ಸ್ವಾತಿ ನಕ್ಷತ್ರದ ಆರನೆ ದಿನ ನಿನ್ನೆ ಸುಳ್ಯ, ಕಡಬ,ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಕಾಸರಗೋಡು,ಮಡಿಕೇರಿ,ಮಂಗಳೂರು ಭಾಗದಲ್ಲಿ  ಮಳೆ ಇರಲಿಲ್ಲ.
ಈ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ.
ಇತಿಹಾಸದ ಪುಟಗಳನ್ನು ತಿರುವಿದಾಗ…..
1999 ರಲ್ಲಿ ಇದೇ ದಿನ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಭೀಕರ ಚಂಡಮಾರುತ ಅಪಾರ ಪ್ರಮಾಣದ ಸಾವು ನೋವು, ವ್ಯಾಪಕ ಹಾನಿ ಉಂಟು ಮಾಡಿತ್ತು. ಮೂವತ್ತು ಅಡಿಗೂ ಅಧಿಕ ಎತ್ತರದ ಸಮುದ್ರದ ಅಲೆಗಳು. ಅಳತೆಗೆ ಸಿಗದ ಪ್ರಮಾಣದ ಮಳೆ. ಸಂತ್ರಸ್ತ ಜನರು ಒಂದು ಕೋಟಿಗೂ ಅಧಿಕ. ಐವತ್ತು ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿ. ಹತ್ತು ದಿನಗಳ ಅವಧಿಯಲ್ಲಿ ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ ಎರಡನೇ ಭೀಕರ ಚಂಡಮಾರುತ ಇದಾಗಿತ್ತು.
Advertisement
							 ಇದು ನಮ್ಮ YouTube ಚಾನೆಲ್ -                                
              Subscribe ಮಾಡಿ ಬೆಂಬಲಿಸಿ 
							Advertisement
							 Rural Mirror Special  |                              
              Subscribe Our Channel 
							Advertisement
                                                                
                                                                
                                                                
                                                         
								 
															 
															


 
															 
															 
															