ಗುಲಾಬ್ ಚಂಡಮಾರುತದ ಬಳಿಕ ಇದೀಗ ಶಾಹೀನ್ ಚಂಡಮಾರುತ ಅಬ್ಬರಿಸುತ್ತಿದೆ. “ಶಾಹೀನ್” ಚಂಡಮಾರುತದ ಪ್ರಭಾವದಿಂದ ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಏಳು ರಾಜ್ಯಗಳಲ್ಲಿ ಅ.1 ಹಾಗೂ 2 ರಂದು ಹೆಚ್ಚು ಮಳೆಯಾಗಲಿದೆ. ರಾಜ್ಯದಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಗುಜರಾತ್ ಕರಾವಳಿಯಲ್ಲಿ ಶಾಹೀನ್ ಚಂಡಮಾರುತ ಪಶ್ಚಿಮ ದಿಕ್ಕಿಗೆ ಚಲಿಸಲು ಆರಂಭಿಸಿದ್ದು ಮತ್ತು ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತ ತೀವ್ರತೆ ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಶುಕ್ರವಾರ ಬೆಳಗ್ಗೆ ಶಾಹೀನ್ ಚಂಡಮಾರುತ ಗುಜರಾತ್‌ನ ದ್ವಾರಕದ ಪಶ್ಚಿಮ ವಾಯವ್ಯ ದಿಕ್ಕಿನಿಂದ ಸುಮಾರು 400 ಕಿ.ಮೀ ದೂರದಲ್ಲಿ, ಪಾಕಿಸ್ತಾನದ ಕರಾಚಿಯಿಂದ 260 ಕಿ.ಮೀ ನೈಋತ್ಯಕ್ಕೆ ಹಾಗೂ ಇರಾನ್‌ನ ಚಾಬಹಾರ್ ಬಂದರಿನಿಂದ 530 ಕಿ.ಮೀ ಆಗ್ನೇಯದಲ್ಲಿ ಚಲಿಸಿತ್ತು. ಇದೀಗ ಗುಜರಾತ್ ಕರಾವಳಿ ತೀರದಲ್ಲಿ ಶಾಹೀನ್ ಚಂಡಮಾರುತ ಚಲಿಸುತ್ತಿದ್ದು ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಬಹುದು.
Cyclonic Storm ‘Shaheen’ over central parts of north Arabian Sea moved nearly westwards,lay centred at 1130 hrs IST of today, near latitude 23.2°N/64.4°E, 450 km east-southeast of Chabahar Port (Iran). Further intensify into a Severe Cyclonic Storm during the next 06 hrs. pic.twitter.com/jHHEJ0YE5o
— India Meteorological Department (@Indiametdept) October 1, 2021
Advertisement