ಪಶ್ಚಿಮ ಏಷ್ಯಾಕ್ಕಾಗಿ ಭಾರತದ ಸಮಗ್ರ ಕಾರ್ಯತಂತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಮನಾಮ ಸಂವಾದದಲ್ಲಿ ಪ್ರಸ್ತುತಪಡಿಸಿದರು.…..ಮುಂದೆ ಓದಿ….
ಸಂವಾದದ ಸಮಾರೋಪದಲ್ಲಿ ಅವರು, ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಈ ಪ್ರದೇಶದ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಭಾರತ ಕೊಲ್ಲಿ ಸಹಕಾರ ಮಂಡಳಿ -ಜಿಸಿಸಿ, ಇರಾನ್ ಮತ್ತು ಇರಾಕ್‌ನೊಂದಿಗೆ ವಾರ್ಷಿಕ 170 ರಿಂದ 180 ಶತಕೋಟಿ ಡಾಲರ್ ಮೌಲ್ಯದ ವಹಿವಾಟು ನಡೆಸುತ್ತದೆ. ಅಲ್ಲದೆ, ಮೆಡಿಟರೇನಿಯನ್ ರಾಷ್ಟ್ರಗಳೊಂದಿಗಿನ ವಹಿವಾಟು ಪ್ರಮಾಣ 80 ರಿಂದ 90 ಶತಕೋಟಿ ಡಾಲರ್ ನಷ್ಟಿದೆ ಎಂದು ಹೇಳಿದರು. ಗಲ್ಫ್ ಪ್ರದೇಶದಲ್ಲಿ 10 ದಶಲಕ್ಷ ಭಾರತೀಯರು ಮತ್ತು ಮೆಡಿಟರೇನಿಯನ್ ದೇಶಗಳಲ್ಲಿ ಐದು ಲಕ್ಷ ಭಾರತೀಯರು ನೆಲೆಸಿದ್ದು, ಭಾರತ ಮತ್ತು ಪಶ್ಚಿಮ ಏಷ್ಯಾ ನಡುವೆ ಪ್ರಮುಖ ಮಾನವ ಸಂಪರ್ಕ ಸೇತುವೆಯಾಗಿ ಪ್ರತಿನಿಧಿಸುತ್ತಿದ್ದಾರೆ. ದ್ವಿಪಕ್ಷೀಯ ಸಂಬಂಧಗಳು ಮತ್ತು ಆರ್ಥಿಕ ಬೆಳವಣಿಗೆಗೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಡಾ. ಎಸ್ ಜೈಶಂಕರ್ ಹೇಳಿದರು.…..ಮುಂದೆ ಓದಿ….
ಭಾರತದ ಭವಿಷ್ಯದ ಇಂಧನ ಭದ್ರತೆಯಲ್ಲಿ ವಿಶೇಷವಾಗಿ ಹಸಿರು ಜಲಜನಕ ಮತ್ತು ಹಸಿರು ಅಮೋನಿಯದಂತಹ ಉದಯೋನ್ಮುಖ ವಲಯಗಳಲ್ಲಿ ಪಶ್ಚಿಮ ಏಷ್ಯಾ ಪ್ರದೇಶದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಸಚಿವರು, ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳನ್ನು ಮೀರಿ, ರಸಗೊಬ್ಬರ ಆಮದಿನ ಮೂಲಕ ಭಾರತದ ಕೃಷಿ ಕ್ಷೇತ್ರಕ್ಕೆ ಈ ಪ್ರದೇಶವು ನಿರ್ಣಾಯಕವಾಗಿದೆ. ತಂತ್ರಜ್ಞಾನ ಮತ್ತು ಹೂಡಿಕೆಯ ಸಹಯೋಗದಲ್ಲಿ ಪ್ರಮುಖ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಎಂದು ಅಭಿಪ್ರಾಯಪಟ್ಟರು.