13.06.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಹೆಚ್ಚಿನ ಅವಧಿಯೂ ಮೋಡದ ವಾತಾವರಣದೊಂದಿಗೆ ಕರಾವಳಿ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಕೊಡಗು, ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚಿಕ್ಕಮಗಳೂರು ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರವಾಗಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ.
ಮುಂಗಾರು ಹಾಗೂ ಬಿಪರ್ ಜೋಯಿ:
ಮುಂಗಾರು ದುರ್ಬಲಗೊಂಡಿದ್ದು, ಅರಬ್ಬಿ ಸಮುದ್ರದ ಚಂಡಮಾರುತವು ಪಾಕಿಸ್ತಾನ – ಭಾರತದ ಗುಜರಾತ್ ಗಡಿಭಾಗದ ಮೂಲಕ ಪ್ರವೇಶಿಸುತ್ತಿದ್ದಂತೆಯೇ ಮತ್ತಷ್ಟು ದುರ್ಬಲಗೊಳ್ಳವ ಲಕ್ಷಣಗಳಿವೆ. ಈಗಿನ ಮುನ್ಸೂಚನೆಯಂತೆ ಜೂನ್ 18 ಮತ್ತೆ ಚುರುಕಾಗುವ ಸಾಧ್ಯತೆ ಇದೆ. (ರಾಜ್ಯದ ಒಳನಾಡು ಭಾಗಗಳಲ್ಲಿ ಸಹ)
ಬಿಪರ್ ಜೊಯಿ ಚಂಡಮಾರುತವು ಜೂನ್ 15ರ ಸಂಜೆ ಪಾಕಿಸ್ತಾನ ಭಾರತ (ಗುಜರಾತ್) ಗಡಿ ಭಾಗಕ್ಕೆ ಅಪ್ಪಳಿಸುವ ಲಕ್ಷಣಗಳಿವೆ. ಪಾಕಿಸ್ತಾನದ ಹೈದರಾಬಾದ್ ಮೂಲಕ ರಾಜಸ್ತಾನಕ್ಕೆ ಪ್ರವೇಶಿಸಿ ಶಿಥಿಲಗೊಳ್ಳುವ ಸಾಧ್ಯತೆ ಇದೆ.
ಈಗಿನ ಮುನ್ಸೂಚನೆಯಂತೆ ಜೂನ್ 14 ರಿಂದ 17ರ ತನಕ ಕರಾವಳಿ ಭಾಗಗಳಲ್ಲಿ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸಲು ಸೂಕ್ತ ಸಮವಾಗಿದೆ .