ಈ ಭೂಮಿ ಮೇಲೆ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪ್ರಭೇದದ ಮರಗಿಡಗಳು ಬೆಳೆಗಳು ಬೆಳೆದಿವೆ. ಇದರಲ್ಲಿ ಶೇಕಡ ಒಂದಕ್ಕಿಂತ ಕಡಿಮೆ ಪ್ರತಿಶತದ ಬೆಳೆಗಳನ್ನು ಉಪಯುಕ್ತ ಅಂತ ಅನ್ಕೊಂಡಿದ್ದೀವಿ. ಇನ್ನುಳಿದವನ್ನು ಕಳೆ ಗಿಡ ಅಂತ ನಿರ್ಲಕ್ಷಣೆ ಮಾಡಿದ್ದೀವಿ. ಅವುಗಳ ವಿರುದ್ಧ ಸಮರ ಸಾರಿದ್ದೇವೆ ಕೂಡಾ. ಕಳೆನಾಶಗಳನ್ನು ಹಾಕಿ ಸಾಯಿ ಸಾಯಿಸುತ್ತಿದ್ದೇವೆ ಕೂಡಾ.
ವಾಸ್ತವದಲ್ಲಿ ಈ 99% ಗಿಡಗಳು ಪ್ರಕೃತಿಯನ್ನ ಸಮತೋಲನದಲ್ಲಿ ಇಡಲಿಕ್ಕೆ ಬಹಳ ಮುಖ್ಯ. ಯಾಕೆಂದರೆ ಇದೆ ಗಿಡಗಳು ಪ್ರಾಣಿ ಪಕ್ಷಿಗಳಿಗೆ, ಜೀವಾಣುಗಳಿಗೆ, ಸೂಕ್ಷ್ಮ ಜೀವಾಣುಗಳಿಗೆ ಅನ್ನ, ನೀರು, ಗಾಳಿಯನ್ನು ಒದಗಿಸುತ್ತಾ, ಪರಾಗಸ್ಪರ್ಶಕ್ರಿಯೆಗೆ ಸಹಕರಿಸುತ್ತಾ, ಭೂಮಿಯ ಫಲವತ್ತತೆಯನ್ನ ಕಾಪಾಡುತ್ತಾ, ಔಷಧೀಯ ಸತ್ವವನ್ನ ನಮಗೆಲ್ಲರಿಗೂ ಒದಗಿಸುತ್ತಿರುವ ಸಂಜೀವಿನಿಯಿಂದ ಕುಡಿದ ಚೈತನ್ಯ ಬೆಳೆಗಳಾಗಿವೆ. ಇಂತಹ ಹಲವಾರು ಚೈತನ್ಯ ಬೆಳೆಗಳನ್ನಆಗಸ್ಟ್ 27 ನೇ ರಂದು, ಮೈಸೂರಿನ ಧ್ವನ್ಯಾಲೋಕದಲ್ಲಿ ಪ್ರದರ್ಶನಕ್ಕಿಟ್ಟು ಅವುಗಳಲ್ಲಿರುವ ಮಹತ್ವವನ್ನು ತಿಳಿಸುವ ಒಂದು ಪ್ರಯತ್ನಗಳು ನಡೆಯುತ್ತಿದೆ. ಯಾವುದೇ ಶುಲ್ಕ ಇಲ್ಲದೆಯೇ ನಡೆಯುವ ಈ ಕಾರ್ಯಕ್ರಮಕ್ಕೆ ಮುಕ್ತ ಅವಕಾಶ ಇದೆ.