ಭಾರತದ(India) ರಫ್ತಿನಲ್ಲಿ(Export) ಕಾಳು ಮೆಣಸು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೇರಳ(Kerala), ಕರ್ನಾಟಕ(Karnataka) ಮತ್ತು ತಮಿಳುನಾಡಿನಲ್ಲಿ(Tamilnadu) ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಕೃತಿಯಲ್ಲಿ, ಕೃಷಿ ಪದ್ಧತಿಗಳಲ್ಲಿ ಕಾಳುಮೆಣಸನ್ನು ಮುಖ್ಯ ಬೆಳೆ ಹಾಗೂ ಅಂತರ ಬೆಳೆಯಾಗಿ ಬೆಳೆಸಬಹುದು. ಇಳಿಜಾರು ಪ್ರದೇಶಗಳಲ್ಲಿ ಕೃಷಿಗೆ ಉಪಯೋಗಿಸಿದ ರಾಸಾಯನಿಕ ನೀರು ನೈಸರ್ಗಿಕ ಕೃಷಿ(Natural farming) ಭೂಮಿಗೆ ಹರಿಯದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಈ ಬಾರಿ ಕಾಳು ಮೆಣಸಿನ ಕಟಾವು ಮುಗಿದಿದೆ. ಬಿರು ಬೇಸಗೆ(Summer) ಆರಂಭವಾಗಿದೆ. ಹಾಗಾಗಿ ಈಗ ಮೆಣಸಿನ ಬಳ್ಳಿಗಳನ್ನು (Pepper vine) ಕಾಪಾಡುವುದೇ ದೊಡ್ಡ ಸವಾಲು. ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನೋಡೋಣ….
1. ಕಾಳು ಮೆಣಸು(Black Pepper) ಬಳ್ಳಿಗೆ ಮಾರ್ಚ್ ಕೊನೆಯ ವಾರದಿಂದ, ಏಪ್ರಿಲ್ ಮತ್ತು ಮೇ ಮೊದಲನೆ ವಾರದವರೆಗೆ ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40 ರಿಂದ 50 ಲೀಟರ್ ನೀರನ್ನು ಬುಡಕ್ಕೆ ಹಾಕಿದರೆ ಇಳುವರಿ ಹೆಚ್ಚಾಗುತ್ತದೆ.
2. ನೀರನ್ನು ಕೊಡದೆ, ಏಪ್ರಿಲ್/ಮೇನಲ್ಲಿ ಮಳೆ ಬಾರದೇ ಜೂನ್‌ನಲ್ಲಿ ಬಂದರೆ ಕಾಳುಮೆಣಸು ಬಳ್ಳಿಯೂ ಜುಲೈ ಅಥವಾ ಆಗಸ್ಟ್‌ನಲ್ಲಿ ಹೂ ಬಿಡುತ್ತದೆ.
3. ಜುಲೈನಲ್ಲಿ ಬಂದ ಹೂವುಗಳಲ್ಲಿ ಹೆಚ್ಚು ಹೆಣ್ಣು ಹೂವುಗಳಿದ್ದು ಗಂಡು ಹೂವುಗಳು ತುಂಬ ಕಡಿಮೆಯಾಗಿರುತ್ತವೆ. ಇದರಿಂದ ಸರಿಯಾಗಿ ಪರಾಗಸ್ವರ್ಶ(Pollination)ವಾಗದೆ ಕೊತ್ತು ಬೀಳುವುದು ಸಾಮಾನ್ಯವಾಗುತ್ತದೆ ಅಥವಾ ದಾಟು ಮಣಿಯಿಂದ ಕೂಡಿದ ಗೊಂಚಲನ್ನು ಗಮನಿಸಬಹುದು.
4. ಬಳ್ಳಿಗಳ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದು ಸಂಪೂರ್ಣ ಹಳದಿಯಾಗಿರುವ ತೋಟಗಳಲ್ಲಿ ಅಂಚಿನಲ್ಲಿ ಬೆಳೆದಿರುವ ಕಾಳುಮೆಣಸು ಬಳ್ಳಿಗಳ ಮೇಲೆ 2 ಕೆ.ಜಿ ಸುಣ್ಣವನ್ನು ಒಂದು ಬ್ಯಾರಲ್ ನೀರಿಗೆ ಮಿಶ್ರಣಮಾಡಿ ಸಿಂಪಡಿಸಬೇಕು.
5. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.
6. ತೋಟಗಳಲ್ಲಿ ಕನಿಷ್ಠ ಶೇ.20 ರಿಂದ 25ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು.
7. ಬಳ್ಳಿಯ ಸುತ್ತಲು ಹಸಿರು ಎಲೆ, ಒಣ ಎಲೆ ಅಥವಾ ಸಾವಯವ ಪದಾರ್ಥಗಳ ಹೊದಿಕೆ ಮಾಡಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.
8. ಕೆಲವು ತೋಟಗಳಲ್ಲಿ ಬಳ್ಳಿಗಳು ಸಂಪೂರ್ಣ ಹಳದಿಬಣ್ಣಕ್ಕೆ ತಿರುಗಿ ಒಣಗುತ್ತಿರುವ ಸಮಸ್ಯೆ ಕಾಣಿಸುತ್ತಿದ್ದು, ಅಂತಹ ಬಳ್ಳಿಗಳ ಎಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಸಣ್ಣ ಸಣ್ಣ ಶಲ್ಕ ಕೀಟ (ರಸ ಹೀರುವ ಕೀಟಗಳು) ಕಾಣಿಸುತ್ತವೆ. ಇವುಗಳ ಹತೋಟಿಗೆ ಪ್ರತಿ ಲೀ.ನೀರಿಗೆ 1ಗ್ರಾಂ Thiomethaxom ಎಂಬ ಕೀಟನಾಶಕವನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು. ನರ್ಸರಿಯಲ್ಲಿ ಪ್ರತಿ ಲೀ. ನೀರಿಗೆ 3.0 ಮಿ.ಲೀ.ಬೇವಿನ ಎಣ್ಣೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಈ ಕೀಟಗಳನ್ನು ನಿಯಂತ್ರಿಸಬಹುದು.
9. ಕೆಲವು ತೋಟಗಳಲ್ಲಿ ಅದರಲ್ಲೂ ಮುಖ್ಯವಾಗಿ ಸಿಲ್ವರ್ ಮರಗಳ ಮೇಲೆ ಹಬ್ಬಿಸಿದ ಬಳ್ಳಿಗಳಲ್ಲಿ ಗೆದ್ದಲಿನ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ಕಂಡುಬರುತ್ತಿದೆ. ಇದರ ಹತೋಟಿಗೆ ಪ್ರತಿ ಲೀ. ನೀರಿಗೆ 2.0 ಮಿ.ಲಿ. ಕ್ಲೋರೋಪೈರಿಫಾಸ್ ಎಂಬ ಕೀಟನಾಶಕವನ್ನು ಬೆರಸಿ ಈ ದ್ರಾವಣವನ್ನು ಸಿಲ್ವರ್ ಮರದ ಕಾಂಡಕ್ಕೆ ತಗಲುವಂತೆ ಸಿಂಪಡಿಸಬೇಕು ಮತ್ತು ಬುಡಕ್ಕೆ ಸುರಿಯಬೇಕು.
10. ಸಾಮಾನ್ಯವಾಗಿ ಕಾಳು ಮೆಣಸು ಬೆಳೆಯಲ್ಲಿ ನಾಲ್ಕು ಹಂತಗಳಿವೆ. ಅದರಲ್ಲಿ ಹೂ ಬಿಡುವ ಮುನ್ನ or Pre Flowering, Berry Formation, Berry Development and Berry Maturity ಆಯಾ ಹಂತಕ್ಕೆ ತಕ್ಕಂತೆ ಪೋಷಕಾಂಶಗಳ ನಿರ್ವಹಣೆಯನ್ನು Foliar Spray ಹಾಗು Soil Application ಗಳನ್ನು ಮಾಡಿಕೊಂಡರೆ ಉತ್ತಮ ಇಳುವರಿಯ ಜೊತೆಗೆ ಆರೋಗ್ಯವಂತ ಬೆಳೆಯನ್ನು ಬೆಳೆಯಬಹುದು
- ವಿಜ್ಞಾನಿಗಳು ಮತ್ತು ತೋಟಗಾರಿಕಾ ಸಲಹೆಗಾರರು
Black pepper harvest is over. Summer has started. So now the biggest challenge is to protect pepper vines. Let’s take a look at the steps to be taken for it.