ದೂರವಾಯ್ತಾ ಮಳೆ ? | ಮಂಜು ಮಂಜಾಯಿತು ಮುಂಜಾನೆ | ಏನಿದೆ ವೆದರ್‌ ರಿಪೋರ್ಟ್‌ನಲ್ಲಿ ? |

August 25, 2021
10:44 AM

ಬೆಳಗಿನ ಚಳಿ ಹಾಗೂ ಹಿಮ ನೋಡಿ ಹಿರಿಯರು ಹೇಳುವುದು  ಹೀಗೆ…ಮಳೆ ದೂರವಾಯ್ತಾ ?. ಕಳೆದ ಅನೇಕ ದಿನಗಳ ಮಳೆಗೆ ಕೊಂಚ ವಿರಾಮ ಸಿಕ್ಕಿದೆ. ಬುಧವಾರ ಬೆಳಗ್ಗೆ ಮಲೆನಾಡು ಭಾಗದ  ಹಲವು ಕಡೆಗಳಲ್ಲಿ  ಮಂಜು ಮಸುಕಿದ ವಾತಾವರಣ ಕಂಡುಬಂದಿದೆ. ಮಳೆಯೂ ಕಳೆದ ಮೂರ್ನಾಕು ದಿನಗಳಿಂದ ದೂರವಾಗಿದೆ. ಮಂಜು ಬೀಳಲು ಆರಂಭದವಾದರೆ ಮಳೆ ದೂರವಾಗುತ್ತದೆ ಎನ್ನುವುದು  ಹಿರಿಯರು ಹೇಳುವ ಮಾತು, ಆದರೆ ಹವಾಮಾನ ಮಾಹಿತಿ ಪ್ರಕಾರ  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

ಉಳಿದಂತೆ  ಆಗುಂಬೆ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್ ಹಾಗೂ ಗುಲ್ಬರ್ಗ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ತುಮಕೂರು, ಹಾಸನ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮೊದಲಾದ ಕಡೆ ಮಳೆ ಮುನ್ಸೂಚನೆ ಇದೆ.

ಆ.27  ರ ಬಳಿಕ 30 ರವರೆಗೆ ಕೇರಳದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ.ಕಾಸರಗೋಡು,  ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?
March 29, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror