆ ತುತ್ತಾಗುವ ಸಾಧ್ಯತೆ ಇರುವ ಪ್ರಮುಖ ಏಳು ಜಿಲ್ಲೆಗಳಲ್ಲಿ ಈ ಸ್ಥಳಾಂತರ ಪ್ರಕ್ರಿಯೆಯನ್ನು ಮಾಡಲಾಗಿದೆ.
#CycloneGulab | Evacuations are on in coastal districts of #AndhraPradesh and #Odisha with a cyclonic storm expected to make landfall today evening.
Details here 👇#cyclonealert pic.twitter.com/t1zMRKu31e
Advertisement— editorji (@editorji) September 26, 2021