09.11.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಒಣ ಹವೆಯ ಮುನ್ಸೂಚನೆ ಇದೆ.
ಚಾಮರಾಜನಗರ ಸಂಜೆ ಅಥವಾ ರಾತ್ರಿ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದ್ದರೆ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಈಗಾಗಲೇ ಶ್ರೀಲಂಕಾ ಪೂರ್ವ ಕರಾವಳಿ ಸಮೀಪ ವಾಯುಭಾರ ಕುಸಿತ ಉಂಟಾಗಿದ್ದು, ಈಗಿನ ಪ್ರಕಾರ ನವೆಂಬರ್ 11 ಅಥವಾ 12ರಂದು ತಮಿಳುನಾಡಿನ ವೇಲಂಕಣಿ, ನಾಗಪಟ್ಟಿನಮ್ ಕರಾವಳಿಗೆ ತಲಪುವ ಸಾಧ್ಯತೆ ಇದೆ.
ಇದರ ಪರಿಣಾಮದಿಂದ ರಾಜ್ಯದಾದ್ಯಂತ ತಾತ್ಕಾಲಿಕವಾಗಿ ಒಣ ಮುಂದುವರಿಯಲಿದ್ದು ನವೆಂಬರ್ 12ರಿಂದ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ.Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

