15.11.201ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮಳೆಯ ಮುನ್ಸೂಚನೆ ಇದೆ.
ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆಯ ಒಂದೆರಡು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಉಳಿದ ಬಾಗಲಕೋಟೆ, ವಿಜಯಪುರ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
#weather #WeatherReport #weathermirror @saishekharbb pic.twitter.com/tZdxmTyU1c
— theruralmirror (@ruralmirror) November 14, 2021
Advertisement
ನಿನ್ನೆ ಬೆಳಗ್ಗೆಯವರೆಗೆ ಉತ್ತರ ಭಾರತದ ಕಡೆಯಿಂದ ಬೀಸುತ್ತಿದ್ದ ಛಳಿ ಗಾಳಿಯು ಬಂಗಾಳಕೂಲ್ಲಿಯ ಕಡೆಯಿಂದ ಈಗ ಬೀಸುತ್ತಿರುವ ಹಿಂಗಾರು ಮಳೆ ಮಾರುತಗಳಿಗೆ ಸೋತು ಅರಬ್ಬಿ ಸಮುದ್ರ ಪಾಲಾಗುತ್ತಿದೆ. .
ಕೇರಳ ಕರಾವಳಿಯಲ್ಲಿ ವಾಯು ನಿಮ್ನತೆ ಉಂಟಾಗಿದ್ದು ಕೇರಳ ಕರಾವಳಿ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
Advertisement– The Rural Mirror (@ruralmirror) 14 Nov 2021
ಇದೇ ವಾಯು ನಿಮ್ನತೆಯು ನವೆಂಬರ್ 16, 17ರ ವೇಳೆಗೆ ಚಂಡಮಾರುತವಾಗುವ ಸಾಧ್ಯತೆ ಇದೆ ಹಾಗೂ ಅದೇ ಸಮಯದಲ್ಲಿ ಬಂಗಾಳಕೂಲ್ಲಿಯ ಅಂದ್ರಾ ಕರಾವಳಿಯಲ್ಲೂ ಚಂಡಮಾರುತ ಉಂಟಾಗುವ ಲಕ್ಷಣಗಳಿವೆ. ಪರಿಣಾಮದ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟತೆ ಲಭ್ಯವಾಗಬಹುದು