ವೆದರ್‌ ಮಿರರ್‌ | ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಸಮಸ್ಯೆ | ಏರುತ್ತಿರುವ ಉಷ್ಣತೆ | ಇಳಿಯುತ್ತಿರುವ ತೇವಾಂಶ |

March 4, 2022
9:33 PM

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಬಹಳವಾಗಿ ಕಾಡುತ್ತಿರುವ ವಿಷಯ. ಏಕೆ ಹೀಗೆ ಎಂದು ಅಧ್ಯಯನಗಳು ನಡೆದರೆ ಭೂಮಿಯ ಉಷ್ಣತೆಯಲ್ಲಿ  ಏರಿಕೆ ಮೊದಲಾಗಿ ಕಂಡುಬರುತ್ತಿದೆ. ಈಚೆಗೆ ನಡೆದ ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ದಿನಗಳಲ್ಲಿ  ಇಡೀ ಪ್ರಪಂಚದಲ್ಲಿ ಈಗಿನ ಉಷ್ಣತೆಗಿಂತ ಎರಡು ಡಿಗ್ರಿ ಕಡಿಮೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದಕ್ಕಾಗಿ ಅರಣ್ಯ ಸಂರಕ್ಷಣೆ, ವಾಯು ಮಾಲಿನ್ಯ ಕಡಿಮೆ ಮಾಡುವುದು  ಸೇರಿದಂತೆ ಸೋಲಾರ್‌ ಬಳಕೆಗೆ ಆದ್ಯತೆ ನೀಡಲೂ  ಶಿಫಾರಸು ಮಾಡಲಾಗಿತ್ತು.

ಈಗಾಗಲೇ ಭಾರತಕ್ಕೆ ಈ ವರ್ಷದ ಪ್ರಥಮ ವಾಯುಭಾರ ಕುಸಿತವು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆ ಇದೆ. ಈಗಿನ ಮುನ್ಸೂಚೆನೆಯಂತೆ ಮಾರ್ಚ್ 7 ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ತೇವಾಂಶ ಏರಿಕೆಯಾಗಿ ಮಾರ್ಚ್ 8 ರಿಂದ ಗುಡುಗು ಸಿಡಿಲು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮಾರ್ಚ್ 13 ರ ತನಕವೂ ಕರಾವಳಿ ಹಾಗೂ ಕೊಡಗಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಈ ನಡುವೆ ಶಿವರಾತ್ರಿ ಮುಗಿಯುತ್ತಿದ್ದಂತೆ ಸೆಖೆ ಆರಂಭವಾಗಬೇಕಿದ್ದ ಕಾಲದಲ್ಲಿ ಉಷ್ಣಾಂಶ ಮಾತ್ರ ಏರಿಕೆಯಾಗಿ ಶುಷ್ಕ ಹವೆ ಪ್ರಾರಂಭವಾಗಿರುವುದು ಮಳೆ ಬೀಳುವ ಸಾಧ್ಯತೆಯನ್ನು ದೂರ ಮಾಡಬಹುದೆ ? ಎಂಬ ಆತಂಕ ಮನೆಮಾಡಿದೆ. ಈ ವಾಯುಭಾರ ಕುಸಿತವು ಉತ್ತರ ಭಾರತದ ಕಡೆಯಿಂದ ಶುಷ್ಕ ಹವೆಯನ್ನು ಸೆಳೆಯುತ್ತಿದೆ. ಒಂದು ವಿಶ್ಲೇಷಣೆಯಂತೆ ವಾಯುಭಾರ ಕುಸಿತವು ತಮಿಳುನಾಡು ಪ್ರವೇಶಿಸಿದಂತೆ ವಾತಾವರಣದಲ್ಲಿ ತೇವಾಂಶ ಏರಿಕೆಯಾಗಬಹುದು.

ಕರಾವಳಿ ಭಾಗದಲ್ಲಿ ಈಗ ವಾತಾವರಣದ ಉಷ್ಣತೆ 38 ಡಿಗ್ರಿಯಿಂದ 41 ಡಿಗ್ರಿಯವರೆಗೂ ಏರಿಕೆಯಾಗುತ್ತದೆ, ಇಳಿಕೆಯಾಗುತ್ತದೆ. ಈ ನಡುವೆ ವಾತಾವರಣದ ತೇವಾಂಶವೂ ಕಡಿಮೆಯಾಗುತ್ತಿರುವುದು  ಗಮನಾರ್ಹ ಅಂಶವಾಗಿದೆ. ಕರಾವಳಿ ಪ್ರದೇಶದಲ್ಲೂ ಈಗ ಶೇಕಡಾ 12 – 15 ರಷ್ಟು ವಾತಾವರಣದ ತೇವಾಂಶ ಕಂಡುಬರುತ್ತಿದೆ. ಮಲೆನಾಡು ಪ್ರದೇಶದಲ್ಲೂ ತೇವಾಂಶ ಕುಸಿತವಾಗುವ ಕಾರಣದಿಂದ ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ,  ಹೀಗಾಗಿ ಈಚೆಗೆ ಕೆಲವು ವರ್ಷಗಳಿಂದ ಕೃಷಿಗೆ ವಿಪರೀತವಾದ ಬಿಸಿಲಿನ ಸಮಸ್ಯೆ ಕಾಡುತ್ತಿರುವುದು  ಕಂಡುಬರುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು
April 2, 2026
1:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror