ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿವಿಧ ಕಾರಣಗಳಿಂದ ತಡವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಪ್ರೀಮಿಯಂ ಪಾವತಿಗೆ ನೋಟಿಫೀಕೇಶನ್ ಆಗಿತ್ತು. ಕೇವಲ ಒಂದು ವಾರದ ಅವಕಾಶ ಇದೆ. ಪ್ರೀಮಿಯಂ ಪಾವತಿಗೆ ಜು.31 ಕೊನೆಯ ದಿನವಾಗಿದೆ. ಈ ಬಾರಿ FID ( FRUIT ID) ಕಡ್ಡಾಯವಾಗಿದೆ. ಹಲವು ಕೃಷಿಕರಿಗೆ ಈ ಐಡಿ ಆಗದೇ ಇರುವುದು ಈಗ ಸಮಸ್ಯೆಯಾಗಿದೆ.
ಈ ಬಾರಿ ಬೆಳೆ ವಿಮೆ ಪಾವತಿಗೆ FRUIT ID ಕಡ್ಡಾಯವಾಗಿದೆ.ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.
ಈ ಬಾರಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ದಾಖಲೆ ಪತ್ರಗಳು ಬೇಕಿದೆ. ಅದರ ಜೊತೆಗೇ FRUIT ID ಕೂಡಾ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಲ್ಲಿ, ಕೃಷಿಕರಲ್ಲಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ಈ ಐಡಿ (ಫಾಮರ್ ಐಡಿ)ಯನ್ನು ಮಾಡಿಸಿರಲಿಲ್ಲ. ಈಗ ಬೆಳೆ ವಿಮೆಗಾಗಿ ಈ ಐಡಿ ರಚನೆಗೆ ಇಲಾಖೆಗೆ ಹೋದರೂ ತಕ್ಷಣವೇ ಈ ಐಡಿ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಜು.31 ರೊಳಗೆ ಕಷ್ಟವಿದೆ.
ಇದಕ್ಕಾಗಿ ಬೆಳೆವಿಮೆ ಪಾವತಿಯ ದಿನವನ್ನು ಮುಂದೂಡುವ ಅಗತ್ಯ ಇದೆ. ಅದರ ಜೊತೆಗೆ ಸರಳೀಕರಣದ ಜೊತೆಗೆ ಬೆಳೆವಿಮೆ ಪಾವತಿಗೆ ಅವಕಾಶ ನೀಡಬೇಕಾದ ಅಗತ್ಯ ಇದೆ.