ವೆದರ್‌ ಮಿರರ್‌ | ಕರಾವಳಿ ತೀರ ಭಾಗಗಳಲ್ಲಿ ಉಷ್ಣಾಂಶ ಏರಿಕೆಯಾಗಲು ಕಾರಣ ಏನು ?

March 4, 2023
11:28 AM

2022ರ ಮಾರ್ಚ್ 3 ರಂದು ಅಂದರೆ ಕಳೆದ ವರ್ಷ ಬಂಗಾಳಕೊಲ್ಲಿಯಲ್ಲಿ ಪ್ರಭಲ ವಾಯುಭಾರ ಕುಸಿತ ಉಂಟಾದರೂ ಕರ್ನಾಟಕದ ಕರಾವಳಿ ಭಾಗಗಳಲ್ಲಿ ತುಂತುರು ಮಳೆ ಮಾತ್ರ ಆಗಿತ್ತು. ಮಾರ್ಚ್ 19, 20 ರಿಂದ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ ಆರಂಭವಾಗಿತ್ತು.

Advertisement

ಆದರೆ, ವರ್ಷ ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈಗ ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯು ನಮ್ಮ ಒಳನಾಡು, ಮಲೆನಾಡು, ಕರಾವಳಿ ಭಾಗಗಳಿಗೆ ತಲಪುವಾಗ ಬಿಸಿಲಿನ ಪ್ರಭಾವದಿಂದ (ಮೋಡವಿಲ್ಲದ್ದರಿಂದ) ಶುಷ್ಕಗೊಂಡು ಉಷ್ಣತೆ ಇನ್ನಷ್ಟು ಹೆಚ್ಚಿಸುತ್ತಿದೆ.

ಅರಬ್ಬಿ ಸಮುದ್ರದ ಕಡೆಯಿಂದ ಗಾಳಿ ಬೀಸಲು ಆರಂಭಿಸದ ಹೊರತು ವಾತಾವರಣದಲ್ಲಿ ತೇವಾಂಶ ಕೊರತೆ ಮುಂದುವರಿಯಲಿದೆ ಹಾಗೂ ಮಳೆಯ ಸಾಧ್ಯತೆಯೂ ಕ್ಷೀಣಿಸುತ್ತಿದೆ. ಹೀಗಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ಪಶ್ಚಿಮದ ಕಡೆ ಬೀಸುವ ಗಾಳಿಯ ಪ್ರಭಾವ ಕಡಿಮೆಯಾಗಬಹುದು. ಅದಿಲ್ಲದಿದ್ದರೆ ರಾಜ್ಯದಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಬಹುದು.

ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಇವತ್ತು, ನಾಳೆಯಿಂದ ಮೋಡ, ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಇದರ ಪ್ರಭಾವ ಕರ್ನಾಟಕದ ಕರಾವಳಿ ಭಾಗಗಳಿಗೂ ಉಂಟಾದರೆ ವಾತಾವರಣ ಬದಲಾಗಬಹುದು. ವಾತಾವರಣದಲ್ಲಿ ತೇವಾಂಶ ಉಂಟಾಗಿ ಹಗಲಿನ ಉಷ್ಣಾಂಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಈಗಿನ ವಿದ್ಯಮಾನ ಪ್ರಕಾರ ಇವತ್ತಿನಿಂದ ರಾಜ್ಯದ ಕರಾವಳಿ ತೀರ ಭಾಗಗಳಲ್ಲಿ ಪಶ್ಚಿಮ ಹಾಗೂ ಪೂರ್ವದ ಗಾಳಿಯು ಸಂಧಿಸಲಿರುವುದರಿಂದ ಕರಾವಳಿ ತೀರ ಭಾಗಗಳಲ್ಲಿ ಉಷ್ಣಾಂಶ ಏರಿಕೆಯಾಗಬಹುದು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಮುಂದಿನ 7 ದಿನಗಳ ಉತ್ತಮ ಮಳೆ – ಹವಾಮಾನ ಇಲಾಖೆ
July 10, 2025
8:26 AM
by: ದ ರೂರಲ್ ಮಿರರ್.ಕಾಂ
ತೆಂಗು ಉತ್ಪಾದನೆ ಹೆಚ್ಚಿಸಲು‌ ಕೇರಳದಲ್ಲಿ ಪ್ಲಾನ್‌ | ಹೊಸ ಕೋರ್ಸ್‌ ಅಭಿವೃದ್ಧಿಪಡಿಸಲು ಚಿಂತನೆ |
July 10, 2025
8:18 AM
by: ದ ರೂರಲ್ ಮಿರರ್.ಕಾಂ
ಶ್ರಾವಣ ಮಾಸದಲ್ಲಿ ಮೊಸರನ್ನು ತಿನ್ನಬಾರದಂತೆ ಯಾಕೆ?
July 10, 2025
7:24 AM
by: ದ ರೂರಲ್ ಮಿರರ್.ಕಾಂ
ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group