ಹೈನುಗಾರಿಕೆ ಮಾಡುವ ರೈತರಿಗೆ ಇರುವ ಸರ್ಕಾರದ ಯೋಜನೆ ಯಾವೆಲ್ಲಾ? ಸಂಪೂರ್ಣ ಮಾಹಿತಿ

December 24, 2025
6:51 AM

ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ತಮಗಾಗಿ ಸರ್ಕಾರದಿಂದ ಯಾವೆಲ್ಲ ಸಹಾಯಧನ ಆದಾರಿತ ಯೋಜನೆಗಳು ಜಾರಿಯಾಗಿದೆ ಎಂಬ ಮಾಹಿತಿಗಳು ಸರಿಯಾಗಿ ತಿಳಿದಿರುವುದಿಲ್ಲ.  ಆ ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು..? ಈ ಮಾಹಿತಿಯನ್ನು ರೈತರಿಗೆ ಇಲ್ಲಿ ನೀಡಲಾಗಿದೆ…

Advertisement
Advertisement

ರಾಜ್ಯದಲ್ಲಿ ಪ್ರಸ್ತುತ ಪಶುಪಾಲನಾ ಇಲಾಖೆಯಿಂದ ರೈತರಿಗೆ ಲಭ್ಯವಿರರುವ ಸಹಾಯಧನ ಆಧಾರಿತ ಯೋಜನೆಗಳು ಈ ರೀತಿಯಾಗಿವೆ:

  • ಹಸುಗಳ ಆಕಸ್ಮಿಕ ಸಾವಿಗೆ ಸಹಾಯಧನ: ಜಾನುವಾರು, ಎಮ್ಮೆ, ಹೋರಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತರಿಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ 15,000 ಪರಿಹಾರ ಧನವನ್ನು ನೀಡಲಾಗುತ್ತದೆ.
  • ಕುರಿ ಮೇಕೆಗಳ ಸಾವಿಗೆ: ಒಂದುವೇಳೆ ಕುರಿ, ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಅವುಗಳ ಮಾಲೀಕನಿಗೆ ಸಹಾಯಧನ ನೀಡಲಾಗುವುದು.
  • ಜಾನುವಾರು ವಿಮೆ: ರೈತರು ಸಾಕಾಣಿಕೆ ಮಾಡುವ ಜಾನುವಾರುಗಳಿಗೆ ವಿಮೆ/ ಇನ್ಸುರೆನ್ಸ್ ಅನ್ನು ಮಾಡಿಸಲು ಆರಂಭಿಕ ಹಂತದಲ್ಲಿ ವಿಮೆ ಪ್ರೀಮೀಯಂ ದರವನ್ನು ಪಾವತಿ ಮಾಡಲು ಇಲಾಖೆಯಿಂದ ಶೇ.85% ಸಬ್ಸಿಡಿ ಅನ್ನು ಪಾವತಿಸಲಾಗುತ್ತದೆ ರೈತರು ಕೇವಲ ಶೇ15% ಪ್ರೀಮೀಯಂ ಅನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.
  • ಮೇವು ಕತ್ತರಿಸುವ ಯಂತ್ರ ವಿತರಣೆ: ಹೈನುಗಾರಿಕೆ ಮತ್ತು ಕುರಿ/ ಮೇಕೆ ಸಾಕಾಣಿಕೆಯನ್ನು ಮಾಡುತ್ತಿರುವ ರೈತರಿಗೆ ಹಸಿ ಮೇವನ್ನು ಕತ್ತರಿಸಿಕೊಳ್ಳಲು ಶೇ.50% ಸಹಾಯಧನದಲ್ಲಿ ಒಟ್ಟು ಪೂರ್ಣ ದರ 34,000 ಕ್ಕೆ ರೂ 17,000 ಸರಕಾರದಿಂದ ಸಬ್ಸಿಡಿ ನೀಡಲಾಗುತ್ತದೆ ಬಾಕು ಉಳಿದ ರೂ 17,000 ಪಾವತಿ ಮಾಡಿ ರೈತರು ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಬಹುದು.
  • ರಬ್ಬರ್ ನೆಲ ಹಾಸುಗಳ ವಿತರಣೆ: ಕೊಟ್ಟಿಗೆಯಲ್ಲಿ ಹಸು ಉತ್ತಮ ನೆಲ ಹಾಸು ವ್ಯವಸ್ಥೆಯನ್ನು ರೂಪಿಸಲು ಶೇ.50% ಸಹಾಯಧನ ಕೌ ಮ್ಯಾಟ್ ಅನ್ನು ರೈತರು ಪಶು ಪಾಲನಾ ಇಲಾಖೆಯಂದ ಪಡೆಯಲು ಅವಕಾಶವಿದ್ದು ಒಟ್ಟು ಪೂರ್ಣ ದರ ರೂ 2,849 ಇದಕ್ಕೆ ರೂ1424 ಸಬ್ಸಿಡಿಯನ್ನು ಇಲಾಖೆಯಿಂದ ಒದಗಿಸಲಾಗುತ್ತದೆ.
  • ಮೇವಿನ ಬೀಜ ಕಿರು ಪೊಟ್ಟಣಗಳ ವಿತರಣೆ: ಪಶು ಪಾಲನಾ ಇಲಾಖೆಯಿಂದ ರೈತರಿಗೆ ಹಸಿ ಮೇವನ್ನು ಉತ್ಪಾದನೆ ಮಾಡಿಕೊಳ್ಳಲು ಶೇ.50% ಸಬ್ಸಡಿಯಲ್ಲಿ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ.
  • ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ಮೇಕೆ ವಿತರಣೆ: ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ ಮೇಖೆ ಸಾಕಾಣಿಕೆಯನ್ನು ಮಾಡಲು ಶೇ.90% ಅಂದರೆ ಗರಿಷ್ಠ 90,000 ಸಬ್ಸಿಡಿಯನ್ನು ಒದಗಿಸಲಾಗುತ್ತದೆ ರೈತರು ಶೇ.10% ರೂ 10,000 ಪಾವತಿ ಮಾಡಬೇಕು ಈ ಯೋಜನೆಯಡಿ 10 ಕುರಿ 1 ಟಗರು ಮರಿಯನ್ನು ವಿತರಣೆ ಮಾಡಲಾಗುತ್ತದೆ.
  • ನಾಟಿ ಕೋಳಿ ಮರಿಗಳ ವಿತರಣೆ: ನಾಟಿ ಕೋಳಿಯನ್ನು ಸಾಕಾಣಿಕೆ ಂಆಡ ಅನುಭವವನ್ನು ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯಿಂದ 5 ವಾರಗಳ 20ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.
  • ಹಾಲು ಉತ್ಪಾದಕರಿಗೆ ಉತ್ತೇಜನ: ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜ ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ.5% ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಪಾನ್ ಕಾರ್ಡ್
• ರೇಶನ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಬ್ಯಾಂಕ್ ಪಾಸ್ ಬುಕ್
• ಫೋಟೋ
ಎಲ್ಲಿ ಅರ್ಜಿ ಸಲ್ಲಿಸುವುದು:
ಈ ಮೇಲಿನ ಯೋಜನೆಗಳನ್ನು ಪಡೆಯಲು ರೈತರು ಆಯಾ ತಾಲ್ಲೂಕಿನ ಪಶು ಸಂಗೋಪನಾ ಆಸ್ಪತ್ರೆಗಳಿ ಭೇಟಿ ನೀಡಿ ಅಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror