ಕರಾವಳಿ ಜಿಲ್ಲೆಗಳಲ್ಲಿ ಇಂದು ಬಿಸಿಲಿನ ವಾತಾವರಣ ಕಂಡುಬರಲಿದೆ. ಆದರೆ ಸುಬ್ರಹ್ಮಣ್ಯ ˌ ಬೆಳ್ತಂಗಡಿ ಸುತ್ತಮುತ್ತ ಸಾಧಾರಣ ಮಳೆ ಬರುವ ಸಂಭವ ಇದೆ. ಸುಳ್ಯ ಪುತ್ತೂರು ತಾಲೂಕಿನ ಕೆಲವೆಡೆ ತುಂತುರು ಮಳೆಯಾಗಬಹುದು. ಉಳಿದ ಪ್ರದೇಶಗಳಲ್ಲಿ ಮಳೆ ಸಾಧ್ಯತೆ ಇಲ್ಲ. ಕರಾವಳಿಯಾದ್ಯಂತ ರಾತ್ರಿ ಮೋಡವಿರಬಹುದು. ಸುಬ್ರಹ್ಮಣ್ಯ ಆಸುಪಾಸಿನ ಕೊಲ್ಲಮೊಗ್ರ, ಕಲ್ಲಾಜೆ, ಸೇರಿದಂತೆ ಹಲವು ಕಡೆ ಬೆಳಗ್ಗೆಯೇ ಗುಡುಗು ಆರಂಭವಾಗಿದೆ.
Advertisement
ಕೊಡಗು, ಸಕಲೇಶಪುರ, ಮೂಡಿಗೆರೆ, ಶೃಂಗೇರಿ, ಕುದುರೆಮುಖ, ಚಿಕ್ಕಮಗಳೂರು, ಉತ್ತಮ ಮಳೆಯ ಮುನ್ಸೂಚನೆ ಇದೆ. ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ.
ಕಾಸರಗೋಡು ಮೋಡದೊಂದಿಗೆ ಒಂದೆರಡು ಕಡೆ ( ಮುಳ್ಳೇರಿಯ, ಈಶ್ವರಮಂಗಲ ಸುತ್ತಮುತ್ತ) ತುಂತುರು ಮಳೆಯ ಸಾಧ್ಯತೆಯೂ ಇದೆ. ದಕ್ಷಿಣ ಹಾಗೂ ಉಡುಪಿ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣ ಇರಲಿದ್ದು ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ದಕ್ಷಿಣ ಕನ್ನಡ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಗಾಳಿ ಮಹತ್ವದ ಪಾತ್ರ ವಹಿಸಲಿದೆ. ಉತ್ತರ ಕನ್ನಡ ಅಲ್ಲಲ್ಲಿ ಮೋಡ ಮಾತ್ರ ಇರಬಹುದು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಉಳಿದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಹಾಗೂ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಇವತ್ತಿನಿಂದ ಕೇರಳ ಅರಬ್ಬಿ ಸಮುದ್ರ ಕಡೆಯಿಂದಲೂ ಮೋಡಗಳು ಕಾಣಿಸಿಕೊಳ್ಳಲಿದ್ದು ದಕ್ಷಿಣ ಹಾಗೂ ಮಧ್ಯ ಕೇರಳ ಕರಾವಳಿಯ ಹಲವೆಡೆ ಮಳೆಯ ಮುನ್ಸೂಚನೆ ಇದೆ. ಇನ್ನೆರಡು ದಿನಗಳಲ್ಲಿ ಕಾಸರಗೋಡು ಹಾಗೂ ದಕ್ಷಿಣದ ಕರಾವಳಿಯಲ್ಲೂ ಮಳೆಯ ಸಾಧ್ಯತೆ ಇದೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement