ಹವಾಮಾನ ವರದಿ | 05.11.2025 | ಎಲ್ಲೆಲ್ಲಾ ಮಳೆ ನಿರೀಕ್ಷೆ..? ನಿರೀಕ್ಷೆಯಂತೆ ಮಳೆಯಾಗದಿರಲು ಕಾರಣವೇನು..?

November 5, 2025
2:24 PM

06.11.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಮಣ್ಯ ಸುತ್ತಮುತ್ತ ಪ್ರದೇಶಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ತುಂತುರು ಮಳೆಯ ಸಾಧ್ಯತೆ ಇದೆ.
ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ.
ಈಗಿನಂತೆ ನ. 7 ಹಾಗೂ 8ರಂದು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಮಲೆನಾಡು : ಕೊಡಗು, ಹಾಸನ ಹಾಗೂ ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಮಲೆನಾಡು ಜಿಲ್ಲೆಗಳಲ್ಲಿ ನ. 8ರ ತನಕ ಮಳೆಯ ಮುನ್ಸೂಚನೆ ಇದೆ.

ಉತ್ತರ ಒಳನಾಡು : ಉತ್ತರ ಒಳನಾಡಿನ ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 2 ದಿವಸಗಳಲ್ಲಿ ಬಿಸಿಲು ಹಾಗೂ ಒಣ ಹವೆ ಆವರಿಸುವ ಲಕ್ಷಣಗಳಿವೆ.

ದಕ್ಷಿಣ ಒಳನಾಡು : ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ( ಪಾವಗಢ ಸಹಿತ), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ನ. 8ರ ತನಕ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ.

ಅರಬ್ಬಿ ಸಮುದ್ರದ ಕಡೆಯಿಂದ ಬೀಸುತ್ತಿರುವ ಗಾಳಿಯು ಕ್ಷೀಣಿಸುತ್ತಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ. ಫಿಲಿಪ್ಪೀನ್ಸ್ ಪಶ್ಚಿಮ ಕರಾವಳಿಯಲ್ಲಿ ಪ್ರಭಲ ಚಂಡಮಾರುತದ ಪ್ರಭಾವದಿಂದ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಇದ್ದರೂ, ಗಾಳಿಯು ಫಿಲಿಪ್ಪೀನ್ಸ್ ಕಡೆ ಸೆಳೆಯಲ್ಪಡುವುದರಿಂದ ರಾಜ್ಯದ ಒಳನಾಡು ಭಾಗಗಳಲ್ಲಿಯೂ ಮಳೆ ನಿರೀಕ್ಷೆಗಿಂತ ಕಡಿಮೆ ಇರಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror