ಬೆಂಗಳೂರಿನ ಎಸ್ ಎಚ್ ಕೆ ವೆಲ್ನೆಸ್ ಫೌಂಡೇಶನ್ ಆರೋಗ್ಯಕ್ಕೆ ಸಂಬಂಧಪಟ್ಟ ಕೋರ್ಸ್ ನೀಡುತ್ತಿದೆ.ವೆಲ್ನೆಸ್ ಅಂಡ್ ಡೈರೆಕ್ಟ್ ಸೆಲ್ಲಿಂಗ್ ಕೋರ್ಸ್ ಮೂಲಕ ಆರೋಗ್ಯದ ಬಗ್ಗೆ ಹಾಗೂ ಡೈರೆಕ್ಟ್ ಸೆಲ್ಲಿಂಗ್ ಇಂಡಸ್ಟ್ರಿಯ ಬಗ್ಗೆ ಮಾಹಿತಿ ನೀಡುತ್ತದೆ. ಸುಳ್ಯ ತಾಲೂಕಿನ ಗುತ್ತಿಗಾರಿನ ಜಯಂತ್ ದೇವಸ್ಯ ಅವರು ಈ ಕೋರ್ಸ್ ಪಡೆದಿದ್ದಾರೆ.
ಈ ಕೋರ್ಸ್‌ನಲ್ಲಿ
ಆರೋಗ್ಯ ಹಾಗೂ ನೇರ ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನು ಕೂಡ ಆರ್ಥಿಕವಾಗಿ ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದೆ. ಮನೆ ಮನೆಗೆ ಆರೋಗ್ಯ ತಲುಪಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆಯಾಗಿದೆ.ಹಾಗಾಗಿ ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಈ ಕೋರ್ಸ್ ನೀಡಿ, ಕೋರ್ಸ್ ನಲ್ಲಿ ಇರುವ ಶಿಕ್ಷಣವನ್ನು ಪಡೆದು ಆರು ತಿಂಗಳ ನಂತರ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲಿನಲ್ಲಿ ಸರ್ಟಿಫಿಕೇಟ್ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ 72 ಜನ ಸರ್ಟಿಫಿಕೇಟ್ ಪಡೆದುಕೊಂಡರು. ಜೊತೆಗೆ ಡೈರೆಕ್ಟ್ ಸೆಲ್ಲಿಂಗ್ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನವನ್ನು ಕೂಡ ಏರ್ಪಡಿಸಲಾಗಿತ್ತು.
9 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟ ಭಾರತ ಉದ್ಯೋಗ ರತನ್ ಪ್ರಶಸ್ತಿಗಳನ್ನು ಪಡೆದುಕೊಂಡಿರುವಂತಹ ಡಾ. ಎಸ್ ಎಚ್ ಕುಲಕರ್ಣಿ ಅವರಯ ಸಂಸ್ಥೆಯ ಸ್ಥಾಪಕರು ಹಾಗೂ ಮುಖ್ಯ ಗುರುಗಳಾಗಿದ್ದಾರೆ.