Advertisement
MIRROR FOCUS

ಅತಿಹೆಚ್ಚು ಮಳೆ ಬೀಳುವ ಬೆಟ್ಟಗಳು ಒಣಗುತ್ತಿವೆಯೇ? – ಮೇಘಾಲಯದ ನೀರಿನ ಸಂಕಷ್ಟದ ಎಚ್ಚರಿಕೆ

Share

“ಭೂಮಿಯಲ್ಲೇ ಅತಿಹೆಚ್ಚು ಮಳೆಯಾಗುವ ಪ್ರದೇಶ” ಎಂದು ಪ್ರಸಿದ್ಧಿ ಪಡೆದಿರುವ ಮೇಘಾಲಯದ ಬೆಟ್ಟ ಪ್ರದೇಶಗಳು ಇದೀಗ ನೀರಿನ ಕೊರತೆಯ ಆತಂಕ ಎದುರಿಸುತ್ತಿವೆ. ಹವಾಮಾನ ಬದಲಾವಣೆ, ಅರಣ್ಯ ನಾಶ, ಪ್ರವಾಸೋದ್ಯಮದ ಒತ್ತಡ ಹಾಗೂ ನೀರಿನ ಸಂಗ್ರಹ ವ್ಯವಸ್ಥೆಗಳ ಕೊರತೆ, ಇವೆಲ್ಲವೂ ಸೇರಿ ಈ ಹೊಸ ನೀರಿನ ಕಥೆಯನ್ನು ರೂಪಿಸುತ್ತಿವೆ.

ಶತಮಾನಗಳಿಂದಲೂ ಮಳೆಗಾಲದ ಮೋಡಗಳು ಬೆಟ್ಟಗಳಿಗೆ ಡಿಕ್ಕಿ ಹೊಡೆದು ಭಾರೀ ಮಳೆಯಾಗುವುದು ಮೇಘಾಲಯದ ಗುರುತು. ಆದರೆ ಇತ್ತೀಚೆಗೆ ಮಳೆಯ ಮಾದರಿಯಲ್ಲಿ ಬದಲಾವಣೆಗಳು ಕಾಣಿಸಿಕೊಂಡಿದ್ದು, ಮಳೆ ಬಿದ್ದರೂ ಅದನ್ನು ಸಂಗ್ರಹಿಸಿ ಬಳಸುವ ವ್ಯವಸ್ಥೆಗಳ ಕೊರತೆಯಿಂದ ಹಲವೆಡೆ ನೀರಿನ ಒತ್ತಡ ಉಂಟಾಗಿದೆ.

“ಅತಿಯಾದ ಮಳೆ – ಆದರೂ ನೀರಿನ ಕೊರತೆ” : ಮೇಘಾಲಯದ ನೀರಿನ ಸಮಸ್ಯೆ ಕೇವಲ ಮಳೆಯ ಪ್ರಮಾಣ ಕುಸಿತದಿಂದ ಮಾತ್ರ ಉಂಟಾಗಿಲ್ಲ. ಮಳೆ ಬೀಳುವ ಕಾಲಾವಧಿಯಲ್ಲಿ ಬದಲಾವಣೆ, ಅರಣ್ಯ ಪ್ರದೇಶಗಳ ಕುಗ್ಗುವಿಕೆ, ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳ ಒತ್ತಡ, ನೀರು ಸಂಗ್ರಹ ಮತ್ತು ನಿರ್ವಹಣೆಯ ದುರ್ಬಲತೆ ಇವೆಲ್ಲ ಸೇರಿ ಈ ಪರಿಸ್ಥಿತಿಗೆ ಕಾರಣವಾಗಿವೆ.

ಸ್ಥಳೀಯರು ಹೇಳುವಂತೆ, ವರ್ಷಕ್ಕೊಂದು ಬಾರಿ ಮರ ನೆಡುವ ಅಭಿಯಾನ ನಡೆಯುತ್ತಿದ್ದರೂ, ಹೊಸ ರೆಸಾರ್ಟ್‌ಗಳ ನಿರ್ಮಾಣಕ್ಕಾಗಿ ಮತ್ತೆ ಅರಣ್ಯ ತೆರವುಗೊಳ್ಳುತ್ತಿರುವುದು ಪರಿಸರ ಸಮತೋಲನಕ್ಕೆ ಸವಾಲಾಗುತ್ತಿದೆ.

ಹವಾಮಾನ ಬದಲಾವಣೆ ನೀಡುತ್ತಿರುವ ದೊಡ್ಡ ಪಾಠ: ಈಗ ಮೇಘಾಲಯ ಎದುರಿಸುತ್ತಿರುವ ಮುಖ್ಯ ಪ್ರಶ್ನೆ, “ಎಷ್ಟು ಮಳೆ ಬೀಳುತ್ತದೆ?” ಅಲ್ಲ,
“ಬಿದ್ದ ಮಳೆಯನ್ನು ಎಷ್ಟು ಪರಿಣಾಮಕಾರಿಯಾಗಿ ಸಂಗ್ರಹಿಸಬಹುದು?” ಎಂಬುದು.  ಭೂಮಿಯಲ್ಲೇ ಅತಿಹೆಚ್ಚು ಮಳೆಯಾಗುವ ಪ್ರದೇಶವೇ ನೀರಿನ ಒತ್ತಡ ಅನುಭವಿಸುತ್ತಿದ್ದರೆ, ಭವಿಷ್ಯದ ಅನಿಶ್ಚಿತ ಹವಾಮಾನಕ್ಕೆ ಇದು ಇತರ ಪ್ರದೇಶಗಳಿಗೆ ದೊಡ್ಡ ಎಚ್ಚರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪರಿಹಾರದ ದಾರಿ ಏನು?:  ನೀರಿನ ಭದ್ರತೆಗಾಗಿ ತಜ್ಞರು ಸೂಚಿಸುವಂತೆ ಪ್ರಮುಖವಾಗಿ  ಅರಣ್ಯ ಸಂರಕ್ಷಣೆ ಮತ್ತು ಮಣ್ಣಿನ ಸಂರಕ್ಷಣೆ,  ಮಳೆ ನೀರು ಸಂಗ್ರಹ ವ್ಯವಸ್ಥೆಗಳ ಅಭಿವೃದ್ಧಿ,  ಸ್ಥಳೀಯ ಸಮುದಾಯದ ಸಕ್ರಿಯ ಪಾಲ್ಗೊಳ್ಳಿಕೆ,  ಪರಿಸರಕ್ಕೆ ಅನುಗುಣವಾದ ಅಭಿವೃದ್ಧಿ ನೀತಿಗಳು ಮೇಘಾಲಯದ “ಮೋಡಗಳ ನಿವಾಸ” ಎಂಬ ಹೆಗ್ಗಳಿಕೆಯನ್ನು ಉಳಿಸಬೇಕಾದರೆ, ಮಳೆ ಅನಂತ ಸಂಪತ್ತು ಎಂಬ ಭ್ರಮೆಯಿಂದ ಹೊರಬರಬೇಕಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Meghalaya, known as one of the wettest places on Earth, is paradoxically facing water stress due to changing monsoon patterns, deforestation, tourism pressure, and inadequate rainwater management. Experts warn that the key challenge is not the amount of rainfall but how effectively it is captured and stored, offering a crucial lesson for other climate-vulnerable regions.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

5 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

18 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

1 day ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

2 days ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

3 days ago