10.10.2021ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡದ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಕೊಡಗು ಹಾಗೂ ಆಗುಂಬೆ ಭಾಗಗಳಲ್ಲಿ ಸಹ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಮಂಡ್ಯ, ಚಾಮರಾಜನಗರ, ಬೆಂಗಳೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ(ಒಂದೆರಡು ಕಡೆ), ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
#weather #cyclonejawad pic.twitter.com/SZ4qUXsamY
— theruralmirror (@ruralmirror) October 9, 2021
ವಾಯುಭಾರ ಕುಸಿತ :
ಮುಂಗಾರು ದುರ್ಬಲವಾಗದ್ದರೂ ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ಚಲನೆ ಪ್ರಾರಂಭವಾಗಿದೆ.
13ನೇ ತಾರೀಕಿನ ವೇಳೆಗೆ ಈ ವಾಯುಭಾರ ಕುಸಿತವು ಸ್ವಲ್ಪ ಪ್ರಭಲವಾಗುವ ಸಾಧ್ಯತೆ ಇದೆ ಹಾಗೂ ಅದೇ ವೇಳೆಗೆ ಕರಾವಳಿ ಬಂಗಾಳ ಕೊಲ್ಲಿಯಲ್ಲೂ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚನೆ ಇದೆ.ಕರ್ನಾಟಕ ಕರಾವಳಿ ಭಾಗಗಳಿಗೆ ಅಷ್ಟೇನೂ ಪ್ರಭಾವ ಇಲ್ಲದಿದ್ದರೂ ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.