05.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಉತ್ತರ ಕರ್ನಾಟಕದ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಕರಾವಳಿ ಭಾಗಗಳಲ್ಲಿ, ಬಂಟ್ವಾಳ, ಪುತ್ತೂರು, ಕಾಸರಗೋಡು, ಮೂಡುಬಿದಿರೆ ಬೆಳ್ತಂಗಡಿ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಸುಳ್ಯ, ಸುಬ್ರಹ್ಮಣ್ಯ, ಕಡಿಮೆ ಸ್ವಲ್ಪ ಕಡಿಮೆ ಇರಬಹುದು.
ಕೊಡಗು, ಸಕಲೇಶಪುರ, ಮೂಡಿಗೆರೆ, ಚಾರ್ಮಾಡಿ, ಶಿೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸಿದ್ಧಾಪುರ ಸುತ್ತಮುತ್ತ ಸುಮಾರು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ತುಮಕೂರು, ಉಳಿದ ಚಿಕ್ಕಮಗಳೂರು, ಉಳಿದ ಶಿವಮೊಗ್ಗ, ಚಿತ್ರದುರ್ಗ, ಪಾವಗಡ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ.
ವಾಯುಭಾರ ಕುಸಿತವು ಶಿಥಿಲಗೊಂಡಿದ್ದರಿಂದ ರಾಜ್ಯದಾದ್ಯಂತ ಅಕ್ಟೊಬರ್ 7ರ ತನಕ ಮಳೆಯ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ. 8 ನೇ ತಾರೀಕಿನಿಂದ ಮತ್ತೆ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಉಂಟಾಗಿ ಮಳೆ ಹೆಚ್ಚಾಗುವ ಸೂಚನೆಗಳಿವೆ.