ನಿನ್ನೆ ಬಾರಿ ಮಳೆ ತಾನೆ..? ಇನ್ನು ತೋಟಕ್ಕೆ ನೀರು ಹಾಕುವ ಕೆಲ್ಸ ಇಲ್ಲ ಅಂತಾ ಗುಮಾನಿ ಇದೆ. ಈಗಾ..? ಈ ಕೆಳಗಿನ ಮೂರು ಜನ ಅಥವಾ ನನ್ನ ಕಣ್ತಪ್ಪಿನಿಂದ ಬಾಕಿ ಅಗಿರಬಹುದಾದ ಅಂತಹಾ ಇತರರು ಇನ್ಮುಂದೆ ರೈತರಿಗೆ ಬಹಳ ನೆನಪಾಗುವ ಸಂಭವ ಕಡಿಮೆ.
ಇಂದು ಹವಾಮಾನದ ಬಗ್ಗೆ ಸಾಟೆಲೈಟ್ ಮೂಲಕ ಬಹಳ ಅಧ್ಯಯನ ನಡೀತದೆ. ಅದರಲ್ಲಿ ಡಿಗ್ರೀ ಮಾಡಿದೋರೂ ತಜ್ನರೂ ಇರ್ತಾರೆ. ಹಾಗಂತ ಕೆಳಗೆ ಕಾಣುವ ಸಾಟಲೈಟ್ ಚಿತ್ರವನ್ನು ನೀವೂ ಬಹಳ ಬಾರಿ ನೋಡಿದ್ದೀರಿ. ಹಾಗಂತ ಮುಗಿಲು ಒಂದು ಕಡೆ ಕಂಡಿದೆ ಬಿಟ್ರೆ ಬೇರೇನಾದ್ರೂ ನಿಮಗೆ ಅರ್ಥ ಆಗಿದೆಯಾ..?
ಮೇಲೆ ಕಾಣುವ ಸಾಯಿಶೇಖರ್, ರಘುರಾಮ ಕಂಪದಕೋಡಿ, ಕೃಷ್ಣ ರಾವ್ (ಫೋಟೋ ಸಿಕ್ಕಿಲ್ಲ) ಹಾಗೂ ತತ್ಸಮಾನ ಇತರರು ಇದರ ಅಧ್ಯಯನಕ್ಕೆ ಗಟ್ಟಿ ಕೂತಿದ್ದಾರೆ. ಅದಕ್ಕೆ ಸಂಬಂಧ ಪಟ್ಟಂತೆ ಬಹಳ ಓದುವುದನ್ನೂ ಮಾಡಿರ್ತಾರೆ. ಆ ಮೇಲೆ ಅವರ ಹವಾಮಾನ ವರದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದಾರೆ. ಆರಂಭದಲ್ಲಿ ಅವರ ಭವಿಷ್ಯಗಳೂ ಗುರಿ ತಪ್ಪಿದ್ದಿರಬಹುದು. ಮತ್ತೆ ಅದನ್ನು ಸುಧಾರಿಸಿದ್ದಾರೆ. ಹಾಗಾಗಿ ಎಲ್ಲ ಕೃಷಿಕರು ಇವರು ಏನು ಬರೀತಾರೆ ಅಂತಾ ಕಾದು ಕೂರುವಂತೆ ಮಾಡಿದ್ದಾರೆ. ಎಷ್ಟೋ ಜನ ಅವರ ನಿತ್ಯ ಕೃಷಿಯಲ್ಲಿ ನಿರ್ಣಯಗಳನ್ನು ಇವರ ಭವಿಷ್ಯವಾಣಿಯ ಆಧಾರದಲ್ಲೇ ಬದಲು ಮಾಡ್ಕೊಂಡಿದ್ದಾರೆ. ಆ ಒಂದೇ ಕಾರಣಕ್ಕೆ ಇವರೆಲ್ಲ ಈ ಕ್ಷಣಕ್ಕೆ ಬಹಳ ವಂದನೀಯರು…
ತುಂಬಾ ಜನ ಅವರನ್ನು ಟೀಕೆಯೂ ಮಾಡಿರ್ತಾರೆ. ಅವರೇನು ತಯಾರಿಸಿದ ಚಿತ್ರ ಅದು ಅಲ್ಲ. ಅದು ಕೇವಲ ಸಾಟೆಲೈಟ್ ಫೋಟೋದ ಸ್ಕ್ರೀನ್ ಶಾಟ್. ಅದು ಯಾರಿಗೂ ಸಿಗ್ತದೆ. ಅಲ್ಲದೇ ಅವರು ಹೇಳಿದ್ದೂ ಬಹಳ ಬಾರಿ ಸರಿಯೂ ಆಗಿಲ್ಲ. ಅಂತಾರೆ. ಆದರೆ ಅದೇ ಸ್ಕ್ರೀನ್ ಶಾಟ್ ಹಿಡ್ಕೊಂಡು ನಾಲ್ಕು ವಾಖ್ಯ ಬರೆಯುವ ತಾಖತ್ತು ಇದೆಯಾ ಅಂತಾ ಕೇಳಿದರೆ ಯಾರಿಗೂ ಇಲ್ಲವೇ ಇಲ್ಲ. ಹಾಗೇ ನೋಡಿದರೆ ಯಂ.ಯಸ್ಸಿ , ಯಂ.ಏ. ಮಾಡಿದೋರು ಬರೆಯುವುದು ಕೂಡಾ ಅವರಿಗಿಂತ ಮೊದಲು ಯಾರೋ ತಜ್ನರು ಬರೆದ ಪುಸ್ತಕಗಳನ್ನು ಓದಿದ ಆಧಾರದಲ್ಲೆ ಅಲ್ವಾ..? ಇನ್ನು ತುಂಬಾ ಜನ ಡಾಕ್ಟರೇಟ್ ಹೇಗೆ ಮಾಡ್ತಾರೆ ಅನ್ನೋ ಸತ್ಯವೂ ನಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿರುತ್ತೆ.
ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ ಅರ್ಥ ಮಾಡುವಂತೆ ಹಂಚಿಕೊಳ್ಳೋದು ಒಂದು ಉಪಯುಕ್ತ ಸಮಾಜ ಸೇವೆಯೇ.
ಸರಳ ಅರ್ಥಶಾಸ್ತ್ರ ಅಂತ ಬರೆದಾಗ, ತುಂಬಾ ಜನ ನನಗೆ ಹೇಳಿದ್ದಾರೆ..ಬಹಳ ಚೆನ್ನಾಗಿದೆ. ಎಕಾನಾಮಿಕ್ಸ್ ಇಷ್ಟು ಸರಳ ಅಂತಾ ಗೊತ್ತೇ ಇರಲಿಲ್ಲ ಅಂತಾ. ವಾಸ್ತವದಲ್ಲಿ ಎಕಾನಾಮಿಕ್ಸ್ ಎಂದಿಗೂ ಕಬ್ಬಿಣದ ಕಡಲೆಯೇ. ಒಂದು ಸರಳ ಅರ್ಥಶಾಸ್ತ್ರದ 600 ಶಬ್ಧದ ಲೇಖನ ಬರೆಯ ಬೇಕಾದರೆ ಆ ಮೊದಲು ಓದಿದ ಎಷ್ಟೋ ಸಂಗತಿಗಳು ಬಂಡವಾಳ ಆಗಬೇಕಾಗ್ತದೆ. ಅದು ಒಂದು ದಿನದಲ್ಲಿ ಆಗುವ ಸಂಗತಿ ಅಲ್ಲ.. ಹಾಗಾಗಿ ಯಾರೋ ಒಬ್ಬ ಹಾರಿಕೆಯ ಕಾಮೆಂಟು ಹಾಕಿದರೆ ಅವರಿಗೆ ಮುಖಕ್ಕೆ ಹೊಡಿಯುವಂತೆ ಉತಚತರಿಸೋಣ ಅಂತಾ ತುರಿಸ್ತದೆ.
ನಾನು ಭಾಜಪಾದ ಕಾರ್ಯಪದ್ದತಿಯ ಬಗ್ಗೆ (ಈಗ ಕಡಿಮೆ) ಲೇಖನ ಬರೆದ್ರೆ ಬಹಳ ವೈರಲ್ ಆಗ್ತದೆ.ತುಂಬಾ ಜನ ಭಾಜಪ ಸ್ನೇಹಿತರಿಗೆ ಮುಜುಗರವೂ ಆಗ್ತದೆ. ಚುನಾವಣೆಯ ಸಂದರ್ಭದಲ್ಲಿ.. ವಿಶ್ವಣ್ಣ ಚುನಾವಣೆ ಒಂದು ಕಳ್ಕೊಳ್ಳೋ ವರೆಗೆ ಏನು ಬರೆಯದಿದ್ರೆ ಸಾಕು ಅಂತಾ ಆತಂಕ ಪಡ್ತಾರೆ. ಹಾಗಾಂತಾ ಅಂತಹಾ ಒಂದು ಲೇಖನ ಬರೀಬೇಕಾದ್ರೆ ಅದರ ಮೊದಲು ಕೆಲವು ದಶಕಗಳ ಕಾಲ ಊರಿಂದೂರಿಗೆ ಓಡಾಟ ಮಾಡಿರ್ಬೇಕಾಗ್ತದೆ ಅಂತಾ ಅರಿವಿಗೆ ಬರಲ್ಲ.
ಮಾಮೂಲಿ ಕೃಷಿಕರಾಗಿ ಸಾಯಿಶೇಖರ್, ರಘುರಾಮ ಕಂಪದಕೋಡಿ ಹಾಗೂ ಕೃಷ್ಣ ರಾವ್ ರವರು ದ.ಕ. ಜಿಲ್ಲೆಯ ರೈತರು ನೀರಿಲ್ಲದೆ ಕಂಗಾಲಾಗಿರುವಾಗ ಅವರಿಗೆ ಒಂದು ಭರವಸೆಯ ಕಿರಣ ಆಗಿದ್ದಾರೆ. ಮಳೆ ಇಲ್ಲದ ಕಾಲದಲ್ಲಿ ಕೃಷಿಯಲ್ಲಿ ಮುಂದೇನು ಅಂತಾ ಹತಾಶರಾಗಿರುವಾಗ ಇವರ ಲೇಖನಗಳು ಭವಿಷ್ಯದ ಬಗ್ಗೆ ಉತ್ಸಾಹವನ್ನು ತುಂಬಿದೆ. ಇವರ ಅಧ್ಯಯನಕ್ಕೆ ಸಹಸ್ರಾರು ಕೃಷಿಕರ ಪರವಾಗಿ ಒಂದು ದೊಡ್ಡ ಸಲಾಂ. ಭಗವಂತ ಅವರಿಗೆ ಆಯುರಾರೋಗ್ಯ, ಐಶ್ವರ್ಯ ಹಾಗೂ ಇನ್ನು ಹೆಚ್ಚಿನ ಅಧ್ಯಯನ ಶಕ್ತಿಯನ್ನು ಕರುಣಿಸಲು ಅಂತಾ ಮನಸಾ ಪ್ರಾರ್ಥನೆ.
(ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಹವಾಮಾನ ಮಾಹಿತಿ ನೀಡುವ ಕೃಷಿಕ ಸ್ನೇಹಿಗಳಾದ ಸಾಯಿಶೇಖರ್, ರಘುರಾಮ ಕಂಪದಕೋಡಿ ಹಾಗೂ ಕೃಷ್ಣ ರಾವ್ ಅವರ ಬಗ್ಗೆ ತಮ್ಮ ಪೇಸ್ ಬುಕ್ ನಲ್ಲಿ ಬರೆದಿದ್ದಾರೆ. ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾಯಿಶೇಖರ್ ಅವರು ದ ರೂರಲ್ ಮಿರರ್.ಕಾಂ ಗೂ ಹವಾಮಾನ ವರದಿಯ ವಿಶ್ಲೇಷಣೆ ಮಾಡಿ ಬರೆಯುತ್ತಿದ್ದಾರೆ. ಹೀಗಾಗಿ ಈ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ. )