ಪಶ್ಚಿಮ ಘಟ್ಟಕ್ಕೆ ಮತ್ತೆ ಕೇಂದ್ರದ ಹೊಸ ನೋಟಿಫಿಕೇಶನ್ – ಕರ್ನಾಟಕದ ಸಾವಿರಾರು ಗ್ರಾಮಗಳ ಮೇಲೆ ಪರಿಣಾಮವೇ?

August 1, 2026
8:00 AM
ಪಶ್ಚಿಮ ಘಟ್ಟದ 56,825 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆ ಪ್ರಕಟಿಸಿದೆ. ರಾಜ್ಯಗಳ ಆಕ್ಷೇಪಣೆ ಮುಂದುವರಿದಿರುವ ಹಿನ್ನೆಲೆ ಮತ್ತೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಲಾಗಿದೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ (Ecologically Sensitive Area – ESA) ಘೋಷಣೆ ಕುರಿತು ಹಲವು ವರ್ಷಗಳಿಂದ ಮುಂದುವರಿದಿರುವ ಗೊಂದಲದ ನಡುವೆಯೇ ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆಯನ್ನು ಮರುಪ್ರಕಟಿಸಿದೆ. ರಾಜ್ಯಗಳೊಂದಿಗೆ ಒಮ್ಮತ ಮೂಡದಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಜುಲೈ 27, 2026ರಂದು ಪ್ರಕಟಗೊಂಡಿರುವ ಈ ಕರಡು ಅಧಿಸೂಚನೆಗೆ 60 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ. ಬಳಿಕ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಹೊಸ ಕರಡು ಅಧಿಸೂಚನೆಯ ಪ್ರಕಾರ ಸುಮಾರು 56,825 ಚದರ ಕಿಲೋಮೀಟರ್ ಪ್ರದೇಶದ  1,463 ಹಳ್ಳಿಗಳನ್ನು  ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸುವ ಪ್ರಸ್ತಾಪವಿದೆ. ಈ ವ್ಯಾಪ್ತಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಪಶ್ಚಿಮ ಘಟ್ಟದ ಆಯ್ದ ಪ್ರದೇಶಗಳು ಸೇರಲಿವೆ.

ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ನಿಯಂತ್ರಿಸುವುದು ಅಥವಾ ನಿಷೇಧಿಸುವುದು ಈ ಅಧಿಸೂಚನೆಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಹೊಸ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕೆಂಪು ವರ್ಗದ ಮಾಲಿನ್ಯಕಾರಿ ಕೈಗಾರಿಕೆಗಳಂತಹ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಲಿವೆ.

2014ರಿಂದ ಇದುವರೆಗೆ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದರೂ, ರಾಜ್ಯ ಸರ್ಕಾರಗಳ ಆಕ್ಷೇಪಣೆ ಮತ್ತು ಸ್ಥಳೀಯ ಜನರ ಆತಂಕಗಳಿಂದ ಅಂತಿಮ ಅಧಿಸೂಚನೆ ಹೊರಬಂದಿರಲಿಲ್ಲ. ಈ ಹಿನ್ನೆಲೆ ಇದೀಗ ಏಳನೇ ಬಾರಿ ಕರಡು ಅಧಿಸೂಚನೆಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಹಾಗೂ ರಾಜ್ಯಗಳಿಂದ ಮತ್ತೊಮ್ಮೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

ಕೇರಳ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಜನವಸತಿ, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ಅಧಿಸೂಚನೆಯಲ್ಲಿ ಸ್ಪಷ್ಟತೆ ನೀಡಬೇಕು ಎಂದು ಆಗಾಗ ಒತ್ತಾಯಿಸುತ್ತಿವೆ. ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಎಂಬುದು ರಾಜ್ಯಗಳ ನಿಲುವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಯಾವ ಚಟುವಟಿಕೆಗಳಿಗೆ ನಿರ್ಬಂಧ? : ಅಂತಿಮ ಅಧಿಸೂಚನೆ ಜಾರಿಯಾದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಕೆಳಕಂಡ ಚಟುವಟಿಕೆಗಳಿಗೆ ನಿಷೇಧ ಅಥವಾ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಲಿದೆ.

  • ಹೊಸ ಗಣಿಗಾರಿಕೆ (Mining)
  • ಕಲ್ಲು ಗಣಿಗಾರಿಕೆ (Quarrying)
  • ಮರಳು ಗಣಿಗಾರಿಕೆ
  • ಹೊಸ ಉಷ್ಣ ವಿದ್ಯುತ್ ಸ್ಥಾವರಗಳು
  • ಕೆಲವು ಮಾಲಿನ್ಯಕಾರಿ ಕೈಗಾರಿಕೆಗಳು
  • ಬೃಹತ್ ನಿರ್ಮಾಣ ಯೋಜನೆಗಳು

ಅದೇ ವೇಳೆ ಜಲವಿದ್ಯುತ್ ಯೋಜನೆಗಳಂತಹ ಚಟುವಟಿಕೆಗಳಿಗೆ ನಿಯಂತ್ರಿತ ಅನುಮತಿ ನೀಡುವ ವ್ಯವಸ್ಥೆ ಮುಂದುವರಿಯಲಿದೆ.

ರಾಜ್ಯವಾರು ಪ್ರಸ್ತಾವಿತ ESA ಪ್ರದೇಶ:

  • ಕರ್ನಾಟಕ – 20,668 ಚ.ಕಿ.ಮೀ.
  • ಮಹಾರಾಷ್ಟ್ರ – 17,340 ಚ.ಕಿ.ಮೀ.
  • ಕೇರಳ – 9,993.7 ಚ.ಕಿ.ಮೀ.
  • ತಮಿಳುನಾಡು – 6,914 ಚ.ಕಿ.ಮೀ.
  • ಗೋವಾ – 1,461 ಚ.ಕಿ.ಮೀ.
  • ಗುಜರಾತ್ – 449 ಚ.ಕಿ.ಮೀ.

ಹಿಂದಿನ ಕರಡು ಅಧಿಸೂಚನೆಯಲ್ಲಿದ್ದುದೇ ಮುಂದುವರಿಕೆ : 2024ರ ಜುಲೈನಲ್ಲಿ ಪ್ರಕಟವಾಗಿದ್ದ ಕರಡು ಅಧಿಸೂಚನೆಯೊಂದಿಗೆ ಹೋಲಿಸಿದರೆ ಈ ಬಾರಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ESA ವ್ಯಾಪ್ತಿ, ರಾಜ್ಯವಾರು ವಿಸ್ತೀರ್ಣ ಹಾಗೂ ನಿಯಮಗಳು ಹಿಂದಿನಂತೆಯೇ ಉಳಿದಿವೆ.  ಕೇರಳದ ವಯನಾಡು ಜಿಲ್ಲೆಯ ಮನಂತವಾಡಿ, ಸುಲ್ತಾನ್ ಬತ್ತೇರಿ ಹಾಗೂ ವೈತಿರಿ ತಾಲ್ಲೂಕಿನ 13 ಗ್ರಾಮಗಳು ಹಿಂದಿನ ಕರಡು ಅಧಿಸೂಚನೆಯಲ್ಲಿದ್ದಂತೆ ಈ ಬಾರಿಯೂ ESA ಪಟ್ಟಿಯಲ್ಲಿ ಮುಂದುವರಿದಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The Union Government has reissued the seventh draft notification proposing around 56,825 sq km of the Western Ghats as an Ecologically Sensitive Area (ESA). The move comes despite prolonged disagreement with several states, aiming to regulate environmentally harmful activities while inviting fresh objections and suggestions before finalisation.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror