ಬದಲಾಗುತ್ತಿರುವ ವಾತಾವರಣದಲ್ಲಿ ದೇಹದ ಕಾಳಜಿ ವಹಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ(Winter) ಅನೇಕ ಜನರು ಶೀತ(Cold), ಕೆಮ್ಮು(Cough) ಮತ್ತು ಜ್ವರದಿಂದ(Fever) ಬಳಲುತ್ತಿದ್ದಾರೆ. ಈ ರೀತಿಯಾಗಿ, ಜನರು ಈ ಸಮಸ್ಯೆಗಳನ್ನು ತೊಡೆದು ಹಾಕಲು ವಿವಿಧ ಮನೆಮದ್ದುಗಳ ಪರಿಹಾರಗಳನ್ನು ಪ್ರಯತ್ನಿಸುತ್ತಿದ್ದಾರೆ. ಅಂತಹ ಒಂದು ಸುಲಭ ಮತ್ತು ಉತ್ತಮ ಪರಿಹಾರವೆಂದರೆ ತುಳಸಿ ಬೀಜಗಳು(Basil Seeds).
ತುಳಸಿ ಬೀಜದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅನೇಕ ರೋಗಗಳನ್ನು ದೂರವಿಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ: ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಮೊದಲು ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಬೇಕು. ತುಳಸಿ ಬೀಜದ ನೀರನ್ನು ಪ್ರತಿದಿನ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ನಿರ್ಜಲೀಕರಣ: ನಿರ್ಜಲೀಕರಣದಿಂದ ಬಳಲುತ್ತಿರುವವರು ಈ ನೀರನ್ನು ಕುಡಿಯಬೇಕು. ಪ್ರತಿದಿನ ತುಳಸಿ ಬೀಜದ ನೀರನ್ನು ಕುಡಿಯುವುದರಿಂದ ಈ ಸಮಸ್ಯೆ ಇರುವುದಿಲ್ಲ.
ಆಮ್ಲತೆ: ಹೊಟ್ಟೆ ಯಾವಾಗಲೂ ತೊಂದರೆಗೊಳಗಾಗಿದ್ದರೆ, ತುಳಸಿ ಬೀಜದ ನೀರನ್ನು ಪ್ರತಿದಿನ ಕುಡಿಯಬೇಕು. ಈ ನೀರಿನಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಇರುವುದಿಲ್ಲ.
ಬೊಜ್ಜು: ಇತ್ತೀಚೆಗೆ ಅನೇಕ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಪ್ರಯತ್ನ ಮಾಡಿದರೂ ಬೊಜ್ಜು ಹೋಗುವುದಿಲ್ಲ. ಈ ರೀತಿಯಾಗಿ ನೀವು ಈ ನೀರಿನಿಂದ ಪ್ರಯೋಜನವನ್ನು ಪಡೆಯಬಹುದು.
ರೋಗನಿರೋಧಕ ಶಕ್ತಿ ವೃದ್ಧಿ: ತುಳಸಿ ಬೀಜಗಳ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಶೀತ ಮತ್ತು ಜ್ವರದಂತಹ ಸಮಸ್ಯೆಗಳು ಈ ದಿನಗಳಲ್ಲಿ ಬರುವುದಿಲ್ಲ.
ಕನ್ನಡಕ್ಕೆ: ಡಾ ಕುಲಕರ್ಣಿ ಪಿ. ಎ.
It is very important to take care of the body in a changing environment. Many people suffer from cold, cough and fever in winter. Thus, people are trying various home remedies to get rid of these problems. One such easy and best remedy is basil seeds.