ನೈರುತ್ಯ ಮುಂಗಾರು ಮಾರುತ ಬೀಸಿದರೂ ಮಳೆ ವೇಗ ಪಡೆದುಕೊಳ್ಳಲಿಲ್ಲ. ಇದೀಗ ತಡವಾಗಿ ಮುಂಗಾರು ಚುರುಕಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಮಳೆ ಕೊಂಚ ಬಲಗೊಳ್ಳುವ ಸಾಧ್ಯತೆ ಇದೆ. ಆದರೆ ಈಗಾಗಲೇ ಮೊದಲ ಎಂಟು ದಿನದಲ್ಲಿ ದೊಡ್ಡ ಕೊರತೆಯನ್ನು ದಾಖಲಿಸಿದೆ.
ಈಗಿನ ಮುನ್ಸೂಚನೆಯಂತೆ ನಾಳೆಯಿಂದ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮುಂಗಾರು ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಆದರೆ ಮತ್ತೆರಡು ದಿನಗಳಲ್ಲಿ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎಂಟು ದಿನಗಳು ದೊಡ್ಡ ಕೊರತೆಯನ್ನು ಮಳೆ ದಾಖಲಿಸಿವೆ. ನೈರುತ್ಯ ಮಾನ್ಸೂನ್‌ನ ನಿಧಾನಗತಿಯ ಪ್ರಗತಿಯು ಈ ವರ್ಷದ ಮಾನ್ಸೂನ್ ಮೊದಲ ವಾರದಲ್ಲಿ ಅಂದರೆ ಜೂನ್ 1 ರಿಂದ 8 ರ ನಡುವೆ -42 ಶೇಕಡಾ (ದೊಡ್ಡ ಕೊರತೆ) ಎಂದು ದಾಖಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel