ಸೆ.28 ರಂದು ದೇಶದ ವಾಯುವ್ಯ ಭಾಗದಿಂದ ಹಿಂದೆ ಸರಿಯಲು ಆರಂಭಿಸಿದ್ದ ನೈರುತ್ಯ ಮುಂಗಾರು ಮಾರುತ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿನ ವಾಯುಭಾರ ನಿಮ್ನತೆಯ ಪರಿಣಾಮದಿಂದಾಗಿ ಪೂರ್ತಿ ದೇಶದಿಂದ ಹಿಂದೆ ಸರಿಯುವುದು ವಿಳಂಬವಾಗಿತ್ತು.
ಮುಂದಿನ ಮೂರು – ನಾಲ್ಕು ದಿನಗಳಲ್ಲಿ ಪೂರ್ತಿ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎನ್ನುತ್ತದೆ ಹವಾಮಾನ ಇಲಾಖೆ. ಸಾಮಾನ್ಯವಾಗಿ ಸೆ.ಮೂರನೆ ವಾರದಲ್ಲಿ ಹಿಂದೆ ಸರಿಯಲು ಆರಂಭವಾಗಿ ಅಕ್ಟೋಬರ್ ಪ್ರಥಮ ವಾರದ ಮೊದಲು ಪೂರ್ತಿ ದೇಶದಿಂದ ಹಿಂದೆ ಸರಿಯುವುದು ವಾಡಿಕೆ.
ಕಳೆದ ವರ್ಷ 1961 ರ ಬಳಿಕ ಅತ್ಯಂತ ತಡವಾಗಿ ಅಕ್ಟೋಬರ್ 9 ರಂದು ಹಿಂದೆ ಸರಿಯಲು ಆರಂಭವಾಗಿ ಕೇವಲ ಒಂದು ವಾರದಲ್ಲೇ ಪೂರ್ತಿ ಹಿಂದೆ ಸರಿದು ಹಿಂಗಾರು ಮಾರುತದ ಆರಂಭಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು.
ನಿನ್ನೆ ದಿನ ಬಿಸಿಲು ಮೋಡದ ವಾತಾವರಣ. ಸುಳ್ಯ, ಕಡಬ,ಪುತ್ತೂರು,ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಮಡಿಕೇರಿ ಪ್ರದೇಶಗಳಲ್ಲಿ ಮಳೆ ದಾಖಲಾಗಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel