ಅಡಿಕೆ ಬೆಳೆಯ ಮುಂದಿರುವ ಸವಾಲುಗಳು ಏನು ? | ಅಡಿಕೆ ಬೆಳೆಯ ಮೇಲೆ ಹವಾಮಾನದ ಪರಿಣಾಮಗಳು | ಸಿಪಿಸಿಆರ್‌ಐ ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ್‌ ಹೇಳಿರುವ ವಾಸ್ತವ ಸಂಗತಿಗಳು |

November 9, 2023
12:01 AM
ಇಂದು ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ಬಗ್ಗೆ ಮಾತ್ರವೇ ಅಧ್ಯಯನ ಮಾಡುತ್ತಿದ್ದರೆ ಸಾಲದು. ಅಡಿಕೆ ವಿಸ್ತರಣೆ, ಅಡಿಕೆ ಮಾರುಕಟ್ಟೆ, ಹವಾಮಾನ ಬದಲಾವಣೆಯ ಬಗ್ಗೆ ಅತ್ಯಂತ ಗಂಭೀರವಾಗಿ ಗಮನಹರಿಸಬೇಕಿದೆ.

ಅಡಿಕೆ(Arecanut) ಬೆಳೆಯ ಮುಂದೆ ಹಲವು ಸವಾಲುಗಳು ಇವೆ. ಅಡಿಕೆಯನ್ನು ಇನ್ನೂ ಕೂಡಾ ಅಸಾಂಪ್ರದಾಯಿಕ ಪ್ರದೇಶಗಳಿಗೂ ವಿಸ್ತರಣೆ ಮಾಡುತ್ತಾ ಹೋದರೆ ಇನ್ನಷ್ಟು ರೋಗಗಳೂ ಕಾಡಲಿವೆ. ಹವಾಮಾನದ ವೈಪರೀತ್ಯವೂ ಅಡಿಕೆಯ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡಲಿದೆ ಎಂದು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್‌ ಹೇಳಿದರು.

Advertisement
Advertisement
Photo Credit : Shyam CPCRI
Photo Credit : Shyam CPCRI

ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಸಿಪಿಸಿಆರ್‌ಐ ವಿಟ್ಲ ಹಾಗೂ ವಿಜಯವಾಣಿ ಪತ್ರಿಕೆ ಆಶ್ರಯದಲ್ಲಿ  ನಡೆದ ಅಡಿಕೆ ತಳಿಗಳು ಹಾಗೂ ಅಡಿಕೆಯಲ್ಲಿನ ರೋಗ ಹಾಗೂ ಕೀಟಗಳ ನಿರ್ವಹಣೆಯ ಬಗ್ಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ  ಮಾತನಾಡಿದರು. ಅಡಿಕೆಯಲ್ಲಿ ತಳಿಗಳು ಹಾಗೂ ವೈವಿಧ್ಯತೆ ಈಗ ಅಗತ್ಯ ಇದೆ. ಈಗಾಗಲೇ ಅನೇಕ ತಳಿ ಬಿಡುಗಡೆಯಾಗಿದೆ. ಆದರೆ ಈಗ ಹವಾಮಾನ ಬದಲಾವಣೆ ಆಗುತ್ತಿದೆ. ಒಮ್ಮೆ ನೆಟ್ಟ ಗಿಡ 40 ವರ್ಷ ಇರುತ್ತದೆ. ಆದರೆ ಹವಾಮಾನ ಬದಲಾವಣೆಯ ಕಾರಣದಿಂದ ಫಸಲು ಬಾರದೇ ಇದ್ದರೆ ರೈತನಿಗೆ ನಷ್ಟವಾಗುತ್ತದೆ. ಹೀಗಾಗಿ ಈ ಹವಾಮಾನ ಬದಲಾವಣೆಗಳ ನಡುವೆಯೂ ಇಳುವರಿ ನೀಡುವ ತಳಿಯ ಅಗತ್ಯ ಇದೆ.ಈ ಬಗ್ಗೆ ಇಂದು ಅಧ್ಯಯನ ಆಗಬೇಕಾದ ವಿಷಯವಾಗಿದೆ.

Advertisement

ಅಡಿಕೆ ಹೂವು ಬಿಡುವ ವೇಳೆ ಕನಿಷ್ಟ ವ್ಯತ್ಯಾಸ ಹವಾಮಾನದಲ್ಲಿ ಬದಲಾವಣೆ ಆದರೂ ಕಷ್ಟ ಆಗುತ್ತದೆ. ಈ ಬಗ್ಗೆಯೂ ಸಂಶೋಧನೆಯ ಅಗತ್ಯ ಇದೆ. ಇದನ್ನೆಲ್ಲಾ ವಿಜ್ಞಾನಿಗಳು ಮಾತ್ರವೇ ಮಾಡಬೇಕಿದೆ. ಆದರೆ, ಕೃಷಿಕರೂ ಹಾಗೂ ಇತರ ವ್ಯವಸ್ಥೆಗಳೂ ಜತೆಯಾಗಬೇಕು. ವಿಜ್ಞಾನಿಗಳು ನಿರಂತರ ಅಧ್ಯಯನ , ಅನ್ವೇಷಣೆ ಮಾಡಬೇಕು. ರೈತರಿಗೆ ತಲಪಿಸುವ ವ್ಯವಸ್ಥೆ ಬೇರೆ ಇರಬೇಕು.

Advertisement

ಈಗ ಅಡಿಕೆ ಧಾರಣೆ ಇದೆ ಎಂದು ಅಡಿಕೆ ವಿಸ್ತರಣೆಯಾಗುತ್ತಿದೆ. ಆದರೆ ಅಲ್ಲಿನ ವಾತಾವರಣ ಅಡಿಕೆಗೆ ಸೂಕ್ತ ಅಲ್ಲ. ಅಲ್ಲಿ ಅಡಿಕೆ ಫಸಲು ಬರಬಹುದೇ ಎನ್ನುವುದು  ಪ್ರಶ್ನೆ.ಆದರೆ ಬೆಳೆ ವಿಸ್ತರಣೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೈತರೇ ಈ ಬಗ್ಗೆ ಗಮನಿಸಬೇಕಿದೆ.

ಈಗ ಇಳುವರಿ ಹೆಚ್ಚು ಬರುವ ಬಗ್ಗೆ ಯೋಚನೆ ಬೇಕಿಲ್ಲ. ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಹವಾಮಾನ ಬದಲಾವಣೆಯ ನಡುವೆಯೂ ಅಡಿಕೆ ಇಳುವರಿ ಬರಬೇಕು, ಅದು ಗುಣಮಟ್ಟದಿಂದ ಇರಬೇಕು, ಹೆಚ್ಚು ಇಳುವರಿ ಬಂದೂ ಪ್ರಯೋಜನ ಇಲ್ಲ. ವಿಜ್ಞಾನಿಗಳು ಇಂತಹ ವಿಷಯಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಈಗ ನಾವು ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ಬಗ್ಗೆ ಮಾತ್ರವೇ ಅಧ್ಯಯನ ಮಾಡುತ್ತಿದ್ದರೆ ಸಾಲದು. ಇಂದು ಅಡಿಕೆ ವಿಸ್ತರಣೆ, ಅಡಿಕೆ ಮಾರುಕಟ್ಟೆ, ಹವಾಮಾನ ಬದಲಾವಣೆಯ ಬಗ್ಗೆ ಅತ್ಯಂತ ಗಂಭೀರವಾಗಿ ಗಮನಹರಿಸಬೇಕಿದೆ. ಇಲ್ಲದೇ ಇದ್ದರೆ ಅಡಿಕೆ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಡಾ.ಬಾಲಚಂದ್ರ ಹೆಬ್ಬಾರ್‌ ಹೇಳಿದರು.

Advertisement

CPCRI Director Dr. Balachandra Hebbar said that, Arecanut expansion, Arecanutmarketing and climate change should be taken very seriously. If not, it will have a serious impact on the future of the Arecanut.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror