ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲ ಕಡೆ ಭರ್ಜರಿ ಮಳೆ ಸುರಿದಿದೆ..
ಈಗಲೂ ಮುಂದುವರಿದಿದೆ.. ಉತ್ತರ ಕರ್ನಾಟಕ ಭಾಗದಲ್ಲಿ ಕೂಡಾ ಪ್ರವಾಹದ ಪರಿಸ್ಥಿತಿ ಉಂಟಾಗಿದೆ..
ಗರಿಷ್ಟ ಮಳೆ 160 ಮಿ.ಮೀ. ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ದಾಖಲಾಗಿದೆ.
ಕೆಲಿಂಜ 147, ಮಂಚಿ 143, ಇಳಂತಿಲ-ಕೈಲಾರು 135, ಆರ್ಯಾಪು-ಬಂಗಾರಡ್ಕ 130, ಬೆಳ್ತಂಗಡಿ ನಗರ 128,
ಅಡೆಂಜ-ಉರುವಾಲು 118, ಕೆದಿಲ 115,
ಎಣ್ಮೂರು 113, ಮುಳ್ಯ-ಅಜ್ಜಾವರ 112,
ಸುಳ್ಯ ನಗರ 105, ಕಾಸರಗೋಡಿನ ಕಲ್ಲಕಟ್ಟ 101
ಕಡಬ 98, ಬಲ್ನಾಡು 95, ಅಯ್ಯನಕಟ್ಟೆ 93,
ಬಾಳಿಲ 92, ಕಲ್ಮಡ್ಕ 91, ಕಡಬ ತಾಲೂಕಿನ ನೆಲ್ಯಾಡಿ ,ಸುಳ್ಯ ತಾಲೂಕಿನ ಮಡಪ್ಪಾಡಿ ತಲಾ 85, ಕೋಡಿಂಬಳ-ತೆಕ್ಕಡ್ಕ, ಮುಡಿಪು-ಕೈರಂಗಳ ತಲಾ 83, ಬಳ್ಪ 80, ವಾಲ್ತಾಜೆ-ಕಂದ್ರಪ್ಪಾಡಿ 77, ಸುಬ್ರಹ್ಮಣ್ಯ 71, ಕಮಿಲ 70, ಕಲ್ಲಾಜೆ 67, ಶಾಂತಿಗೋಡು 65, ಮೆಟ್ಟಿನಡ್ಕ 63, ದೊಡ್ಡತೋಟ 62,
ಹಾಲೆಮಜಲು, ಚೊಕ್ಕಾಡಿ ತಲಾ 59,
ಕೊಳ್ತಿಗೆ-ಎಕ್ಕಡ್ಕ 56, ಹರಿಹರ-ಮಲ್ಲಾರ 52, ಕೊಲ್ಲಮೊಗ್ರ 48, ಎಂ.ಚೆಂಬು 42, ತೊಡಿಕಾನ 32 ಮಿ.ಮೀ.ನಷ್ಟು ಮಳೆಯಾಗಿದೆ…
ಇತಿಹಾಸದ ಪುಟಗಳನ್ನು ತಿರುವಿದಾಗ ….
2002 ರ ಅಕ್ಟೋಬರ್ 11,12,13 ರ ಸತತ ಮೂರು ದಿನದಲ್ಲಿ 295 ಮಿ ಮೀ ಮಳೆ ದಾಖಲಾಗಿತ್ತು.. ಅಕ್ಟೋಬರ್ ತಿಂಗಳ ಅಪರೂಪದ ವಿದ್ಯಮಾನವಾಗಿ ರಾಜ್ಯಾದ್ಯಂತ ಆ ಮೂರು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು…