ವೆದರ್ ಮಿರರ್ | 12.09.2022 | ರಾಜ್ಯದಲ್ಲಿ ಸಾಮಾನ್ಯ ಮಳೆ ಸಾಧ್ಯತೆ| ವಿವಿದೆಡೆ ಮೋಡ ಬಿಸಿಲು ವಾತಾವರಣ

September 12, 2022
10:56 AM

13.09.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿಯಿಂದ ಹೊನ್ನಾವರ ಕಡಲ ತೀರದ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ತುಂತುರು ಮಳೆಯ ಮುನ್ಸೂಚನೆ ಇದೆ.

ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಹ ಮೋಡ, ಬಿಸಿಲು, ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.

ಈ ವಾತಾವರಣವು ಕರಾವಳಿ ಭಾಗಗಳಲ್ಲಿ ಇನ್ನೂ ಒಂದು ವಾರದ ಕಾಲ ಮುಂದುವರಿಯುವ ಲಕ್ಷಣಗಳಿವೆ.
ಅರಬ್ಬಿ ಸಮುದ್ರದ ಮುಂಬೈ ತೀರದ ವಾಯುಭಾರ ಕುಸಿತವು ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುತ್ತಾ ಪಶ್ಚಿಮದ ಕಡೆ ಚಲಿಸುವ ಸಾಧ್ಯತೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror