27.11. 2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಸಂಜೆ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಕೊಡಗು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮೋಡ ಕವಿದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಅಂಡಮಾನಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗಿದ್ದು, ಬಲಗೊಂಡರೆ ಹಿಂಗಾರು ಹಿಂದೆ ಸರಿಯುವ ಸಾಧ್ಯತೆ ಇದೆ. ಈಗಿನ ಪ್ರಕಾರ ಡಿಸೆಂಬರ್ 1 ರಂದು ಈ ತಿರುಗುವಿಕೆಯು ತಮಿಳುನಾಡು ಕರಾವಳಿಗೆ ತಲಪುವ ಲಕ್ಷಣಗಳಿವೆ.

ಕೃಷಿಕ, ಹವಾಮಾನ ಆಸಕ್ತ
Be the first to comment on "ವೆದರ್ ಮಿರರ್ | 26-11-2022 | ಕರಾವಳಿ ಜಿಲ್ಲೆಗಳಾದ್ಯಂತ ಸಂಜೆ ಮೋಡ ಕವಿದ ವಾತಾವರಣ | ಅಲ್ಲಲ್ಲಿ ಮಳೆ ಸಾಧ್ಯತೆ|"