14.04.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕೊಡಗು ಉತ್ತಮ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ, ಆಗುಂಬೆ, ಶೃಂಗೇರಿ, ಬಾಳೆಹೊನ್ನೂರು ಸುತ್ತಮುತ್ತ ಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಹೆಚ್ಚಿನ ಭಾಗಗಳಲ್ಲಿ, ಉಡುಪಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.ಶಿವಮೊಗ್ಗ ಅಲ್ಲಲ್ಲಿ, ಚಿಕ್ಕಮಗಳೂರು ಬಹುತೇಕ ಭಾಗಗಳಲ್ಲಿ, ದಾವಣಗೆರೆ, ಚಿತ್ರದುರ್ಗ ಅಲ್ಲಲ್ಲಿ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.
ಮಂಗಳವಾರ ಸಂಜೆ ಪಂಜ, ಕಲ್ಮಡ್ಕ ಪರಿಸರದಲ್ಲಿ ಗಾಳಿ ಮಳೆಯಾಯ್ತು. ಉಳಿದೆಡೆ ಉತ್ತಮ ಮಳೆಯಾಗಿದೆ. ಕರಿಕಳದಲ್ಲಿ 82 ಮಿಮೀ ಮಳೆಯಾದರೆ ಕಲ್ಮಡ್ಕದಲ್ಲಿ 56 ಮಿಮೀ ಮಳೆಯಾಗಿದೆ. ನೆಕ್ರಕಜೆ 60 ಮಿಮೀ , ಬಳ್ಪ 61 ಮಿಮೀ, ಕೇನ್ಯ 51 ಮಿಮೀ, ಎಣ್ಮೂರು ಅಲೆಂಗಾರ 45 ಮಿಮೀ , ಅಯ್ಯನಕಟ್ಟೆ 37 ಮಿಮೀ, ಬಾಳಿಲ 29 ಮಿಮೀ, ಎಣ್ಮೂರು 25 ಮಿಮೀ, ಬೆಳ್ಳಾರೆ ಕಾವಿನಮೂಲೆ 20 ಮಿಮೀ, ಕಮಿಲ 16 ಮಿಮೀ, ಮುರುಳ್ಯ 11 ಮಿಮೀ, ಕೋಡಿಂಬಾಳ 10 ಮಿಮೀ ,ದೊಡ್ಡತೋಟ 7 ಮಿಮೀ, , ಕೈಲಾರು ಬೆಳ್ತಂಗಡಿ 5 ಮಿಮೀ, ಕಡಬ 3 ಮಿಮೀ, ಮರ್ಧಾಳ 3 ಮಿಮೀ, , ಕೆಲಿಂಜ ಬಂಟ್ವಾಳ 2 ಮಿಮೀ, ಕೊಳ್ತಿಗೆ 1 ಮಿಮೀ ಮಳೆಯಾಗಿದೆ.
( ಮಾಹಿತಿ : ಕೃಷಿಕರ ಮಳೆ ಮಾಹಿತಿ ಗುಂಪು )